ETV Bharat / bharat

ಭಾರತದೊಂದಿಗೆ 2+2 ಮಾತುಕತೆ ಮುನ್ನ ಅಮೆರಿಕದ ಪತ್ರಿಕೆಗಳಲ್ಲಿ CAA ಪ್ರತಿಭಟನೆ, ಕಾಶ್ಮೀರದ್ದೇ ಸುದ್ದಿ! - 2 + 2 talks between USA and India

ಭಾರತ ಮತ್ತು ಅಮೆರಿಕಾ ನಡುವೆ 2+2 ಮಾತುಕತೆಗೆ ವಾಷಿಂಗ್ಟನ್ ಡಿಸಿಯಲ್ಲಿ ವೇದಿಕೆ ಸಿದ್ಧಗೊಂಡಿದೆ. ಆದರೆ ಅಲ್ಲಿನ ಪ್ರಮುಖ ಮಾಧ್ಯಮಗಳೆಲ್ಲ ಇದರ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ. ಅಲ್ಲಿನ ಮಾಧ್ಯಮಗಳೆಲ್ಲಾ ಹೆಚ್ಚು ಗಮನ ನೀಡುತ್ತಿರುವುದು ಮಾತ್ರ ಕಾಶ್ಮೀರದ ಕುರಿತು, ಜಾಮಿಯಾ ವಿಶ‍್ವವಿದ್ಯಾನಿಯದ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಹಾಗೂ NRC ಮತ್ತು ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆಗಳ ಕುರಿತಾಗಿದೆ.

Foreign Media and Indias CCA
ಅಮೆರಿಕದ ಪತ್ರಿಕೆಗಳಲ್ಲಿ CAA ಪ್ರತಿಭಟನೆ
author img

By

Published : Dec 18, 2019, 8:51 AM IST

ಭಾರತ ಮತ್ತು ಅಮೆರಿಕಗಳ ನಡುವೆ ವಾಷಿಂಗ್ಟನ್ ಡಿಸಿಯಲ್ಲಿ 2+2 ಮಾತುಕತೆಗಳು ಆರಂಭಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈಗ ಅಮೆರಿಕದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಾಮುಖ್ಯತೆ ಪಡೆದಿರುವುದು ನವದೆಹಲಿಯ ಸುದ್ದಿಗಳೇ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ವಾಷಿಂಗ್ಟನ್ ಡಿಸಿಯಲ್ಲಿ ಬೀಡು ಬಿಟ್ಟಿದ್ದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕೇಲ್ ಪಾಂಪಿಯೋ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ್ದಾರೆ. ಆದರೆ ಅಲ್ಲಿನ ಮಾಧ್ಯಮಗಳೆಲ್ಲಾ ಹೆಚ್ಚು ಗಮನ ನೀಡುತ್ತಿರುವುದು ಮಾತ್ರ ಕಾಶ್ಮೀರದ ಕುರಿತು, ಜಾಮಿಯಾ ವಿಶ‍್ವವಿದ್ಯಾನಿಯದ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಹಾಗೂ NRC ಮತ್ತು ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆಗಳ ಹಿನ್ನೆಲೆಯಲ್ಲಿ ಭಾರತದ ಎಲ್ಲೆಡೆ ವಿಶ‍್ವವಿದ್ಯಾಲಯಗಳ ಕ್ಯಾಂಪಸ್​​ಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಕುರಿತಾಗಿಯೇ.

ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ಭಾರತವೇನಾದರೂ ಹಿಂದೂ ರಾಷ್ಟ್ರವಾಗುವತ್ತ ಹೆಜ್ಜೆ ಹಾಕುತ್ತಿದೆಯೇ? ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನವೊಂದರಲ್ಲಿ ಕೇಳಲಾಗಿದೆ. "ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ಕಾಶ್ಮೀರದಲ್ಲಿ ಸಾವಿರಾರು ಮುಸ್ಲಿಮರನ್ನು ಸುತ್ತುವರೆದಿದೆ, ಇಡೀ ಪ್ರದೇಶದ ಸ್ವಾಯತ್ತತೆಯನ್ನು ಅಧಿಕೃತವಾಗಿ ರದ್ದುಪಡಿಸಲಾಗಿದೆಯಲ್ಲದೆ ಈಶಾನ್ಯ ಭಾರತದಲ್ಲಿ 20 ಲಕ್ಷ ಜನರಿಗೆ ಅಧಿಕೃತ ದೇಶವಾಗಲಿ, ರಾಜ್ಯವಾಗಲಿ ಇಲ್ಲದಂತೆ ಮಾಡುವ ಪೌರತ್ವ ಪರೀಕ್ಷೆಯನ್ನು ಜಾರಿಗೊಳಿಸಲಾಗಿದೆ. ಇವರಲ್ಲಿ ಹಲವರು ಮುಸ್ಲಿಮರಾಗಿದ್ದಾರೆ. ಆದರೆ ಇಂತಹ ಹೊಸ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಿ ಮುಸ್ಲಿಮರನ್ನು ಹೊರತುಪಡಿಸಿದಂತೆ ಮಿಕ್ಕೆಲ್ಲಾ ದಕ್ಷಿಣ ಏಷಿಯನ್ನರಿಗೆ ಅನುಕೂಲ ಮಾಡಿಕೊಡುವುದು ಮಾನ್ಯ ಮೋದಿಯವರ ಜೂಜಾಟವಾಗಿದ್ದು, ಇದು ಈಗ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ" ಎಂದು ನ್ಯೂಯಾರ್ಕ್‍ ಟೈಮ್ಸ್​​​ನ ಆ ಲೇಖನದಲ್ಲಿ ಬರೆಯಲಾಗಿದೆ.

ವಾಲ್‍ ಸ್ಟ್ರೀಟ್ ಜರ್ನಲ್​​ನಲ್ಲಿ ಪ್ರಕಟವಾಗಿರುವ ಲೇಖನವೊಂದರ ಶೀರ್ಷಿಕೆಯೇ "ಭಾರತದ ಹೊಸ ನಾಗರಿಕತ್ವ ಕಾನೂನಿನ ವಿರುದ್ಧ ವ್ಯಾಪಕಗೊಂಡ ಪ್ರತಿಭಟನೆಗಳು" ಎಂದಿದೆ. "ಕೆಲವು ಮುಸ್ಲಿಂ ವಲಸಿಗರಿಗೆ ಅನಾನುಕೂಲತೆ ಉಂಟುಮಾಡುವ ಕಾಯ್ದೆಯ ಟೀಕಾಕಾರರ ಪ್ರಕಾರ ಪ್ರಧಾನಮಂತ್ರಿ ಮೋದಿಯವರು ದೇಶದ ಜಾತ್ಯತೀತ ಬುನಾದಿಯನ್ನು ನಾಶ ಮಾಡುತ್ತಿದ್ದಾರೆ" ಎಂದು ಅದರಲ್ಲಿ ಒತ್ತಿ ಹೇಳಲಾಗಿದೆ. ಮತ್ತೊಂದು ಪ್ರತಿಷ್ಠಿತ ಪತ್ರಿಕೆ ವಾಷಿಂಗ್ಟನ್ ಪೋಸ್ಟ್, "ಪೊಲೀಸರು ಯೂನಿವರ್ಸಿಟಿ ಕ್ಯಾಂಪಸ್​​ನಲ್ಲಿ ಹಲ್ಲೆ ನಡೆಸಿದ ಬಳಿಕ ಭಾರತದಾದ್ಯಂತ ಹೊಸ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ" ಎಂದು ವರದಿ ಮಾಡಿದೆ.

