ETV Bharat / bharat

ಲಾಕ್​ಡೌನ್​ ಮಧ್ಯೆಯೂ 5.5 ಲಕ್ಷ ಚಿಕನ್​ ಬಿರಿಯಾನಿ ಆರ್ಡರ್ : ಸ್ವಿಗ್ಗಿ - ಚೋಕೊ ಲಾವಾ ಕೇಕ್

ಲಾಕ್​ಡೌನ್ ವೇಳೆಯಲ್ಲಿ ದೇಶಾದ್ಯಂತ 5.5 ಲಕ್ಷ ಚಿಕನ್​ ಬಿರಿಯಾನಿ ಆರ್ಡರ್​ಗಳನ್ನು ಪೂರೈಸಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 1,29,000 ಚೋಕೊ ಲಾವಾ ಕೇಕ್ ಸೇರಿ ಗುಲಾಬ್ ಜಾಮೂನ್ ಮತ್ತು ಚಿಕ್ ಬಟರ್ ಸ್ಕೋಚ್ ಮೌಸ್ಸ್ ಕೇಕ್ ಆರ್ಡರ್​ಗಳನ್ನುಪೂರೈಸಲಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

Chicken Biryani  ಚಿಕನ್​ ಬಿರಿಯಾನಿ ಆರ್ಡರ್
ಚಿಕನ್​ ಬಿರಿಯಾನಿ ಆರ್ಡರ್
author img

By

Published : Jul 24, 2020, 7:30 PM IST

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಲಾಕ್​ಡೌನ್ ವೇಳೆಯಲ್ಲಿ ದೇಶಾದ್ಯಂತ 5.5 ಲಕ್ಷ ಚಿಕನ್​ ಬಿರಿಯಾನಿ ಆರ್ಡರ್​ಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

ಸುಮಾರು 323 ಮಿಲಿಯನ್ ಕೆಜಿ ಈರುಳ್ಳಿ ಮತ್ತು 56 ಮಿಲಿಯನ್ ಕೆಜಿ ಬಾಳೆಹಣ್ಣುಗಳನ್ನು ತನ್ನ ದಿನಸಿ ಪ್ಲಾಟ್​ಫಾರ್ಮ್​ ಮೂಲಕ ತಲುಪಿಸಲಾಗಿದೆ ಎಂದು ಆಹಾರ ವಿತರಣಾ ಕಂಪನಿ ಸ್ವಿಗ್ಗಿ ಬಹಿರಂಗಪಡಿಸಿದೆ. ವರದಿಯ ಪ್ರಕಾರ, ರಾತ್ರಿ 8 ಗಂಟೆಯ ಹೊತ್ತಿಗೆ ಸರಾಸರಿ 65,000 ಊಟದ ಆದೇಶಗಳನ್ನು ತಲುಪಿಸಲಾಗಿದೆ.

ಲಾಕ್​ಡೌನ್ ಅವಧಿಯ ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 1,29,000 ಚೋಕೊ ಲಾವಾ ಕೇಕ್ ಆದೇಶಗಳನ್ನು ಸೇರಿ ಗುಲಾಬ್ ಜಾಮೂನ್ ಮತ್ತು ಚಿಕ್ ಬಟರ್ ಸ್ಕೋಚ್ ಮೌಸ್ಸ್ ಕೇಕ್ ಆರ್ಡರ್​ಗಳು ದಾಖಲಾಗಿವೆ. ಲಾಕ್​ಡೌನ್ ಸಮಯದಲ್ಲಿ ಸ್ವಿಗ್ಗಿ ಸುಮಾರು 1,20,000 ಹುಟ್ಟುಹಬ್ಬದ ಕೇಕ್​ಗಳನ್ನು ಜನರಿಗೆ ತಲುಪಿಸಿದೆ ಎಂದು ವರದಿ ತಿಳಿಸಿದೆ.

73,000 ಬಾಟಲಿ ಸ್ಯಾನಿಟೈಸರ್‌ ಮತ್ತು ಹ್ಯಾಂಡ್ ವಾಶ್ ಜೊತೆಗೆ 47,000 ಫೇಸ್ ಮಾಸ್ಕ್‌ಗಳನ್ನು ತಲುಪಿಸಲಾಗಿದೆ. ಸ್ವಿಗ್ಗಿಯ 'ಹೋಪ್, ನಾಟ್ ಹಂಗರ್' ಉಪಕ್ರಮವು 10 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಇದು ಲಾಕ್ ಡೌನ್ ಸಮಯದಲ್ಲಿ ಅಗತ್ಯವಿರುವ ಜನರಿಗೆ 30 ಲಕ್ಷ ಸಂಖ್ಯೆಯ ಊಟ ಪೂರೈಸಲು ಸಹಾಯ ಮಾಡಿತು ಎಂದು ವರದಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.