ETV Bharat / bharat

14 ವರ್ಷ ಇದ್ದಾಗಲೇ ಉಗ್ರರ ಹಿಮ್ಮೆಟ್ಟಿಸಿದ ಧೀರ... ಇರ್ಫಾನ್​ ಶೌರ್ಯಕ್ಕೆ ಪ್ರತಿಷ್ಠಿತ ಪುರಸ್ಕಾರ - ಉಗ್ರರು

14ನೇ ವಯಸ್ಸಿನಲ್ಲಿ ಉಗ್ರರ ವಿರುದ್ಧ ಹೋರಾಡಿದ್ದ ಇರ್ಫಾನ್​ ರಂಜಾನ್​ ಶೇಖ್​ರಿಗೆ ಇಂದು ರಾಷ್ಟ್ರಪತಿ ಶೌರ್ಯ ಚಕ್ರ ಪುರಸ್ಕಾರ ನೀಡಿ ಗೌರವಿಸಿದರು.

ಉಗ್ರರ ವಿರುದ್ಧ ಹೋರಾಡಿದ್ದ ಇರ್ಫಾನ್​ ರಂಜಾನ್​ ಶೇಖ್​ರಿಗೆ ರಾಷ್ಟ್ರಪತಿಗಳು ಶೌರ್ಯ ಚಕ್ರ ಪುರಸ್ಕಾರ ನೀಡಿದರು
author img

By

Published : Mar 19, 2019, 8:51 PM IST

ನವದೆಹಲಿ: ಇರ್ಫಾನ್​ ರಂಜಾನ್​ ಶೇಖ್​, 2017ರಲ್ಲಿ ಈತ ಕೇವಲ 14 ವರ್ಷದ ಬಾಲಕ. ಅಂದು ಆತ ತೋರಿದ ಶೌರ್ಯ , ಸಾಹಸದಿಂದ ಇಂದು ಶೌರ್ಯ ಚಕ್ರ ಪುರಸ್ಕಾರ ಅರಸಿ ಬಂದಿದೆ. ರಾಷ್ಟ್ರಪತಿಗಳಿಂದ ಶ್ರೇಷ್ಠ ಪುರಸ್ಕಾರ ಸ್ವೀಕರಿಸುವಾಗ ಅವರಲ್ಲಿ ಹೆಮ್ಮೆ ಪ್ರಕಾಶಿಸುತ್ತಿತ್ತು.

  • #WATCH President Ram Nath Kovind confers Shaurya Chakra award upon Irfan Ramzan Sheikh of Jammu & Kashmir, for foiling an attack by three terrorists on his house in 2017 when he was 14 years old. pic.twitter.com/on45WKguLX

    — ANI (@ANI) March 19, 2019 " class="align-text-top noRightClick twitterSection" data=" ">

ಅಂದು ಆಗಿದ್ದೇನು?

2017 ಅಕ್ಟೋಬರ್ ತಿಂಗಳ ಒಂದು ದಿನ ಜಮ್ಮು ಮತ್ತು ಕಾಶ್ಮೀರದಲ್ಲಿನ ಇರ್ಫಾನ್​ ಮನೆಯ ಮುಂದೆ ದೊಡ್ಡದಾದ ಶಬ್ದ ಕೇಳಿಸಿತ್ತು. ಏನದು ಎಂದು ನೋಡಲು ಮನೆಗೆ ಬಾಗಿಲು ತೆರೆದ ಇರ್ಫಾನ್​ ಎದುರು ಮೂವರು ಸಶಸ್ತ್ರಧಾರಿ ಉಗ್ರರು ರಕ್ಕಸರಂತೆ ನಿಂತಿದ್ದರು. ಅವರ ಬಳಿಯಿದ್ದ ಭಾರಿ ಪ್ರಮಾಣದ ರೈಫಲ್​ಗಳು, ಗ್ರನೇಡ್​ಗಳನ್ನು ಆ ವಯಸ್ಸಿನಲ್ಲಿ ಬೇರೆ ಯಾರಾದರೂ ಕಂಡಿದ್ದರೆ ಅಲ್ಲೆ ಪ್ರಜ್ಞೆ ತಪ್ಪುತ್ತಿದ್ದರು. ಆದರೆ ಇರ್ಫಾನ್​ ಯಾವುದನ್ನೂ ಲೆಕ್ಕಿಸದೇ ಧೈರ್ಯದಿಂದ ಉಗ್ರರ ಮೇಲೆ ಎರಗಿದ್ದರು.