ಅಮೆರಿಕದ ಪತ್ರಿಕೆಗಳಲ್ಲಿ CAA ಪ್ರತಿಭಟನೆ, Foreign Media and Indias CCA
ಅಮೆರಿಕದ ಪತ್ರಿಕೆಗಳಲ್ಲಿ CAA ಪ್ರತಿಭಟನೆ

ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸಿದ ದಿನದಿಂದ ಇದುವರೆಗೂ ಹೇರಲಾಗಿರುವ ಸಂಪರ್ಕ - ಸಂವಹನ ಸ್ಥಗಿತ ಮತ್ತು ರಾಜಕೀಯ ಬಂಧನಗಳ ಕುರಿತಾಗಿ ಯುನೈಟೆಡ್ ಸ್ಟೇಟ್ಸ್ ಸಂಸದೀಯ ಸಮಿತಿಯು ಇದುವರೆಗೆ ಎರಡು ವಿಚಾರಣೆಗಳನ್ನು ನಡೆಸಿದೆ. ಇದೇ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಸಹ ತೀವ್ರ ಟೀಕೆಗೆ ಒಳಗಾಗಿದ್ದು, ಈ ಕುರಿತು ಅಮೆರಿಕದಲ್ಲಿ ಆತಂಕ ವ್ಯಕ್ತವಾಗಿದೆ. ಅಮೆರಿಕದ ಎರಡು ನಿಯೋಗಗಳು - ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಮತ್ತು ವಿದೇಶಾಂಗ ವ್ಯವಹಾರಗಳ ಸದನ ಸಮಿತಿಗಳೆರಡೂ CAAಯು ಪ್ರಜಾಪ್ರಭುತ್ವದ ಮೂಲತತ್ವಗಳನ್ನು ನಾಶ ಮಾಡುತ್ತಿದೆ ಎಂದು ಟೀಕಿಸಿವೆ. ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗವು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ CAAಯು "ಮೂಲಭೂತವಾಗಿ ತಾರತಮ್ಯ ನೀತಿ ಪ್ರತಿಪಾದಿಸುತ್ತದೆ ಹಾಗೂ ಅದು ಮಾನವ ಹಕ್ಕುಗಳ ಕುರಿತು ಭಾರತದ ಅಂತರರಾಷ್ಟ್ರೀಯ ಭಾದ್ಯತೆಗಳಿಗೆ ವಿರುದ್ಧವಾಗಿದೆ" ಎಂದು ತಿಳಿಸಿದೆ. ಭಾರತ ಮತ್ತು ಅಮೆರಿಕಗಳ ನಡುವೆ ಮೊತ್ತಮೊದಲಿಗೆ 2018ರ ಸೆಪ್ಟೆಂಬರ್ ತಿಂಗಳಿನಲ್ಲಿ 2+2 ಮಾತುಕತೆಗಳು ಆರಂಭಗೊಂಡಿದ್ದವು. ಉಭಯ ದೇಶಗಳ ವಿದೇಶಾಂಗ ನೀತಿ ಹಾಗೂ ರಕ್ಷಣೆ ಮತ್ತು ಭದ್ರತೆ ವಿಷಯಗಳ ಕುರಿತಂತೆ ಸಮಗ್ರ ಪರಾಮರ್ಶೆ ನಡೆಸುವುದು ಈ ಮಾತುಕತೆಗಳ ಉದ್ದೇಶವಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಈ ಮಾತುಕತೆಗೆ ಮುನ್ನ ಮಾತನಾಡುತ್ತಾ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಕುರಿತು ಉಭಯ ಪ್ರತಿನಿಧಿಗಳೂ ತಂತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಇರುತ್ತದೆಯಾದರೂ ಭಾರತವು ಕಾಶ್ಮೀರ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿವಾದಗಳ ಕುರಿತು ಸ್ಪಷ್ಟಪಡಿಸಿ ಮುಂದೆ ಹೋಗುತ್ತದೆ ಎಂಬ ಭರವಸೆ ಇರುವುದಾಗಿ ಹೇಳಿದ್ದಾರೆ.

