ETV Bharat / bharat

ಜನ್​ ಧನ್​ ಯೋಜನೆ ಬಡತನ ನಿವಾರಣಾ ಉಪಕ್ರಮಗಳಿಗೆ ಅಡಿಪಾಯವಾಗಿದೆ: ಪ್ರಧಾನಿ ಮೋದಿ

ಜನ್​ ಧನ್​ ಯೋಜನೆಗೆ ಆರು ವರ್ಷ ಪೂರ್ಣಗೊಂಡಿದ್ದು, ಯೋಜನೆಯ ಮೂಲಕ ನಡೆದ ಉಪಯೋಗಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಜನ ಧನ್​ ಯೋಜನೆಗೆ ಆರು ವರ್ಷ ಪೂರ್ಣ
ಜನ ಧನ್​ ಯೋಜನೆಗೆ ಆರು ವರ್ಷ ಪೂರ್ಣ
author img

By

Published : Aug 28, 2020, 12:14 PM IST

ನವದೆಹಲಿ: 'ಜನ್​​ ಧನ್' ಯೋಜನೆಯು "ಗೇಮ್​ ಚೇಂಜರ್​​" ಮತ್ತು ಅನೇಕ ಬಡತನ ನಿವಾರಣಾ ಉಪಕ್ರಮಗಳಿಗೆ ಅಡಿಪಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ಜನ್​ ಧನ್' ಯೋಜನೆಯ ಆರನೇ ವಾರ್ಷಿಕೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ. "2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಸರ್ಕಾರದ ಮೊದಲ ಪ್ರಮುಖ ಯೋಜನೆಗಳಲ್ಲಿ ಇದೂ ಒಂದಾಗಿದೆ. ಇದರ ಅಡಿಯಲ್ಲಿ ಕೋಟ್ಯಂತರ ಜನರ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಆರು ವರ್ಷಗಳ ಹಿಂದೆ ಬ್ಯಾಂಕಿಂಗ್ ಮಾಡುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಪ್ರಾರಂಭಿಸಲಾಯಿತು. ಈ ಉಪಕ್ರಮವು ಗೇಮ್​ ಚೇಂಜರ್​ ಆಗಿದೆ. ಅನೇಕ ಬಡತನ ನಿವಾರಣಾ ಉಪಕ್ರಮಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತಿದೆ. ಕೋಟ್ಯಂತರ ಜನರಿಗೆ ಪ್ರಯೋಜನವಾಗಿದೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಜನ ಧನ್​ ಯೋಜನೆಗೆ ಆರು ವರ್ಷ ಪೂರ್ಣ
ಜನ್​ ಧನ್​ ಯೋಜನೆಗೆ ಆರು ವರ್ಷ ಪೂರ್ಣ

"ಪ್ರಧಾನಮಂತ್ರಿ ಜನ್​​ ಧನ್ ಯೋಜನೆಗೆ ಧನ್ಯವಾದಗಳು, ಹಲವಾರು ಕುಟುಂಬಗಳ ಭವಿಷ್ಯವು ಸುರಕ್ಷಿತವಾಗಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಗ್ರಾಮೀಣ ಪ್ರದೇಶದಿಂದ ಬಂದವರು ಮತ್ತು ಮಹಿಳೆಯರಾಗಿದ್ದಾರೆ. ಪಿಎಂ-ಜೆಡಿವೈ ಯಶಸ್ವಿಯಾಗಲು ದಣಿವರಿಯಿಲ್ಲದೆ ಶ್ರಮಿಸಿದ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ. #6ಜನ್​ ಧನ್ ಯೋಜನೆ" ಎಂದು ಟ್ವೀಟ್​​​ನಲ್ಲಿ ಬರೆದುಕೊಂಡಿದ್ದಾರೆ.

ಇದುವರೆಗೆ 40 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಶೇ. 63ಕ್ಕೂ ಹೆಚ್ಚು ಫಲಾನುಭವಿಗಳು ಗ್ರಾಮೀಣ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಅವರಲ್ಲಿ ಶೇ. 55ಕ್ಕಿಂತ ಹೆಚ್ಚು ಮಹಿಳೆಯರು ಎಂದು ಸೂಚಿಸುವ ಗ್ರಾಫಿಕ್ಸ್​ ಚಿತ್ರವನ್ನು ಟ್ವೀಟ್​ನೊಂದಿಗೆ ಲಗತ್ತಿಸಿದ್ದಾರೆ.

ಈ ಯೋಜನೆಯಿಂದಾಗಿ ಅಗತ್ಯವಿರುವವರಿಗೆ ಕಲ್ಯಾಣ ಸೌಲಭ್ಯಗಳನ್ನು ನೇರವಾಗಿ ವರ್ಗಾಯಿಸಲು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.