ETV Bharat / bharat

'ಈಟಿವಿ ಭಾರತ' ವಿಶೇಷ ಸಂದರ್ಶನ: ಚು.ಆಯೋಗದ ಮಾಜಿ ಆಯುಕ್ತ ಒ.ಪಿ.ರಾವತ್ ಮಾತು

ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಚುನಾವಣಾ ಆಯೋಗದ ಮಾಜಿ ಆಯುಕ್ತ ಒ.ಪಿ. ರಾವತ್ ಮಾತನಾಡಿದರು. ಈ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.

Interview with OP Rawat
'ಈಟಿವಿ ಭಾರತ' ವಿಶೇಷ ಸಂದರ್ಶನ
author img

By

Published : Jan 29, 2021, 6:53 AM IST

ನವದೆಹಲಿ: ಚುನಾವಣಾ ಆಯೋಗದ ಸನ್ನದ್ಧತೆ ಮತ್ತು ಕೊರೊನಾದಂತಹ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಲು ಆಯೋಗದ ಮುಂದಿರುವ ಸವಾಲುಗಳ ಕುರಿತಾಗಿ ಚುನಾವಣಾ ಆಯೋಗದ ಮಾಜಿ ಆಯುಕ್ತ ಒ.ಪಿ. ರಾವತ್ ಮಾತನಾಡಿದ್ದಾರೆ.

ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ ನಾಮಪತ್ರ ಸಲ್ಲಿಕೆ, ಪ್ರಚಾರ ಮತ್ತು ಮತದಾನ ಪ್ರಕ್ರಿಯೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಅವರು ಹೇಳಿದ್ದಾರೆ.

ಚುನಾವಣಾ ಆಯೋಗವು ಪ್ರತಿ ಮತಗಟ್ಟೆಗೆ 1,000 ಕ್ಕಿಂತ ಕಡಿಮೆ ಮತದಾರರನ್ನು ನಿಗದಿಪಡಿಸಿತ್ತು. ಇದರಿಂದಾಗಿ ಮತದಾನ ಕೇಂದ್ರಗಳ ಸಂಖ್ಯೆ ಹೆಚ್ಚಾಗಿದೆ. ಆಯೋಗವು ಬಿಹಾರ ಚುನಾವಣೆಯ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸೋಂ ಮತ್ತು ಪುದುಚೇರಿಯಲ್ಲಿ ಮುಂಬರುವ ಚುನಾವಣೆಯಲ್ಲಿಯೂ ಇದೇ ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಎಂದು ಅವರು ತಿಳಿಸಿದರು.

'ಈಟಿವಿ ಭಾರತ' ವಿಶೇಷ ಸಂದರ್ಶನ

ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯಗಳ ಅಧಿಕಾರಿಗಳ ನಡುವಿನ ಸಮನ್ವಯದ ಬಗ್ಗೆ ಮಾತನಾಡಿ, ಸಂವಿಧಾನದ 324 ನೇ ವಿಧಿ ಅನ್ವಯ ಭಾರತದ ಚುನಾವಣಾ ಆಯೋಗವನ್ನು ರಚಿಸಲಾಗಿದೆ. ಆದರೆ ತಿದ್ದುಪಡಿ ಮಾಡಿದ ನಂತರ ರಾಜ್ಯ ಚುನಾವಣಾ ಆಯೋಗವನ್ನು ರಚಿಸಲಾಯಿತು. ಇಬ್ಬರಿಗೆ ವಿಭಿನ್ನ ಜವಾಬ್ದಾರಿಗಳಿವೆ ಎಂದರು.

ಒ.ಪಿ.ರಾವತ್ ಪರಿಚಯ:

ಒ.ಪಿ. ರಾವತ್ ಅವರು 1977 ರಲ್ಲಿ ಐಎಎಸ್‌ಗೆ ಸೇರಿಕೊಂಡರು. 2013 ರಲ್ಲಿ ಭಾರತದ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾಗಿ, 2015 ರ ಆಗಸ್ಟ್‌ನಲ್ಲಿ ಭಾರತದ ಚುನಾವಣಾ ಆಯೋಗಕ್ಕೆ ಆಯುಕ್ತರಾಗಿ ನೇಮಕಗೊಂಡರು. 2018 ರ ಜನವರಿಯಲ್ಲಿ 22 ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.

ಪ್ರಸ್ತುತ ಅವರು ಸರ್ಕಾರಿ ಜಾಹೀರಾತಿನ (ಸಿಸಿಆರ್​​ಜಿಎ) ವಿಷಯ ನಿಯಂತ್ರಣಕ್ಕಾಗಿ, ಸುಪ್ರೀಂಕೋರ್ಟ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. 2008-09ರಲ್ಲಿ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.