ಇರಾನ್: ಜನರಲ್ ಕಾಸೆಮ್ ಸೊಲೈಮಾನಿ ಹತ್ಯೆ ಮಾಡಿದ್ದಕ್ಕಾಗಿ ಅಮೆರಿಕ ಸರ್ಕಾರ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಉದ್ದೇಶಿಸಿದೆ.
ಹೇಗ್ನಲ್ಲಿರುವ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಇಸ್ಲಾಮಿಕ್ ಗಣರಾಜ್ಯ ಉದ್ದೇಶಿಸಿದೆ ಎಂದು ಇರಾನ್‌ನ ನ್ಯಾಯಾಂಗ ವಕ್ತಾರ ಘೋಲಮ್ ಹೋಸೇನ್ ಎಸ್ಮೇಲಿ ತಿಳಿಸಿದ್ದಾರೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಮಾಜಿ ಕುಡ್ಸ್ ಫೋರ್ಸ್ ಕಮಾಂಡರ್ ಸೊಲೈಮಾನಿ ಜನವರಿ 3 ರಂದು ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದರು.
ಹೀಗಾಗಿ ಸೊಲೈಮಾನಿಯನ್ನು ಹತ್ಯೆ ಮಾಡುವ ಮೂಲಕ ಅಮೆರಿಕ ಸೇನೆ 'ಭಯೋತ್ಪಾದಕ ಕೃತ್ಯ' ಎಸಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲದೇ ಡೊನಾಲ್ಡ್ ಟ್ರಂಪ್ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್ಮೇಲಿ ಹೇಳಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆಯಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.