ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ಸರ್ಕಾರವೂ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರಿ ನೌಕರರನ್ನು ನಿವೃತ್ತಿ ಮಾಡಲು ಅನುಮತಿಸುವ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡಿತ್ತು. ಇದಾದ ಬಳಿಕ ಶಾಲಾ ಶಿಕ್ಷಣ ಮಂಡಳಿ ಮೊದಲನೆಯ ನಿವೃತ್ತಿ ಆದೇಶ ಹೊರಡಿಸಿದೆ.
ಈ ತಿದ್ದುಪಡಿಯ ಪ್ರಕಾರ, ಸರ್ಕಾರವೂ 22 ವರ್ಷ ಸೇವೆಯನ್ನು ಪೂರ್ಣಗೊಳಿಸಿದ ಅಥವಾ 48 ವರ್ಷ ಸೇವೆ ಸಲ್ಲಿಸಿರುವ ಸರ್ಕಾರಿ ನೌಕರರನ್ನು ಯಾವಾಗ ಬೇಕಾದ್ರೂ ಕೆಲಸದಿಂದ ತೆಗೆಯಬಹುದಾಗಿದೆ. ಕಳೆದ ತಿಂಗಳು ನಿಯಮಗಳಿಗೆ ತಿದ್ದುಪಡಿ ತರಲಾಗಿತ್ತು. ಅಧಿಕೃತ ಆದೇಶವನ್ನು 2020ರ ಅಕ್ಟೋಬರ್ 14ರಂದು ಹೊರಡಿಸಲಾಗಿತ್ತು.
ನಾಳೆ ಹೈದರಾಬಾದ್ ಪಾಲಿಕೆ ಚುನಾವಣೆ : ಮುತ್ತಿನ ನಗರಿ ಅಧಿಕಾರ ಯಾರ ಹೆಗಲಿಗೆ?
ಈ ಆದೇಶವನ್ನ ಹೊರಡಿಸಿದ ಬಳಿಕ, ಮೊದಲ ಬಾರಿಗೆ 22 ವರ್ಷ ಸೇವೆಯನ್ನು ಪೂರೈಸಿದ ಫಯಾಜ್ ಅಹ್ಮದ್ ಸಿರಾಜ್ ಅವರನ್ನು ನಿವೃತ್ತಿಗೊಳಿಸಲಾಗಿದೆ. ಜೆಕೆಬೋಸ್ ಅಧ್ಯಕ್ಷೆ ವೀಣಾ ಪಂಡಿತ ಈ ಆದೇಶ ಹೊರಡಿಸಿದ್ದಾರೆ. ಸಿರಾಜ್ ಡಿಸೆಂಬರ್ 1ರ ಮುಂಜಾನೆ ನಿವೃತ್ತರಾಗಲಿದ್ದಾರೆ.