"ಮುಂದಿನ ವಾರ ನಡೆಯಲಿರುವ ಈ 2+2 ಚರ್ಚೆಯಲ್ಲಿ ಮಾನವ ಹಕ್ಕುಗಳ ವಿಷಯ ಇರುವುದಿಲ್ಲ. ಆದರೂ ಕಾಶ್ಮೀರದ ಕುರಿತ ವಿಷಯಗಳು ಮತ್ತು ಭಾರತಕ್ಕೆ ಇರುವ ಆತಂಕಗಳೇನು ಎಂಬ ಕುರಿತ ವಿಷಯಗಳು ಸಹ ಮಾತುಕತೆಯ ಅಜೆಂಡಾದಲ್ಲಿ ಸೇರಲಿವೆ ಎಂಬ ವಿಶ್ವಾಸವಿದೆ" ಎಂದು ದಕ್ಷಿಣ ಮತ್ತು ಮಧ್ಯ ಏಷಿಯಾದ ಸಹಾಯಕ ಕಾರ್ಯದರ್ಶಿ ಅಲೀಸ್ ಜಿ ವೆಲ್ಸ್ ಕಳೆದ ವಾರ ರಾಯಭಾರತ್ವದ ಕಾರ್ಯಕ್ರಮದಲ್ಲಿ ತಿಳಿಸಿದ್ದನ್ನು ಸ್ಮರಿಸಬಹುದು. ಭಾರತ ಸರ್ಕಾರವು 'ಇಂಗ್ಲಿಷ್ ಮಾತಾಡುವ ಪಶ್ಚಿಮದ ಉದಾರವಾದಿ ಮಾಧ್ಯಮ ಪೂರ್ವಗ್ರಹ" ಗಳನ್ನು ಮತ್ತು ಅದು 'ಆಂತರಿಕ ವಿಷಯಗಳು" ಎಂದು ಕರೆಯುವ ವಿಷಯಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಹಾಗೂ ಭಿನ್ನ ಧ್ವನಿಗಳನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ. ನವೆಂಬರ್ 14ರಂದು ನಡೆದ 4ನೆಯ ರಾಮನಾಥ್ ಗೊಯೆಂಕಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಜೈಶಂಕರ್ ಅವರು ಅಂತಹ ಟೀಕೆಗಳೆಲ್ಲಾ 'ಮಾಹಿತಿಯ ಕೊರತೆಯುಳ್ಳವು" ಎಂದು ಒತ್ತಿ ಹೇಳಿದರು. "ನಮ್ಮ ಆಂತರಿಕ ವಿಷಯಗಳ ಕುರಿತು ಹೊರಗಡೆ ಕೇಳಿಬರುತ್ತಿರುವ ಮಾಹಿತಿಯ ಕೊರತೆಯುಳ್ಳ ಟೀಕೆಗಳನ್ನು 'ಅಂತರರಾಷ್ಟ್ರೀಕರಣ' ಎಂದು ಕರೆಯಲಾಗುವುದಿಲ್ಲ. ಇಂತಹ ಆತಂಕಗಳು ಮರೆಮಾಚಿದ ರೀತಿಯಲ್ಲಿ ಜಡತೆಯನ್ನು ಪ್ರತಿಪಾದಿಸುವ ಪ್ರಯತ್ನಗಳಾಗಿವೆಯಷ್ಟೇ. ಅಂತವರ ಉದ್ದೇಶ, ಪ್ರಜ್ಞೆ ಏನಿದ್ದರೂ ಇತಿಹಾಸವು ಹಾದು ಬಂದಿರುವ ಯಥಾಸ್ಥಿತಿಯನ್ನು ನ್ಯಾಯಬದ್ಧಗೊಳಿಸುವುದಕ್ಕಷ್ಟೇ ಸೀಮಿತಿವಾಗಿವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದ್ದಾರೆ.

