ETV Bharat / bharat

ವಿಶೇಷ ಲೇಖನ: ಚಬಹರ್‌ ರೈಲು ಯೋಜನೆಯಿಂದ ಭಾರತವನ್ನು ಕೈಬಿಟ್ಟ ಇರಾನ್..!

ಚಬಹರ್‌ ಬಂದರು ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇಂಧನ ಸಮೃದ್ಧ ರಾಷ್ಟ್ರ ಇರಾನ್‌ನ ದಕ್ಷಿಣ ಕರಾವಳಿಯಲ್ಲಿದೆ. ಇದು ಭಾರತದ ಪಶ್ಚಿಮ ಕರಾವಳಿಗೆ ಹತ್ತಿರದಲ್ಲಿದೆ. 2003 ರಿಂದ ಚಬಹರ್‌ ಒಪ್ಪಂದದ ಬಗ್ಗೆ ಭಾರತ ಇರಾನ್‌ನೊಂದಿಗೆ ಮಾತುಕತೆ ನಡೆಸಿತ್ತು. ಬಳಿಕ ಮೇ 2015 ರಲ್ಲಿ ಚಬಹರ್ ಬಂದರಿನ ಅಭಿವೃದ್ಧಿ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದವು.

author img

By

Published : Jul 15, 2020, 4:46 PM IST

ಚಬಹರ್‌ ರೈಲು ಯೋಜನೆಯಿಂದ ಭಾರತವನ್ನು ಕೈಬಿಟ್ಟ ಇರಾನ್

ಚಬಹರ್‌ ಬಂದರಿನಲ್ಲಿನ ರೈಲು ಯೋಜನೆಯಿಂದ ಇರಾನ್ ಭಾರತವನ್ನು ಕೈಬಿಟ್ಟಿದೆ. ಇದಲ್ಲದೆ, ಚೀನಾದೊಂದಿಗೆ 400 ಶತಕೋಟಿ ಡಾಲರ್‌ ಮೌಲ್ಯದ 25 ವರ್ಷಗಳ ಅವಧಿಯ ಆರ್ಥಿಕ ಮತ್ತು ಭದ್ರತಾ ಪಾಲುದಾರಿಕೆ ಒಪ್ಪಂದಕ್ಕೆ ಇರಾನ್‌ ಸಹಿ ಹಾಕಿದೆ.

ಚಬಹರ್‌ ಬಂದರು:

ಚಬಹರ್‌ ಬಂದರು ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇಂಧನ ಸಮೃದ್ಧ ಇರಾನ್‌ನ ದಕ್ಷಿಣ ಕರಾವಳಿಯಲ್ಲಿದೆ. ಇದು ಭಾರತದ ಪಶ್ಚಿಮ ಕರಾವಳಿಗೆ ಹತ್ತಿರದಲ್ಲಿದೆ. 2003 ರಿಂದ ಚಬಹರ್‌ ಒಪ್ಪಂದದ ಬಗ್ಗೆ ಭಾರತ ಇರಾನ್‌ನೊಂದಿಗೆ ಮಾತುಕತೆ ನಡೆಸಿತ್ತು. ಬಳಿಕ ಮೇ 2015 ರಲ್ಲಿ ಚಬಹರ್ ಬಂದರಿನ ಅಭಿವೃದ್ಧಿ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದವು.

ಮೇ 2016 ರಂದು ಪ್ರಧಾನಿ ನರೇಂದ್ರ ಮೋದಿಯವರ ಟೆಹ್ರಾನ್ ಭೇಟಿಯ ಸಂದರ್ಭದಲ್ಲಿ ಎರಡು ದೇಶಗಳು ಚಬಹರ್ ಬಂದರನ್ನು ನಿರ್ವಹಿಸಲು 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದರು. ಡಿಸೆಂಬರ್ 2017 ರಲ್ಲಿ ಚಬಹರ್ ಬಂದರಿನ ಮೊದಲ ಹಂತವನ್ನು ಇರಾನಿನ ಅಧ್ಯಕ್ಷ ಹಸನ್ ರೂಹಾನಿ ಉದ್ಘಾಟಿಸಿದರು. ಪಾಕಿಸ್ತಾನವನ್ನು ಬೈಪಾಸ್ ಮಾಡುವ ಇರಾನ್, ಭಾರತ ಮತ್ತು ಅಫ್ಘಾನಿಸ್ತಾನವನ್ನು ಸಂಪರ್ಕಿಸುವ ಹೊಸ ಕಾರ್ಯತಂತ್ರದ ಮಾರ್ಗವನ್ನು ತೆರೆಯುತ್ತದೆ.

