ನವದೆಹಲಿ: ಕೋವಿಡ್ ಕೇಸ್ಗಳ ಪೈಕಿ ಜಗತ್ತಿನಲ್ಲೇ 2ನೇ ಸ್ಥಾನದಲ್ಲಿರುವ ಭಾರತದಲ್ಲೀಗ ಸೋಂಕಿತರ ಸಂಖ್ಯೆ 51 ಲಕ್ಷದ ಗಡಿ ದಾಟಿದೆ. ಸಮಾಧಾನದ ವಿಚಾರವೆಂದರೆ 40 ಲಕ್ಷ ಜನರು ಗುಣಮುಖರಾಗಿದ್ದು, 10 ಲಕ್ಷ ಪ್ರಕರಣಗಳು ಮಾತ್ರ ಆ್ಯಕ್ಟಿವ್ ಆಗಿವೆ.
ಕಳೆದ 24 ಗಂಟೆಗಳಲ್ಲಿ ಈವರೆಗೆ ಬರೋಬ್ಬರಿ 97,894 ಸೋಂಕಿತರು ಪತ್ತೆಯಾಗಿದ್ದು, 1,132 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 51,18,254 ಹಾಗೂ ಮೃತರ ಸಂಖ್ಯೆ 83,198ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 40,25,080 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 10,09,976 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸೆಪ್ಟೆಂಬರ್ 16ರ ವರೆಗೆ 6 ಕೋಟಿಗೂ ಹೆಚ್ಚು ಜನರಿಗೆ (6,05,65,728) ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 11,36,613 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.