ETV Bharat / bharat

ತಿರುಗಿಬಿದ್ದ ಇರಾನ್​​​, ಇರಾಕ್​ನ ಯುಎಸ್​ ಸೇನಾನೆಲೆಗಳ ಮೇಲೆ ಡಜನ್​ಗೂ ಹೆಚ್ಚು ಕ್ಷಿಪಣಿ ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟು ಜಗತ್ತಿನಾದ್ಯಂತ ಆತಂಕ ಸೃಷ್ಟಿಸುತ್ತಿದೆ. ಇರಾನ್ ಹಾಗೂ ಅಮೆರಿಕ ನಡುವಿನ ಬಿಕ್ಕಟ್ಟು ತಾರಕಕ್ಕೇರಿದೆ. ಪರಸ್ಪರ ಎಚ್ಚರಿಕೆ, ಆರೋಪಗಳು ಮಾಡುತ್ತಿದ್ದ ಉಭಯ ರಾಷ್ಟ್ರಗಳು ಈಗ ಒಂದೆಜ್ಜೆ ಮುಂದೆ ಇಟ್ಟಿವೆ. ಎರಡೂ ರಾಷ್ಟ್ರಗಳ ಮಧ್ಯೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಮಿಸೈಲ್​ ದಾಳಿ ಶುರುವಾಗಿದೆ.

Iran launches second series of rockets toward US targets in Iraq
ಇರಾಕ್​ನ ಯುಎಸ್​ ಸೇನಾನೆಲೆಗಳ ಮೇಲೆ ಡಜನ್​ಗೂ ಹೆಚ್ಚು ಕ್ಷಿಪಣಿ ದಾಳಿ
author img

By

Published : Jan 8, 2020, 8:07 AM IST

Updated : Jan 8, 2020, 8:49 AM IST

ವಾಷಿಂಗ್ಟನ್: ತನ್ನ ಸೇನಾ ನಾಯಕನನ್ನು ಕೊಂದ ಅಮೆರಿಕ ವಿರುದ್ಧ ಇರಾನ್ ತಿರುಗಿಬಿದ್ದಿದೆ. ಈಗಾಗಲೇ ಒಂದು ಡಜನ್​ಗೂ ಹೆಚ್ಚು ಮಿಸೈಲ್​ಗಳನ್ನು ಇರಾಕ್​ನಲ್ಲಿರುವ ಅಮೆರಿಕಾ ಸೇನೆಯ ಗುರಿಯಾಗಿಸಿ ದಾಳಿ ನಡೆಸಿದೆ. ಇರಾಕ್​ನಲ್ಲಿರುವ ಅಲ್​ ಅಸಾದ್​ ಹಾಗೂ ಇಬ್ರಿಲ್​ನಲ್ಲಿರುವ ಸೇನಾನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಸ್ಪಷ್ಟಪಡಿಸಿದೆ.

ಇರಾಕ್​ನ ಯುಎಸ್​ ಸೇನಾನೆಲೆಗಳ ಮೇಲೆ ಡಜನ್​ಗೂ ಹೆಚ್ಚು ಕ್ಷಿಪಣಿ ದಾಳಿ

ಬೆಳಗ್ಗೆ ಸುಮಾರು 5.30ರ (ಇಎಸ್​ಟಿ) ವೇಳೆಗೆ ಇರಾನ್​ ದಾಳಿ ನಡೆಸಿದೆ. ಅಮೆರಿಕಾ ಸೇನಾ ನೆಲೆಗಳಿಂದ ಇನ್ನೂ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ. ಇದೇ ಕಾರಣದಿಂದ ಗಲ್ಫ್​ ರಾಷ್ಟ್ರಗಳಿಗೆ ಅಮೆರಿಕಾದಿಂದ ಹೊರಡುವ ವಿಮಾನಯಾನವನ್ನೂ ಕೂಡಾ ರದ್ದು ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಜೊತೆಗೆ ಇರಾನ್, ಇರಾಕ್​ ಹಾಘೂ ಗಲ್ಫ್​ ರಾಷ್ಟ್ರಗಳಿಂದ ಅಮೆರಿಕಾಗೆ ಬರುವ ವಿಮಾನಗಳಿಗೂ ಕೂಡಾ ನಿರ್ಬಂಧ ಹೇರಲಾಗಿದೆ.

ಇದಕ್ಕೆ ಪ್ರತಿಕ್ರಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನ್ಯಾಷನಲ್​ ಸೆಕ್ಯುರಿಟಿ ಟೀಮ್​ನೊಂದಿಗೆ ದಾಳಿಯ ವಿಚಾರವನ್ನು ಚರ್ಚಿಸಿದ್ದಾರೆ ಹಾಗೂ ಮುಂದಿನ ಕ್ರಮಗಳ ಬಗ್ಗೆ ಯೋಜನೆ ರೂಪಿಸಿದ್ದಾರೆ. ''ನಮಗೆ ಇರಾನ್​ ನಡೆಸಿರುವ ದಾಳಿಯ ಬಗ್ಗೆ ಅರಿವಿದೆ. ಅಧ್ಯಕ್ಷರು ಇರಾಕ್​ನಲ್ಲಿರುವ ಅಮೆರಿಕಾ ಸೇನೆಯ ಮುಂದಿನ ಕಾರ್ಯತಂತ್ರದ ಬಗ್ಗೆ ಯೋಚನೆ ನಡೆಸುತ್ತಿದ್ದಾರೆ'' ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸ್ಟೇಪಾನಿ ಗ್ರಿಶಮ್ ಸ್ಪಷ್ಟಪಡಿದ್ದಾರೆ. ಕೆಲವೊಂದು ಪಾಶ್ಚಾತ್ಯ ಮಾಧ್ಯಮಗಳ ಪ್ರಕಾರ ಸುಮಾರು 35 ರಾಕೆಟ್​ಗಳನ್ನು ಇರಾಕ್​ನ ಅಮೆರಿಕಾ ನೆಲೆಗಳನ್ನು ಗುರಿಯಾಗಿಸಿ ನಡೆಸಲಾಗಿದೆ.

ಇರಾನ್ ಪ್ರತಿದಾಳಿಯ ಎಚ್ಚರಿಕೆ ಬೆನ್ನಲ್ಲೇ ಅಮೆರಿಕಾ ಶ್ವೇತಭವನಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಶ್ವೇತಭವನದ ಸುತ್ತಮುತ್ತ ಕಟ್ಟೆಚ್ಚರ ವಹಿಸಿರುವ ಪೊಲೀಸರು ಚೆಕ್​ ಪಾಯಿಂಟ್​ಗಳನ್ನು ನಿರ್ಮಿಸಿ ಅನುಮಾನಾಸ್ಪದ ವಾಹನಗಳನ್ನು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

Intro:Body:

aerika 

Conclusion:
Last Updated : Jan 8, 2020, 8:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.