ETV Bharat / bharat

ಎಷ್ಟೇ ಒದ್ದಾಡಿದ್ರೂ ನಿದ್ರೆ ಬರ್ತಿಲ್ವಾ? ಇನ್ಸೋಮ್ನಿಯಾಗೆ ಇವು ಕಾರಣ ಎನ್ನುತ್ತಾರೆ ತಜ್ಞರು - ಹೇಗೆ ನಿದ್ದೆ ಮಾಡಬೇಕು

ರಾತ್ರಿ ವೇಳೆ ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರುತ್ತಿಲ್ಲವೇ? ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರಾ? ಹಾಗಾದರೆ ಇದು ನಿಮಗಾಗಿಯೇ. ನಿದ್ರಾಹೀನತೆ (ಇನ್​ಸೋಮ್ನಿಯಾ) ಕುರಿತಾಗಿ ನಿಪುಣರು ಹೇಳುತ್ತಿರುವುದೇನು ಬನ್ನಿ ತಿಳಿಯೋಣ.

ನಿದ್ದೆ
author img

By

Published : Nov 8, 2019, 9:40 AM IST

ನಿದ್ದೆ ಸಾಲದಿರುವುದು, ರಾತ್ರಿ ವೇಳೆ ಎಷ್ಟೇ ಪ್ರಯತ್ನಿಸಿದರು ನಿದ್ರೆ ಬರದಿರುವುದು, ಚಿಂತೆಯಿಂದ ನಿದ್ರಾ ಭಂಗ ಇದು ಇನ್ಸೋಮ್ನಿಯಾ ಹೆಸರಿನ ಒಂದು ಸಮಸ್ಯೆ. ಹೆಸರು ಏನೇ ಆಗಲಿ ಇಂತಹ ಸಮಸ್ಯೆಯನ್ನ ನಿದ್ರಾಹೀನತೆ ಎಂದು ಭಾವಿಸಿ, ಆ ರಾತ್ರಿಯನ್ನ ಹೇಗೆ ಕಳೆಯಬೇಕು... ಹೇಗೆ ನಿದ್ದೆ ಮಾಡಬೇಕು ಎಂದು ಚಿಂತಿಸುತ್ತಾ ನಾನಾ ವಿಧವಾಗಿ ಪ್ರಯತ್ನಿಸುತ್ತೇವೆ. ಆದರೆ ಈ ಬಗ್ಗೆ ಆರೋಗ್ಯ ನಿಪುಣರು ಹೇಳುತ್ತಿರುವುದೇ ಬೇರೆ. ಇನ್​ಸೋಮ್ನಿಯಾ ಎಂದರೆ ರೋಗವಲ್ಲ. ಜ್ವರ, ನೋವು ಮತ್ತೊಂದು ಸಮಸ್ಯೆಯ ನಂತರ ಕಾಣಿಸುವ ಲಕ್ಷಣ ಮಾತ್ರವಷ್ಟೇ ಎನ್ನುತ್ತಿದ್ದಾರೆ.

ಸಮಸ್ಯೆ ತಿಳಿದರೆ ಪರಿಹಾರ:

ಇಷ್ಟಕ್ಕೂ ಸಮಸ್ಯೆ ಏನು, ಅದರ ಮೂಲ ಎಲ್ಲಿಂದ ಬಂದಿದೆ ಎಂದು ತಿಳಿದರೇ ಸುಲಭವಾಗಿ ಇನ್​ಸೋಮ್ನಿಯಾವನ್ನು ಹೋಗಲಾಡಿಸಬಹುದು ಎನ್ನುತ್ತಾರೆ ನಿಪುಣರು. ಸಾಧಾರಣವಾಗಿ ಇನ್​ಸೋಮ್ನಿಯಾ ಬರಲು ಶೇ50 ರಷ್ಟು ಮಾನಸಿಕ ಸಮಸ್ಯೆ ಕಾರಣ. ಒತ್ತಡ ಹೆಚ್ಚದಾಗ, ಚಿಂತೆಗಳು ಬೆನ್ನುಬಿದ್ದಾಗ ನಿದ್ರೆ ಹಾರಿ ಈ ಸಮಸ್ಯೆಗೆ ಕಾರಣವಾಗುತ್ತದೆ. ಮೊದಲ ಕೆಲ ದಿನಗಳು ನಿದ್ರಾಹೀನೆತೆಯಿಂದ ಚಿಂತೆಗೆ ಒಳಗಾಗಿ ಬಳಿಕ ಮೆಲ್ಲನೆ ರಾತ್ರಿವೇಳೆ ನಿದ್ದೆ ಕಡಿಮೆಯಾಗುತ್ತದೆ.

ಆ ಸಮಸ್ಯೆಯಿಂದ ತಾತ್ಕಾಲಿಕವಾಗಿ ದೂರವಾಗಲು ಯಾವುದೋ ವ್ಯಾಯಾಮ ಮಾಡುವುದು, ಕಾಫಿ ಕುಡಿಯುವುದು, ಸಾಕಷ್ಟು ಸಮಯ ಮಂಚದ ಮೇಲೆ ಮಲಗುವಂತಹ ಕೆಲಸಗಳು ಮಾಡುತ್ತಾರೆ. ಇದರಿಂದ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ಇದೆಲ್ಲವನ್ನು ಬಿಟ್ಟು ನಿಮಗೆ ಎಷ್ಟು ಸಮಯ ನಿದ್ದೆ ಬರುವುದೋ ಅಷ್ಟೆ ಮಲಗಿ. ಬೆಳಗಿನ ಜಾವ ವಾಕ್​​ ಮಾಡಬೇಕೆನಿಸಿದರೆ ಮಾಡಿ. ರಾತ್ರಿ ನೀವು 1ಗಂಟೆಗೆ ಮಲಗಿದರು ಬೆಳಗ್ಗೆ ವಾಕಿಂಗ್​​ ಮಾತ್ರ ಹೋಗಲೇ ಬೇಕು. ನೀವು ಮೊದಲೇ ಮಲಗುವ ಈ ಟೈಮ್​ ಟೇಬಲ್​ನ ಮಾತ್ರ ಮಿಸ್​ ಆಗಬಾರದು. ಹೀಗೆ ನಿಮ್ಮ ದಿನಚರಿಯನ್ನ ಒಂದು ಪದ್ದತಿಯಲ್ಲಿ ಮುಂದುವರೆಸಿದರೆ, ಕೆಲ ದಿನಗಳಲ್ಲಿ ನಿಮ್ಮ ನಿದ್ದೆ ಹತೋಟಿಗೆ ಬರುತ್ತದೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.