ETV Bharat / bharat

ಜಸ್ಟ್​ 7 ಗಂಟೆಯಲ್ಲಿ 2.22 ಲಕ್ಷ ಕೋಟಿ ರೂ. ಕಳೆದು ಕೊಂಡರು..! -

ಮುಂಬೈ ಷೇರು ಪೇಟೆಯಲ್ಲಿ ಹೂಡಿಕೆದಾರರು ಗುರುವಾರದ ಒಂದು ದಿನದ ವಹಿವಾಟಿನಲ್ಲಿ ಸುಮಾರು ₹ 2.22 ಲಕ್ಷ ಕೋಟಿ (₹ 2.22 ಟ್ರಿಲಿಯನ್​) ಸಂಪತ್ತು ಕಳೆದುಕೊಂಡಿದ್ದಾರೆ. ಇದಕ್ಕೆ ಆರ್​ಬಿಐ ತೆಗೆದುಕೊಂಡ ನೀತಿ ಹಾಗೂ ದೇಶಿ - ವಿದೇಶಿ ಮಾರುಕಟ್ಟೆಗಳ ಬೆಳವಣಿಗೆಗಳು ಸಹ ಪುಷ್ಟಿನೀಡಿದವು

ಸಾಂದರ್ಭಿಕ ಚಿತ್ರ
author img

By

Published : Jun 6, 2019, 8:48 PM IST

ಮುಂಬೈ: ಷೇರು ಮಾರುಕಟ್ಟೆ ಎಂಬ ವಹಿವಾಟಿನ ಸಾಗರದಲೆಯನ್ನ ಭೇದಿಸಿ ನುಗ್ಗುವ ಕಿರು ದೋಣಿಯನ್ನ ಒಂದು ಚಿಕ್ಕ ಅಲೆ ಮಗುಚಿ ಹಾಕಬಹುದು. ಅಂತಹ ಘಟನೆ ಇಂದಿನ ವಹಿವಾಟಿನಲ್ಲಿ ಸಂಭವಿಸಿದೆ.

ಮುಂಬೈ ಷೇರು ಪೇಟೆಯಲ್ಲಿ ಹೂಡಿಕೆದಾರರು ಗುರುವಾರದ ಒಂದು ದಿನದ ವಹಿವಾಟಿನಲ್ಲಿ ಸುಮಾರು ₹ 2.22 ಲಕ್ಷ ಕೋಟಿ (₹ 2.22 ಟ್ರಿಲಿಯನ್​) ಸಂಪತ್ತು ಕಳೆದುಕೊಂಡಿದ್ದಾರೆ. ಇದಕ್ಕೆ ಆರ್​ಬಿಐ ತೆಗೆದುಕೊಂಡ ಇಂದಿನ ನಿರ್ಧಾರ ಹಾಗೂ ದೇಶಿ- ವಿದೇಶಿ ಮಾರುಕಟ್ಟೆಗಳ ಬೆಳವಣಿಗೆಗಳು ಸಹ ಪುಷ್ಟಿನೀಡಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಕಡಿತಗೊಳಿಸಿದ ಬಳಿಕ ಸೆನ್ಸೆಕ್ಸ್​ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತು. ''ಹಣಕಾಸೇತರ ಬ್ಯಾಂಕಿಂಗ್ ವಲಯದಲ್ಲಿ ಭರವಸೆ ಮೂಡಿಸುವಲ್ಲಿ ಆರ್​ಬಿಐ ವಿಫಲವಾಗಿದ್ದು ಕುಸಿತಕ್ಕೆ ಮುಖ್ಯಕಾರಣ'' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ 30 ಷೇರುಗಳ ಬಿಎಸ್​ಇ ಸೆನ್ಸೆಕ್ಸ್​ 553.83 ಅಂಶಗಳ ಇಳಿಕೆ ಕಂಡು ಶೇ 1.38ರಷ್ಟು ಕ್ಷೀಣಿಸಿತ್ತು. ಅಂತಿಮವಾಗಿ 39,529.72 ಅಂಕಗಳಲ್ಲಿ ಮುಕ್ತಾಯ ಕಂಡಿದೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕಂಡು ಬಂದ ನಕರಾತ್ಮಕ ನಡೆಯನ್ನು ಅನುಸರಿಸಿದ ಮಾರುಕಟ್ಟೆ ಕ್ಯಾಪಿಟಲೈಸೇಷನ್​ನ (ಎಂ- ಕ್ಯಾಪ್​) ಬಿಎಸ್​ಇ ಒಟ್ಟು ಮಾರುಕಟ್ಟೆ ಮೌಲ್ಯ ₹ 2,22,304.65 ಕೋಟಿಯಿಂದ ₹ 1,53,19,126.66 ತಲುಪಿದೆ.

ಕಿರು ಎಂ-ಕ್ಯಾಪ್​ ಸೂಚ್ಯಂಕದಲ್ಲೂ ಶೇ 1.77ರಷ್ಟು ಇಳಿಕೆ ದಾಖಲಿಸಿದೆ. ಬಿಎಸ್​ಇನಲ್ಲಿ 1,859 ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದ್ದರೇ 740 ಷೇರುಗಳು ಅಲ್ಪ ಏರಿಕೆ ಹಾಗೂ 132 ಷೇರುಗಳ ಬೆಲೆ ಸ್ಥಿರವಾಗಿದ್ದವು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.