ನವದೆಹಲಿ: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿಯ ಜೊತೆಗೆ ಭಾರತದಲ್ಲಿ ಎರಡು ನೂತನ ಕೇಂದ್ರಾಡಳಿತ ಪ್ರದೇಶಗಳೂ ಹುಟ್ಟಿಕೊಂಡಿದ್ದವು. ಇಂದಿನಿಂದ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಅಧಿಕೃತವಾಗಿ ಕೇಂದ್ರಾಡಳಿತ ಪಟ್ಟಿಗೆ ಸೇರ್ಪಡೆಯಾಗಿವೆ.
ಆರ್ಟಿಕಲ್ 370 ವಿಧಿವಶದ ಬಳಿಕ ಕಾಶ್ಮೀರದಲ್ಲಿ ಸೈಟ್ ಬೆಲೆ ಎಷ್ಟಾಗಿದೆ ಗೊತ್ತೆ?
ಭಾರತದ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸರ್ದಾರ ವಲ್ಲಭಭಾಯಿ ಪಟೇಲರ 144ನೇ ಜಯಂತಿಯಂದೇ ನೂತನ ಕೇಂದ್ರಾಡಳಿತ ಪ್ರದೇಶಗಳ ಜನನವಾಗಿದೆ.
ವಿಶೇಷ ಸ್ಥಾನಮಾನ ರದ್ಧತಿಗೊಂಡ 86 ದಿನದ ಬಳಿಕ ಜಮ್ಮು ಕಾಶ್ಮೀರ ರಾಜ್ಯಗಳ ಪಟ್ಟಿಯಿಂದ ಹೊರಬಿದ್ದಿದೆ. ನೂತನ ಕೇಂದ್ರಾಡಳಿತ ಪ್ರದೇಶವನ್ನು ಲೆಫ್ಟಿನೆಂಟ್ ಗವರ್ನರ್ ನೋಡಿಕೊಳ್ಳಲಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಗಿರೀಶ್ ಚಂದ್ರ ಹಾಗೂ ಲಡಾಖ್ಗೆ ಆರ್.ಕೆ.ಮಾಥುರ್ ಲೆಫ್ಟಿನೆಂಟ್ ಗವರ್ನರ್ಗಳಾಗಿ ನೇಮಕವಾಗಿದ್ದಾರೆ. ಇವರಿಬ್ಬರೂ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಚಿಂತೆ ಬಿಡಿ, ಕಾಶ್ಮೀರ ಭೇಟಿಗೆ ಇಂದೇ ಪ್ಲಾನ್ ಮಾಡಿ...!
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯವೊಂದು ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟಿದೆ. ಈ ಮೂಲಕ ಭಾರತದ ಒಟ್ಟಾರೆ ರಾಜ್ಯಗಳ ಸಂಖ್ಯೆ 28ಕ್ಕೆ ಇಳಿಕೆಯಾಗಿದ್ದು, ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಜಮ್ಮು ಕಾಶ್ಮೀರ ಪುದುಚೇರಿ ಮಾದರಿಯ ಶಾಸಕಾಂಗವನ್ನು ಹೊಂದಲಿದ್ದು, ಲಡಾಖ್ಗೆ ಶಾಸಕಾಂಗ ಇರುವುದಿಲ್ಲ. ಚಂಡೀಗಢದಂತೆ ಲಡಾಖ್ ಸಹ ಶಾಸಕಾಂಗ ರಹಿತ ಕೇಂದ್ರಾಡಳಿತ ಪ್ರದೇಶವಾಗಲಿದೆ.
ಆರ್ಟಿಕಲ್ 370 ರದ್ಧತಿಯಿಂದ ಕಾಶ್ಮೀರಿ ಟ್ರೇಡರ್ಸ್ಗೆ ₹10,000 ಕೋಟಿ ಲಾಸ್!
ಇಂದಿನಿಂದ ಜಮ್ಮು ಕಾಶ್ಮೀರದ ಪೊಲೀಸ್ ಹಾಗೂ ಕಾನೂನು ವ್ಯವಸ್ಥೆಯ ಮೇಲೆ ಕೇಂದ್ರ ಸಂಪೂರ್ಣ ಹಿಡಿತ ಹೊಂದಿರಲಿದೆ. ಆದರೆ ಸ್ಥಳದ ಮೇಲಿನ ಹಿಡಿತ ಆಯ್ಕೆಯಾಗುವ ಸರ್ಕಾರಕ್ಕಿರಲಿದೆ. ಲಡಾಖ್ನಲ್ಲಿ ಶಾಸಕಾಂಗ ಇಲ್ಲದ ಕಾರಣ ಇಲ್ಲಿ ಕೇಂದ್ರ ಸಂಪೂರ್ಣ ಅಧಿಕಾರವನ್ನು ಹೊಂದಿರಲಿದೆ.
ಮಹತ್ವದ ಬೆಳವಣಿಗೆಯಲ್ಲಿ ಆಗಸ್ಟ್ 5ರಂದು ಮೋದಿ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಇದೇ ವೇಳೆ ಭದ್ರತೆಯನ್ನು ಉನ್ನತಮಟ್ಟಕ್ಕೆ ಹೆಚ್ಚಿಸಿ ಯಾವುದೇ ಹಾನಿಯಾಗದಂತೆ ನೋಡಿಕೊಂಡಿತ್ತು. ಸದ್ಯ ಭದ್ರತೆಯನ್ನು ಬಹುತೇಕ ಹಿಂಪಡೆಯಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ಕಾಶ್ಮೀರಕ್ಕೆ ಯುರೋಪ್ ಸಂಸದರ ನಿಯೋಗ: ಆರ್ಟಿಕಲ್ 370, ಭಾರತ ಪರ ಧ್ವನಿ... ಉಗ್ರರ ವಿರುದ್ಧ ಗುಡುಗು