ಕಾಶ್ಮೀರದ ಕುರಿತು ಎರಡನೇ UNHC ವಿಚಾರಣೆ ಬೇಕೆಂದು ಕೇಳುತ್ತಿರುವ ಚೀನಾ: ಇದೇ ಹೊತ್ತಿಗೆ ಗಡಿ ವಿವಾದದ ಕುರಿತು ಭಾರತ-ಚೀನಾ ವಿಶೇಷ ಪ್ರತಿನಿಧಿಗಳ ಸಭೆಯು ಸಮೀಪಿಸುತ್ತಿದೆ. ಆದರೆ ಈ ಸಂದರ್ಭದಲ್ಲಿಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ್ತೊಮ್ಮೆ ಕಾಶ್ಮೀರದ ಕುರಿತು ಚರ್ಚೆ ನಡೆಯಬೇಕೆಂದು ಬೀಜಿಂಗ್ ಒತ್ತಾಯಪಡಿಸುತ್ತಿದೆ. ಚೀನಾದ ವಿದೇಶಾಂಗ ಸಚಿವ ಮತ್ತು ಸ್ಟೇಟ್ ಕೌನ್ಸೆಲರ್ ಆಗಿರುವ ವಾಂಗ್ ಯು ಈ ವಾರದಲ್ಲಿ ದೆಹಲಿಗೆ ಆಗಮಿಸುತ್ತಿದ್ದು, NSAಯ ಅಜಿತ್ ದೋವಲ್ ಅವರೊಂದಿಗೆ ಗಡಿ ವಿವಾದದ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ಸಭೆಗೆ ಮೊದಲು ಮತ್ತು ಕಳೆದ ವಾರಾಂತ್ಯದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಎಸ್​.ಎಂ ಖುರೇಶಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪತ್ರವೊಂದನ್ನು ರವಾನಿಸಿದ್ದಾರೆ. ಅದರಲ್ಲಿ ಭಾರತವು ಇಸ್ಲಾಮಾಬಾದನ್ನು "ಛಿದ್ರಗೊಳಿಸುವ" ಸಿದ್ಧತೆ ನಡೆಸುತ್ತಿದೆ ಎಂದು ಪಾಕಿಸ್ತಾನ ದೂರಿರುವ ಬೆನ್ನಲ್ಲೇ ಚೀನಾವು ಭದ್ರತಾ ಮಂಡಳಿಯಲ್ಲಿ ಕಾಶ್ಮೀರದ ವಿಷಯವನ್ನು ಯಾವುದೇ ಮತಕ್ಕೆ ಹಾಕಲು ಅವಕಾಶವಿರದ ರೀತಿಯಲ್ಲಿ ಚರ್ಚಿಸಬೇಕೆಂದು ಕೇಳಿಕೊಂಡಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಆಗಸ್ಟ್ 16ರಂದು ಪಾಕಿಸ್ತಾನದ ಒತ್ತಾಯದ ಮೇರೆಗೆ ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಚರ್ಚೆಗೆ ತಂದಿತ್ತು. ಆದರೆ ಆಗ ಈ ಕುರಿತು ಯಾವುದೇ ಬಹಿರಂಗ ಹೇಳಿಕೆಗೆ ಅವಕಾಶವಿರದೆ ಆಂತರಿಕವಾದ ಚರ್ಚೆ ನಡೆದಿತ್ತು. ಈ ಸಲ ದೇಶದಲ್ಲಿ ತೀವ್ರಗೊಂಡಿರುವ CAA ವಿರುದ್ಧದ ಪ್ರತಿಭಟನೆಗಳು ಭಾರತದ ರಾಯಭಾರತ್ವವನ್ನು ಕಠಿಣಗೊಳಿಸಿರುವುದರ ನಡುವೆಯೂ ಭಾರತವು ತನ್ನ ಮಿತ್ರಪಕ್ಷಗಳನ್ನು ಮತ್ತು ಸ್ನೇಹಿತರನ್ನು ಬಹುವಾಗಿ ಅವಲಂಬಿಸಿಕೊಂಡಿದೆ. ಪಾಕಿಸ್ತಾನವು ಜಾಗತಿಕ ಕಾವಲುಪಡೆಯಿಂದ ಕಪ್ಪು ಪಟ್ಟಿಗೆ ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಭಯೋತ್ಪಾದನೆಗೆ ಹಣಕಾಸು ಬೆಂಬಲ ನೀಡುವುದನ್ನು ಸ್ಥಗಿತಗೊಳಿಸುವುದಕ್ಕೆ ಫೆಬ್ರವರಿ 2020ರ FTAFನ (ಹಣಕಾಸು ಕ್ರಿಯಾ ಪಡೆ) ಡೆಡ್‍ಲೈನ್‍ನ್ನು ನವದೆಹಲಿ ನೀಡಿದೆ.

