ಕೊಟ್ಟಾಯಂ (ಕೇರಳ): ಟ್ರಸ್ಟ್ ನಿರ್ದೇಶಕಿಯ ಪತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಕೊಟ್ಟಾಯಂನ ಸಾಂತ್ವನಂ ಚಾರಿಟೇಬಲ್ ಟ್ರಸ್ಟ್‌ನಲ್ಲಿರುವ ಸಂತ್ರಸ್ತ ಬಾಲಕಿಯೊಬ್ಬಳು ಗಂಭೀರವಾಗಿ ಆರೋಪಿಸಿದ್ದಾಳೆ.
ಟ್ರಸ್ಟ್ ನಿರ್ದೇಶಕಿ ಅನ್ನಿ ವರ್ಗೀಸ್ ಅವರ ಪತಿ ಬಾಬು ವರ್ಗೀಸ್, ಅತ್ಯಾಚಾರ ಎಸಗಿದ್ದಾರೆ ಎಂಬ ಬಾಲಕಿಯ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕಳೆದ 2019ರ ಅಕ್ಟೋಬರ್ನಲ್ಲಿ ನಡೆದ ಘಟನೆಯ ಬಗ್ಗೆ 17 ವರ್ಷದ ಬಾಲಕಿ ಇತ್ತೀಚೆಗೆ ದೂರು ನೀಡಿದ್ದಾಳೆ. ಈ ಘಟನೆ ಬಗ್ಗೆ ಟ್ರಸ್ಟ್ ಅಧಿಕಾರಿಗಳಲ್ಲಿ ತಿಳಿಸಿದ್ದರೂ, ಅವರು ಈ ವಿಷಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು ಎಂದು ಬಾಲಕಿ ಆರೋಪಿಸಿದ್ದಾಳೆ. ಘಟನೆ ನಡೆದ ಬಳಿಕ ಬಾಲಕಿಗೆ ಟ್ರಸ್ಟ್ ಅಧಿಕಾರಿಗಳು ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರಂತೆ. ಈ ಬಗ್ಗೆ ಯಾರಿಗೂ ತಿಳಿಸದಂತೆ ಆಕೆಗೆ ಬೆದರಿಸಿದ್ದರಂತೆ. ಆದರೆ ಬಾಲಕಿ ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಳು.
ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆರೋಪವು ಸತ್ಯವೆಂದು ಅರ್ಥಮಾಡಿಕೊಂಡು, ಕೊಟ್ಟಾಯಂ ಮಹಿಳಾ ಪೊಲೀಸ್ ಠಾಣೆಗೆ ದೂರು ರವಾನಿಸಿದ್ದಾರೆ. ಈ ಸಂಬಂಧ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.