ETV Bharat / bharat

ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸೇರಲಿವೆ ಜಮ್ಮು-ಕಾಶ್ಮೀರದ ಆರು ಮೊಘಲ್ ಉದ್ಯಾನಗಳು

ಜಮ್ಮು ಮತ್ತು ಕಾಶ್ಮೀರದ ಎಲ್​-ಜಿ ಯನ್ನು ಅಭಿವೃದ್ಧಿ ಮನುಷ್ಯ ಎಂದು ಕರೆಯಲಾಗುತ್ತಿದೆ.ಇಲ್ಲಿನ ಆಡಳಿತ ವಿಭಾಗವು ಮೊಘಲ್ ಯುಗದ ಉದ್ಯಾನಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ. ನಿಶಾತ್, ಶಾಲಿಮಾರ್, ಚೆಶ್ಮಾಶಾಹಿ, ಪರಿ ಮಹಲ್ ಸೇರಿದಂತೆ ಅಚಬಲ್ ಮತ್ತು ವೀರಿನಾಗ್ ಆರು ಮೊಘಲ್ ಉದ್ಯಾನಗಳ ನವೀಕರಣ ಮತ್ತು ಪುನರ್​ಸ್ಥಾಪನೆಗೆ ಆದೇಶಿಸಲಾಗಿತ್ತು. ಈ ನಾಲ್ಕು ಉದ್ಯಾನಗಳು ಶ್ರೀನಗರ ನಗರದಲ್ಲಿದ್ದರೆ, ಎರಡು ಅನಂತ್‌ನಾಗ್ ಜಿಲ್ಲೆಯಲ್ಲಿವೆ.

ಜಮ್ಮು-ಕಾಶ್ಮೀರದ ಆರು ಮೊಘಲ್ ಉದ್ಯಾನಗಳು
ಜಮ್ಮು-ಕಾಶ್ಮೀರದ ಆರು ಮೊಘಲ್ ಉದ್ಯಾನಗಳು
author img

By

Published : Sep 8, 2020, 12:19 AM IST

ಶ್ರೀನಗರ: ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಉದ್ದೇಶದಿಂದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಕಾಶ್ಮೀರ ಕಣಿವೆಯ ಆರು ಮೊಘಲ್ ಉದ್ಯಾನಗಳಲ್ಲಿ ದಸ್ತಾವೇಜನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಎಲ್​-ಜಿ ಯನ್ನು ಅಭಿವೃದ್ಧಿ ಮನುಷ್ಯ ಎಂದು ಕರೆಯಲಾಗುತ್ತಿದೆ.ಇಲ್ಲಿನ ಆಡಳಿತ ವಿಭಾಗವು ಮೊಘಲ್ ಯುಗದ ಉದ್ಯಾನಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ. ನಿಶಾತ್, ಶಾಲಿಮಾರ್, ಚೆಶ್ಮಾಶಾಹಿ, ಪರಿ ಮಹಲ್ ಸೇರಿದಂತೆ ಅಚಬಲ್ ಮತ್ತು ವೀರಿನಾಗ್ ಆರು ಮೊಘಲ್ ಉದ್ಯಾನಗಳ ನವೀಕರಣ ಮತ್ತು ಪುನರ್​ಸ್ಥಾಪನೆಗೆ ಆದೇಶಿಸಲಾಗಿತ್ತು. ಈ ನಾಲ್ಕು ಉದ್ಯಾನಗಳು ಶ್ರೀನಗರ ನಗರದಲ್ಲಿದ್ದರೆ, ಎರಡು ಅನಂತ್‌ನಾಗ್ ಜಿಲ್ಲೆಯಲ್ಲಿವೆ ಜಮ್ಮು ಮತ್ತು ಕಾಶ್ಮೀರದ ಹೂ ಕೃಷಿ ಇಲಾಖೆಯ ನಿರ್ದೇಶಕ ಫಾರೂಕ್ ಅಹ್ಮದ್ ರಾಥರ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಪರಿಚಿತ ವೃತ್ತಿಪರರೊಂದಿಗೆ ಸಮಾಲೋಚಿಸಿ ಹೂ ಕೃಷಿ ಇಲಾಖೆ 2005-2011ರ ನಡುವೆ ಜಮ್ಮು ಮತ್ತು ಕಾಶ್ಮೀರದ ಎಂಟು ಉದ್ಯಾನಗಳನ್ನು ಪುನರ್​ ನಿರ್ಮಾಣ ಮಾಡಿದೆ.ಮೊಘಲ್ ಉದ್ಯಾನಗಳ ಪಾರಂಪರಿಕ ಮೌಲ್ಯವನ್ನು ನೋಡಲು 2011 ರಲ್ಲಿ ಯುನೆಸ್ಕೋದ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್​ನವರು ಭೇಟಿ ನೀಡಿದ್ದರು. ಇದಾದ ನಂತರ ಈ ಆರು ಉದ್ಯಾನಗಳು ಯುನೆಸ್ಕೋ ಮಂಡಿಸಿರುವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿವೆ. ಇಲ್ಲಿನ ಆಡಳಿತವು ತಜ್ಞರೊಂದಿಗೆ ಸಮಾಲೋಚಿಸಿ ದಸ್ತಾವೇಜನ್ನು ಸಿದ್ಧಪಡಿಸುತ್ತಿದೆ. ನಂತರ ಈ ದಾಖಲೆಯನ್ನು ಯುನೆಸ್ಕೋಗೆ ನೀಡಲಾಗುವುದು ಎಂದು ಹೇಳಿದರು.

ಈ ಉದ್ಯಾನಗಳನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಿದರೆ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಇದು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.