  • President Kovind presents Shaurya Chakra to Irfan Ramzan Sheikh. He exhibited courage and maturity and fought off militants, safeguarding the life of his father and other family members in Jammu & Kashmir pic.twitter.com/FVnWkOaOja

    — President of India (@rashtrapatibhvn) March 19, 2019 " class="align-text-top noRightClick twitterSection" data=" ">

ರಾಜಕೀಯ ಹೋರಾಟಗಾರರಾಗಿದ್ದ ಇರ್ಫಾನ್​ ತಂದೆ ಮೊಹಮ್ಮದ್​ ರಂಜಾನ್​ ಶೇಖ್​ರನ್ನು ಕೊಲ್ಲಲೆಂದೇ ಅಂದು ರಾತ್ರಿ ಉಗ್ರರು ಮನೆಗೆ ನುಗ್ಗಿದ್ದರು. ತಂದೆಗೆ ಅಪಾಯವಾಗಬಾರದೆಂದು ಇರ್ಫಾನ್​ ಉಗ್ರರನ್ನು ಬಾಗಿಲ ಬಳಿಯೇ ತಡೆದು , ಓಡಿಸಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದರು. ಉಗ್ರರು ನಿರಂತರವಾಗಿ ಗುಂಡಿನ ದಾಳಿಗೆ ಮುಂದಾದಾಗ ಇರ್ಫಾನ್​ ತಂದೆ ರಂಜಾನ್​ ಸಹ ಉಗ್ರರ ಮೇಲೆರಗಿ ಹೋರಾಡಿದ್ದರು. ಆದರೆ ಹೊಡೆದಾಟದಲ್ಲಿ ರಂಜಾನ್ ಗಂಭೀರವಾಗಿ ಗಾಯಗೊಂಡಿದ್ದರು. ಇರ್ಫಾನ್​ ನಡೆಸಿದ ದಾಳಿಗೆ ಓರ್ವ ಉಗ್ರ ಕೂಡ ಗಾಯಗೊಂಡಿದ್ದ.

ಇದಾದ ನಂತರ ಇರ್ಫಾನ್ ಸ್ಥಳೀಯರಿಗೆ ಹೀರೋ ಆಗಿದ್ದಾರೆ. ಅವರ ಧೈರ್ಯ, ಸಾಹಸದ ಕತೆ ಎಲ್ಲೆಡೆ ಹರಡಿತು. ಇಂದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ, ರಾಷ್ಟ್ರಪತಿಗಳಿಂದ ಶೌರ್ಯ ಚಕ್ರ ಸ್ವೀಕರಿಸಿ, ಯುವಕರಿಗೆ ಮಾದರಿ ಎನಿಸಿದರು.

Intro:Body:

14 ವರ್ಷ ಇದ್ದಾಗಲೇ ಉಗ್ರರ ಹಿಮ್ಮೆಟ್ಟಿಸಿದ ಧೀರ... ಇರ್ಫಾನ್​ ಶೌರ್ಯಕ್ಕೆ ಪ್ರತಿಷ್ಠಿತ ಪುರಸ್ಕಾರ 

Jammu and Kashmir teenager awarded Shaurya Chakra for foiling terror attack

ನವದೆಹಲಿ:  ಇರ್ಫಾನ್​ ರಂಜಾನ್​ ಶೇಖ್​, 2017ರಲ್ಲಿ ಈತ ಕೇವಲ 14 ವರ್ಷದ ಬಾಲಕ. ಅಂದು ಆತ ತೋರಿದ ಶೌರ್ಯ , ಸಾಹಸದಿಂದ ಇಂದು ಶೌರ್ಯ ಚಕ್ರ ಪುರಸ್ಕಾರ ಅರಸಿ ಬಂದಿದೆ. ರಾಷ್ಟ್ರಪತಿಗಳಿಂದ ಶ್ರೇಷ್ಠ ಪುರಸ್ಕಾರ ಸ್ವೀಕರಿಸುವಾಗ ಅವರಲ್ಲಿ ಹೆಮ್ಮೆ ಪ್ರಕಾಶಿಸುತ್ತಿತ್ತು.