ಫ್ರಾನ್ಸ್ ಸರ್ಕಾರವು ಭಾರತದ ಪರವಹಿಸಿದ್ದು ಅದರ ರಾಯಭಾರಿ ಇಮ್ಯಾನುಯೆಲ್ ಲೆನಾಯಿನ್ ಅವರು ಕಳೆದ ವಾರ ಪುದುಚೇರಿಯಲ್ಲಿ ಮಾತನಾಡುತ್ತಾ ಇತರ ದೇಶಗಳು ಭಾರತದ ಆಂತರಿಕ ವಿಷಯಗಳ ಕುರಿತು ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುರಿತು ಭಾರತ ಕೈಗೊಂಡಿರುವ ತೀರ್ಮಾನವು "ಬಹುಸಂಖ್ಯಾತರ ಇಚ್ಛಾನುಸಾರ" ಕೈಗೊಂಡಿರುವ ನಿರ್ಧಾರ ಎಂದೂ ಲೆನಾಯಿನ್ ಹೇಳಿದ್ದಾರೆ. "ಕಾಶ್ಮೀರದಲ್ಲಿ ಶಾಂತಿಯೆಂಬುದು ಬಹಳ ಸಂಕೀರ್ಣ ವಿಷಯವಾಗಿರಬಹುದು ಆದರೆ ಅದು ಸಾಧ್ಯವಾಗುವುದು ದ್ವಿಪಕ್ಷೀಯ ಮಾತುಕತೆಯ ಮೂಲಕ ಮಾತ್ರ. ಈ ವಿಷಯವನ್ನು ಅಂತರರಾಷ್ಟ್ರೀಕರಣಗೊಳಿಸುವುದರಿಂದ ಯಾವುದೇ ಲಾಭವಿಲ್ಲ. ಮತ್ತಷ್ಟು ಆತಂಕ ಹೆಚ್ಚಿಸುವ ಕ್ರಿಯೆಗಳಿಂದ ಎಲ್ಲರೂ ದೂರವಿರುವುದು ಬಹಳ ಅವಶ್ಯವಾಗಿದೆ. ವೈಯಕ್ತಿಕ ಹಕ್ಕುಗಳನ್ನು ಸಂಪೂರ್ಣವಾಗಿ ಎಲ್ಲರೂ ಗೌರವಿಸುವುದನ್ನು ಫ್ರಾನ್ಸ್ ಆಶಿಸುತ್ತದಲ್ಲದೇ ಪರಿಸ್ಥಿತಿ ಮಾಮೂಲಿನ ಸ್ಥಿತಿಗೆ ಮರಳಲೆಂದು ಆಶಿಸುತ್ತದೆ" ಎಂದು ಅವರು ಹೇಳಿದ್ದಾರೆ. ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಬೀಜಿಂಗ್‍ನ ಇತ್ತೀಚಿನ ನಡೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿಗಳು ಮುಗುಮ್ಮಾಗಿವೆ.

For this story visuals available in English out please use it

---------- Forwarded message ---------
From: Harshakumar Kugwe <mailharsha09@gmail.com>
Date: Tue, Dec 17, 2019, 23:14
Subject: CAA, Kashmir 2+2, US kannada
To: Ravi S <ravi.s@etvbharat.com>

PFA 

On Tue, Dec 17, 2019, 12:34 PM Ravi S <ravi.s@etvbharat.com> wrote:
Dear Harsha Ji,
Please translate this copy ASAP. send one copy to me & oneCC to englishdesk@etvbharat
ETV Bharat Logo

Copyright © 2025 Ushodaya Enterprises Pvt. Ltd., All Rights Reserved.