ETV Bharat / bharat

ಇರಾಕ್‌ನಲ್ಲಿ ಮುಂದುವರಿದ ರಾಕೆಟ್‌ ದಾಳಿ: ಅಮೆರಿಕ ರಾಯಭಾರಿ ಕಚೇರಿ ಬಂದ್‌ ಮಾಡುವ ಎಚ್ಚರಿಕೆ - ಇರಾಕ್‌-ಅಮೆರಿಕ ಸಂಬಂಧ

ಇರಾಕ್‌ನಲ್ಲಿ ರಾಕೆಟ್‌ ದಾಳಿಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ದೇಶದ ಭದ್ರತೆಗೆ ಆದ್ಯತೆ ನೀಡದಿದ್ದರೆ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳ ರಾಯಭಾರಿ ಕಚೇರಿಗಳನ್ನು ಬಂದ್‌ ಮಾಡುವುದಾಗಿ ಇರಾಕ್‌ ಪ್ರಧಾನಿ ಮುಸ್ತಾಫ ಅಲ್‌ ಕಧಿಮಿ ಎಚ್ಚರಿಕೆ ನೀಡಿದ್ದಾರೆ.

Iraqi PM confirms US may close embassy if shelling continues
ಇರಾಕ್‌ನಲ್ಲಿ ಮುಂದುವರಿದ ರಾಕೆಟ್‌ ದಾಳಿ : ಅಮೆರಿಕ ರಾಯಭಾರಿ ಕಚೇರಿ ಬಂದ್‌ ಮಾಡುವ ಎಚ್ಚರಿಕೆ
author img

By

Published : Sep 30, 2020, 2:58 PM IST

ಬಾಗ್ದಾದ್‌: ಇರಾಕ್‌ ಮೇಲೆ ದಾಳಿ ಮಾಡಿದ್ರೆ ಬಾಗ್ದಾದ್‌ನಲ್ಲಿರುವ ಅಮೆರಿಕ ಸೇರಿದಂತೆ ಇತರೆ ಕೆಲ ದೇಶಗಳ ರಾಯಭಾರ ಕಚೇರಿಗಳನ್ನು ಬಂದ್‌ ಮಾಡುವುದಾಗಿ ಇರಾಕ್‌ ಪ್ರಧಾನಿ ಮುಸ್ತಾಫ ಅಲ್‌ ಕಧಿಮಿ ಎಚ್ಚರಿಕೆ ನೀಡಿದ್ದಾರೆ.

ಬಾಗ್ದಾದ್‌ ವಿಮಾನ ನಿಲ್ದಾಣದ ಮೇಲೆ ನಡೆಸಿರುವ ದಾಳಿ ಬಗ್ಗೆ ಕೂಡಲೇ ತನಿಖೆ ಆರಂಭಿಸುವಂತೆ ಈಗಾಗಲೇ ಇರಾಕ್‌ ಪ್ರಧಾನಿ ಆದೇಶಿಸಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ ಐವರು ನಾಗರಿಕರು ಮೃತಪಟ್ಟಿದ್ದರು.

ನಿನ್ನೆಯೂ ರಾಕೆಟ್‌ ದಾಳಿ ಮುಂದುವರಿದ್ದು. ಮಕ್ಕಳು ಸೇರಿ ಐವರು ಮೃತಪಟ್ಟಿದ್ದಾರೆ. ಕೆಲ ಸಂಸ್ಥೆಗಳ ಪಿತೂರಿಯಿಂದಲೇ ದಾಳಿಗಳು ನಡೆದಿವೆ. ಹೀಗಾಗಿ ಪ್ರಮುಖವಾಗಿ ಅಮೆರಿಕ ಸೇರಿದಂತೆ ಹಲವು ದೇಶಗಳ ರಾಯಭಾರಿ ಕಚೇರಿಗಳನ್ನು ಬಂದ್‌ ಮಾಡುವ ಕುರಿತು ಪ್ರಧಾನಿ ಕಧಿಮಿ, ತಮ್ಮ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಭದ್ರತೆಗೆ ಆದ್ಯತೆ ನೀಡದಿದ್ದಲ್ಲಿ ಅವರು ಇರಾಕ್‌ನಲ್ಲಿ ಕೆಲಸ ಮಾಡುವುದು ಬೇಡ ಎಂತಲೂ ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.