ಅಂದು ಆಗಿದ್ದೇನು?

2017 ಅಕ್ಟೋಬರ್ ತಿಂಗಳ  ಒಂದು ದಿನ ಜಮ್ಮು ಮತ್ತು ಕಾಶ್ಮೀರದಲ್ಲಿನ ಇರ್ಫಾನ್​ ಮನೆಯ ಮುಂದೆ ದೊಡ್ಡದಾದ ಶಬ್ದ ಕೇಳಿಸಿತ್ತು. ಏನದು ಎಂದು  ನೋಡಲು ಮನೆಗೆ ಬಾಗಿಲು ತೆರೆದ ಇರ್ಫಾನ್​ ಎದುರು ಮೂವರು ಸಶಸ್ತ್ರಧಾರಿ ಉಗ್ರರು ರಕ್ಕಸರಂತೆ ನಿಂತಿದ್ದರು. ಅವರ ಬಳಿಯಿದ್ದ ಭಾರಿ ಪ್ರಮಾಣದ ರೈಫಲ್​ಗಳು, ಗ್ರನೇಡ್​ಗಳನ್ನು ಆ ವಯಸ್ಸಿನಲ್ಲಿ ಬೇರೆ ಯಾರಾದರೂ ಕಂಡಿದ್ದರೆ ಅಲ್ಲೆ ಪ್ರಜ್ಞೆ ತಪ್ಪುತ್ತಿದ್ದರು. ಆದರೆ ಇರ್ಫಾನ್​ ಯಾವುದನ್ನೂ ಲೆಕ್ಕಿಸದೇ ಧೈರ್ಯದಿಂದ ಉಗ್ರರ ಮೇಲೆ ಎರಗಿದ್ದರು. 

ರಾಜಕೀಯ ಹೋರಾಟಗಾರರಾಗಿದ್ದ ಇರ್ಫಾನ್​ ತಂದೆ ಮೊಹಮ್ಮದ್​ ರಂಜಾನ್​ ಶೇಖ್​ರನ್ನು ಕೊಲ್ಲಲೆಂದೇ ಅಂದು ರಾತ್ರಿ ಉಗ್ರರು ಮನೆಗೆ ನುಗ್ಗಿದ್ದರು. ತಂದೆಗೆ ಅಪಾಯವಾಗಬಾರದೆಂದು  ಇರ್ಫಾನ್​ ಉಗ್ರರನ್ನು ಬಾಗಿಲ ಬಳಿಯೇ ತಡೆದು , ಓಡಿಸಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದರು. ಉಗ್ರರು ನಿರಂತರವಾಗಿ ಗುಂಡಿನ ದಾಳಿಗೆ ಮುಂದಾದಾಗ ಇರ್ಫಾನ್​ ತಂದೆ ರಂಜಾನ್​ ಸಹ ಉಗ್ರರ ಮೇಲೆರಗಿ ಹೋರಾಡಿದ್ದರು. ಆದರೆ ಹೊಡೆದಾಟದಲ್ಲಿ ರಂಜಾನ್ ಗಂಭೀರವಾಗಿ ಗಾಯಗೊಂಡಿದ್ದರು. ಇರ್ಫಾನ್​  ನಡೆಸಿದ ದಾಳಿಗೆ ಓರ್ವ ಉಗ್ರ ಕೂಡ ಗಾಯಗೊಂಡಿದ್ದ. 

ಇದಾದ ನಂತರ ಇರ್ಫಾನ್ ಸ್ಥಳೀಯರಿಗೆ ಹೀರೋ ಆಗಿದ್ದಾರೆ. ಅವರ ಧೈರ್ಯ, ಸಾಹಸದ ಕತೆ ಎಲ್ಲೆಡೆ ಹರಡಿತು. ಇಂದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ, ರಾಷ್ಟ್ರಪತಿಗಳಿಂದ ಶೌರ್ಯ ಚಕ್ರ ಸ್ವೀಕರಿಸಿ, ಯುವಕರಿಗೆ ಮಾದರಿ ಎನಿಸಿದರು.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.