ETV Bharat / bharat

ನಿಮ್ಮ ಹೋರಾಟ ಮುಂದುವರಿಯಲಿ... ಕೊರೊನಾ ವಾರಿಯರ್ಸ್​​ಗೆ ಸ್ಥಳೀಯರಿಂದ ಹಲ್ಲೆಗೊಳಗಾದ ವೈದ್ಯನ ಸಲಹೆ

ಮೊರಾದಾಬಾದ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಜನಸಮೂಹದಿಂದ ಹಲ್ಲೆಗೊಳಗಾದ ವೈದ್ಯರು, ದಾದಿಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಕೋವಿಡ್ -19 ವಿರುದ್ಧದ ಹೋರಾಟವನ್ನು ಮುಂದುವರೆಸಬೇಕೆಂದು ಡಾ. ಎಸ್. ಸಿ ಅಗರ್ವಾಲ್, ಒತ್ತಾಯಿಸಿದ್ದಾರೆ. ವೈರಸ್ ವಿರುದ್ಧದ ಹೋರಾಟದಲ್ಲಿ ದೇಶವನ್ನು ನಿರಾಸೆಗೊಳಿಸಬೇಡಿ ಎಂದು ಅವರು ಹೇಳಿದರು.

author img

By

Published : Apr 17, 2020, 8:51 AM IST

Suggetion to corona fighters by Doctor who was attacked by localites
ಸ್ಥಳೀಯರಿಂದ ಹಲ್ಲೆಗೊಳಗಾದ ವೈದ್ಯನಿಂದ ಕೊರೊನಾ ಹೋರಾಟಗಾರರಿಗೆ ಕಿವಿಮಾತು

ಮೊರಾದಾಬಾದ್​, ಉತ್ತರ ಪ್ರದೇಶ: ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ಸಂಗ್ರಹಿಸುವಾಗ ಹಲ್ಲೆಗೊಳಗಾಗಿದ್ದ ವೈದ್ಯ ಡಾ. ಎಸ್. ಸಿ. ಅಗರ್ವಾಲ್ ಕಿವಿಮಾತು ಹೇಳಿದ್ದಾರೆ.

ಸಾಂಕ್ರಾಮಿಕ ವೈರಸ್​ ವಿರುದ್ಧ ನೇರ ಹೋರಾಟದಲ್ಲಿ ತೊಡಗಿರುವ ಪ್ರತಿಯೊಬ್ಬ ಸಿಬ್ಬಂದಿಯೂ ವೈಯಕ್ತಿಕ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಅದಕ್ಕೆ ಬೇಕಾದ ಅಗತ್ಯ ಸುರಕ್ಷಾ ವಸ್ತುಗಳನ್ನು ಯಾವಾಗಲು ತಮ್ಮೊಂದಿಗೆ ಒಯ್ಯಬೇಕು ಎಂದಿದ್ದಾರೆ.

ಈ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ವೈದ್ಯರು ಈಟಿವಿ ಭಾರತ್​ದೊಂದಿಗೆ ಮಾತನಾಡಿ, ಆ ದಾಳಿ ಅಪಾಯಕಾರಿಯಾಗಿತ್ತು. ನಾವು ಸಾವನ್ನೇ ನಮ್ಮ ಕಣ್ಣ ಮುಂದೆ ನೋಡಿದೆವು ಎಂದರು.

'ನೀವು ಇಲ್ಲಿಂದ ರೊಗಿಗಳನ್ನು ಕೊಂಡೊಯ್ದ ನಂತರ ಅವರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಇನ್ನೂ ನೀವೇ ಜನರಿಗೆ ಕೋವಿಡ್​ 19 ಹರಡುತ್ತಿದ್ದೀರ ಅವರನ್ನು ಗುಣ ಪಡಿಸುತ್ತಿಲ್ಲ' ಎಂದ ಎಂದು ಸ್ಥಳೀಯರೊಬ್ಬರು ಆರೋಪಿಸಿದರು.

'ನಾವು ಅವರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆವು. ಆದರೆ, ಅಷ್ಟರಲ್ಲಿ ನಮ್ಮನ್ನು ಸುತ್ತುವರೆದಿದ್ದ ಗುಂಪು ನಮ್ಮ ಮೇಲೆ ಹಲ್ಲೆಗೆ ಮುಂದಾಗಿತ್ತು' ಎಂದು ಆ ಭಯಾನಕ ಘಟನೆಯನ್ನು ಅಗರ್ವಾಲ್​ ನೆನೆದರು.

"ದಯವಿಟ್ಟು ನಿಮ್ಮ ಸೇವೆ ಮುಂದುವರಿಸಿ. ನಿಮಗೆ ಅಗತ್ಯವಿರುವ ಕಡೆ ‘ಭದ್ರತೆ ಪಡೆಯಿರಿ" ಎಂದು ಅಗರ್​ವಾಲ್​ ಇತರೆ ಸಿಬ್ಬಂದಿಗೆ ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.