ಹಸನ್ ರೂಹಾನಿಯ ಭೇಟಿಯ ಸಮಯದಲ್ಲಿ ಮಧ್ಯಂತರ ಅವಧಿಯ ಒಪ್ಪಂದವನ್ನು ಫೆಬ್ರವರಿ 2018 ರಲ್ಲಿ ಹಾಕಲಾಯಿತು. ಮೇ 2018 ರಲ್ಲಿ ಎರಡು ದೇಶಗಳ ನಡುವೆ ಅಲ್ಪಾವಧಿಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಭಾರತವು ಡಿಸೆಂಬರ್ 2018 ರಂದು ಚಬಹರ್ ಬಂದರಿನ ಕಾರ್ಯಾಚರಣೆಯನ್ನು ವಹಿಸಿಕೊಂಡಿದೆ. ಇದು ಭಾರತ ತನ್ನ ಭೂಪ್ರದೇಶದ ಹೊರಗೆ ಕಾರ್ಯನಿರ್ವಹಿಸುತ್ತಿರುವ ಮೊದಲ ಬಂದರು.

ಭಾರತಕ್ಕೆ ಚಬಹಾರ್ ಬಂದರಿನ ಮಹತ್ವ:

ಚಬಹರ್ ಬಂದರಿನ ಅಭಿವೃದ್ಧಿಯನ್ನು ಪಾಕಿಸ್ತಾನದ ಗ್ವಾಡರ್ ಬಂದರಿಗೆ ಪ್ರತಿಯಾಗಿ ಮಾಡಲು ನಿರ್ಧರಿಸಲಾಯಿತು. ಪಾಕಿಸ್ತಾನದ ಗ್ವಾಡರ್ ಬಂದರನ್ನು ಚೀನಿಯರು ತಮ್ಮ ಭವ್ಯವಾದ ಸಿಪಿಇಸಿ ಯೋಜನೆಯಡಿಯಲ್ಲಿ ವಿಸ್ತರಿಸುತ್ತಿದ್ದಾರೆ. ಪಾಕಿಸ್ತಾನದ ಸಾರಿಗೆಯನ್ನು ನಿರಾಕರಿಸುವ ಸಂದರ್ಭದಲ್ಲಿ ಚಬಹರ್ ಬಂದರು, ಮಧ್ಯ ಏಷ್ಯಾದ ದೇಶಗಳಿಗೆ ವ್ಯಾಪಾರಕ್ಕಾಗಿ ಭಾರತಕ್ಕೆ ಪ್ರವೇಶವನ್ನು ಕಲ್ಪಿಸುತ್ತದೆ. ಭಾರತ, ರಷ್ಯಾ, ಇರಾನ್, ಯುರೋಪ್ ಮತ್ತು ಮಧ್ಯ ಏಷ್ಯಾದ ನಡುವೆ ಸಮುದ್ರ, ರೈಲು ಮತ್ತು ರಸ್ತೆ ಮಾರ್ಗಗಳನ್ನು ಹೊಂದಿರುವ ಪ್ರಸ್ತಾವಿತ ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ಗೆ ಫೀಡರ್ ಬಂದರಾಗುತ್ತದೆ.

ಚಬಹರ್ ರೈಲು ಯೋಜನೆ ಪ್ರಾರಂಭಿಸಲು ಭಾರತ ವಿಫಲವಾಗಲು ಕಾರಣಗಳು:

2016 ರಲ್ಲಿ ಪ್ರಧಾನಿ ಮೋದಿಯವರ ಟೆಹ್ರಾನ್ ಭೇಟಿಯ ಸಂದರ್ಭದಲ್ಲಿ ಈ ಒಪ್ಪಂದವನ್ನು ಅಂತಿಮಗೊಳಿಸಲಾಯಿತು.

ಇಂಡಿಯನ್ ರೈಲ್ವೆ ಕನ್​ಸ್ಟ್ರಕ್ಷನ್ ಲಿಮಿಟೆಡ್ ರೈಲು ಮಾರ್ಗ ಯೋಜನೆಗೆ 1.6 ಶತಕೋಟಿ ಡಾಲರ್​ ಮೌಲ್ಯದ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿತ್ತು.

ಇರಾನ್ ಮೇಲೆ ಯುಎಸ್ ನಿರ್ಬಂಧದಿಂದಾಗಿ ರೈಲ್ವೆ ಯೋಜನೆಗೆ ಅನುಕೂಲ ಮಾಡಿದ್ದರೂ ಕೆಲಸ ಪ್ರಾರಂಭವಾಗಲಿಲ್ಲ. ಆದರೆ ಯುಎಸ್ಎಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಚಿಂತಿತರಾಗಿದ್ದ ಸಲಕರಣೆಗಳ ಪೂರೈಕೆದಾರರನ್ನು ಭಾರತಕ್ಕೆ ಕಂಡುಹಿಡಿಯಲಾಗಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.