ಚಂಡೀಗಢ(ಹರಿಯಾಣ): ಉತ್ತರದ ರಾಜ್ಯ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಕಿಂಗ್ ಮೇಕರ್ ಸ್ಥಾನದಲ್ಲಿರುವ ಜನನಾಯಕ ಜನತಾ ಪಾರ್ಟಿ(ಜೆಜೆಪಿ) ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ಆಯೋಜಿಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದ್ರ ನಡುವೆ, 40 ಕ್ಷೇತ್ರಗಳನ್ನು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸರ್ಕಾರ ರಚನೆಗೆ ರಾಜ್ಯಪಾಲರ ಮುಂದೆ ಮನವಿ ಮಾಡುವ ಸಾಧ್ಯತೆ ಇದೆ.
ಹರಿಯಾಣದಲ್ಲಿ 10 ಸ್ಥಾನಗಳನ್ನು ಜಯಿಸಿರುವ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಮುಖ್ಯಸ್ಥ ದುಶ್ಯಂತ್ ಚೌಟಾಲ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ವೇಳೆ ಜನನಾಯಕ ಜನತಾ ಪಾರ್ಟಿ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ್ರೆ ಸಿಎಂ ಸ್ಥಾನಕ್ಕೆ ಪಟ್ಟುಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್ ಜೊತೆ ಕೈಜೋಡಿಸಿದರೆ ಸರ್ಕಾರ ರಚನೆ ಅಸಾಧ್ಯ ಮತ್ತು ಪಕ್ಷೇತರರ ಬೆಂಬಲ ಅಗತ್ಯವಿದೆ.
ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಎಲ್ಲ ಶಾಸಕರ ಸಭೆ ನಡೆಯಲಿದ್ದು, ಮುಂದಿನ ನಡೆ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಂಜೆಯ ಸುದ್ದಿಗೋಷ್ಠಿಯಲ್ಲಿ ಜೆಜೆಪಿ ತನ್ನ ನಿಲುವನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ.
ಸಿಎಂ ಖಟ್ಟರ್ ದೆಹಲಿಯತ್ತ ದೌಡು:
ಇನ್ನೊಂದೆಡೆ ಸರ್ಕಾರ ರಚನೆಗೆ ಬಿಜೆಪಿ ಭರದ ತಯಾರಿ ನಡೆಸುತ್ತಿದ್ದು, ಹಾಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ವರಿಷ್ಠರ ಭೇಟಿಗೆ ದೆಹಲಿಯತ್ತ ಪ್ರಯಾಣಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿದ್ದಾರೆ. ಹಾಗೂ ಹರಿಯಾಣ ಬಿಜೆಪಿ ಉಸ್ತುವಾರಿ ಅನಿಲ್ ಜೈನ್ ಜೊತೆ ಖಟ್ಟರ್ ಮುಂದಿನ ನಡೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
-
#Haryana CM ML Khattar meets Bharatiya Janata Party Working President JP Nadda in Delhi. pic.twitter.com/rQaFD1sebj
— ANI (@ANI) October 25, 2019 " class="align-text-top noRightClick twitterSection" data="
">#Haryana CM ML Khattar meets Bharatiya Janata Party Working President JP Nadda in Delhi. pic.twitter.com/rQaFD1sebj
— ANI (@ANI) October 25, 2019#Haryana CM ML Khattar meets Bharatiya Janata Party Working President JP Nadda in Delhi. pic.twitter.com/rQaFD1sebj
— ANI (@ANI) October 25, 2019