ETV Bharat / bharat

ಚಂದ್ರಯಾನ-2ರ ಉಡಾವಣಾ ರಿಹರ್ಸಲ್​​ ಯಶಸ್ವಿ... ನಾಳೆ ನಭಕ್ಕೆ ಹಾರಲಿದೆ ನೌಕೆ! - undefined

ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ಚಂದ್ರಯಾನ-2 ಉಡಾವಣಾ ರಿಹರ್ಸಲ್​ಅನ್ನು ಇಸ್ರೋ ಶನಿವಾರ ಯಶಸ್ವಿಯಾಗಿ ಪೂರೈಸಿದೆ.

ಚಂದ್ರಯಾನ್ -2
author img

By

Published : Jul 21, 2019, 5:10 AM IST

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-2 ಉಡಾವಣೆಯ ರಿಹರ್ಸಲ್​ಅನ್ನು ಶನಿವಾರ ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಉಪಗ್ರಹ ನಾಳೆ ಉಡಾವಣೆಗೆ ಸಿದ್ಧವಾಗಿದೆ.

ಚಂದ್ರಯಾನ-2ರ ಉಡಾವಣಾ ರಿಹರ್ಸಲ್​​ ಯಶಸ್ವಿ

#GSLVMkIII-M1 / # ಚಂದ್ರಯನ-2 ಮಿಷನ್​ನ ಉಡಾವಣಾ ರಿಹರ್ಸಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅದರ ಕಾರ್ಯಕ್ಷಮತೆ​ ನಾರ್ಮಲ್​ ಆಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಈ ಮೂಲಕ ಇದೀಗ ಸ್ವದೇಶಿ ತಂತ್ರಜ್ಞಾನ ನಿರ್ಮಿತ ಚಂದ್ರಯಾನ-2 ಉಪಗ್ರಹ ಚಂದ್ರನ ಅಂಗಳಕ್ಕೆ ಹೋಗಲು ಸಜ್ಜಾಗಿದೆ.

ಜುಲೈ 15ರಂದು ಇಸ್ರೋದ ಈ ಮಹಾತ್ವಾಕಾಂಕ್ಷಿ ಚಂದ್ರಯಾನ-2 ಉಡಾವಣೆಗೆ ನಿರ್ಧರಿಸಲಾಗಿತ್ತು. ಆದರೆ ಉಡಾವಣೆಗೆ ಒಂದು ಗಂಟೆ ಮುನ್ನ ಉಪಗ್ರಹ ಹೊತ್ತ ರಾಕೆಟ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಕಾರಣ ಉಡಾವಣೆಯನ್ನ ಸ್ಥಗಿತಗೊಳಿಸಲಾಗಿತ್ತು.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೋ ಮಾಜಿ ಅಧ್ಯಕ್ಷ ಕಿರಣ್​ ಕುಮಾರ್​, ಆಗಸ್ಟ್​ 14ರಿಂದ ನಾವು ಚಂದ್ರನತ್ತ ಪ್ರಯಾಣ ಬೆಳೆಸಲು ಶುರು ಮಾಡುತ್ತೇವೆ. ಸೆಪ್ಟೆಂಬರ್​ನಲ್ಲಿ ನಮ್ಮ ಲ್ಯಾಂಡರ್​ ಚಂದ್ರನ ಮೇಲೆ ಇಳಿಯಲಿದೆ. ಈ ಹಿಂದೆ ಕಂಡುಬಂದ ತಾಂತ್ರಿಕ ದೋಷ ಸರಿಪಡಿಸಲಾಗಿದೆ. 22ನೇ ತಾರೀಖಿಗಾಗಿ ನಾವು ಎದುರು ನೋಡುತ್ತಿದ್ದೇವೆ. ಹಾಗೇ ಚಂದ್ರನ ಮೇಲೆ ಇಳಿಯಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ಸ್ವದೇಶಿ ತಂತ್ರಜ್ಞಾನ ನಿರ್ಮಿತ ಚಂದ್ರಯಾನ-2 ಆರ್ಬಿಟರ್, ರೋವರ್, ಲ್ಯಾಂಡರ್​ಗಳನ್ನ ಒಳಗೊಂಡಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ನಿರ್ಮಿತ ಈ ಉಪಗ್ರಹ ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಈ ಮಿಷನ್​​ ಮೂಲಕ ಚಂದ್ರನ ಅಂಗಳದಲ್ಲಿ ಉಪಗ್ರಹ ಇಳಿಸಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ. ಈ ವರ್ಷದ ಸೆಪ್ಟೆಂಬರ್ 6 ಅಥವಾ 7ರಂದು ಚಂದ್ರನ ಅಂಗಳಕ್ಕೆ ಈ ಉಪಗ್ರಹ ಕಾಲಿಡುವ ನಿರೀಕ್ಷೆಯಿದೆ.

Intro:Body:

Chandraya - 2

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.