ETV Bharat / bharat

ದೇಶದಲ್ಲಿ 18 ಲಕ್ಷ ಗಡಿ ದಾಟಿದ ಸೋಂಕಿತರು: 38 ಸಾವಿರ ಮಂದಿ ಸಾವು

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18,03,696ಕ್ಕೆ ಹಾಗೂ ಮೃತರ ಸಂಖ್ಯೆ 38,135ಕ್ಕೆ ಏರಿಕೆಯಾಗಿದೆ.

India's COVID 19 tally crosses 18 lakh mark
ಕೊರೊನಾ
author img

By

Published : Aug 3, 2020, 10:22 AM IST

ನವದೆಹಲಿ: ಭಾರತದಲ್ಲಿ ಕೇವಲ ಎರಡೇ ದಿನದಲ್ಲಿ ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದು, ಇದೀಗ ದೇಶದಲ್ಲಿ ಕೋವಿಡ್​ ಕೇಸ್​ಗಳ ಸಂಖ್ಯೆ 18 ಲಕ್ಷದ ಗಡಿ ದಾಡಿದೆ. ಇತ್ತ ಮೃತರ ಸಂಖ್ಯೆ 38 ಸಾವಿರ ತಲುಪಿದೆ.

ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 52,972 ಸೋಂಕಿತರು ಪತ್ತೆಯಾಗಿದ್ದು, 771 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 18,03,696ಕ್ಕೆ ಹಾಗೂ ಮೃತರ ಸಂಖ್ಯೆ 38,135ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 11,86,203 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 5,79,357 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

India's COVID 19 tally crosses 18 lakh mark
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್​

ಆಗಸ್ಟ್​ 2ರ ವರೆಗೆ 2 ಕೋಟಿಗೂ ಅಧಿಕ ಜನರಿಗೆ (2,02,02,858) ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 3,81,027 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.