ETV Bharat / bharat

ಇಂದಿನಿಂದ ವಿಶೇಷ ರೈಲು ಸೇವೆ ಆರಂಭ: 3 ಗಂಟೆಯಲ್ಲಿ 30 ಸಾವಿರ ಟಿಕೆಟ್​ ಬುಕ್​

author img

By

Published : May 12, 2020, 10:00 AM IST

ಈ ರೈಲುಗಳು ದೆಹಲಿಯಿಂದ 15 ಸ್ಥಳಗಳಿಗೆ ಪ್ರಯಾಣ ಬೆಳೆಸಲಿದ್ದು, ದಿಬ್ರುಗಢ​, ಅಗರ್ತಲಾ, ಹೌರಾ, ಪಾಟ್ನಾ, ವಿಲಾಸ್​ಪುರ, ರಾಂಚಿ, ಭುವನೇಶ್ವರ​, ಸಿಕಂದರಾಬಾದ್​, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್​, ಅಹಮದಾಬಾದ್​ ಹಾಗೂ ಜಮ್ಮುವಿನ ತಾವಿ ನಿಲ್ದಾಣ ತಲುಪಲಿವೆ.

Indian Railways
Indian Railways

ನವದೆಹಲಿ: ದೇಶದಲ್ಲಿ ಇಂದಿನಿಂದ ಆಯ್ದ ನಗರಗಳಲ್ಲಿ ವಿಶೇಷ ರೈಲು ಸೇವೆ ಆರಂಭವಾಗಿದ್ದು, 15 ರೈಲುಗಳು ಸಂಚಾರ ಆರಂಭಿಸಿವೆ.

ನಿನ್ನೆ ಸಂಜೆ 6 ಗಂಟೆಯಿಂದ ಬುಕ್ಕಿಂಗ್​ ಆರಂಭವಾಗಿದ್ದು, ಕೇವಲ ಅರ್ಧಗಂಟೆಯಲ್ಲಿ ಬರೋಬ್ಬರಿ 18 ಸಾವಿರ ಟಿಕೆಟ್​ ಬುಕ್​ ಆಗಿವೆ. ಮೂರು ಗಂಟೆಯಲ್ಲಿ ಒಟ್ಟು 30 ಸಾವಿರ ಟಿಕೆಟ್​ ಬುಕ್​ ಆಗಿವೆ. ಒಟ್ಟು 54 ಸಾವಿರ ಪ್ರಯಾಣಿಕರು ಟಿಕೆಟ್​ ಬುಕ್​ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.

ಈ ರೈಲುಗಳು ದೆಹಲಿಯಿಂದ 15 ಸ್ಥಳಗಳಿಗೆ ಪ್ರಯಾಣ ಬೆಳೆಸಲಿದ್ದು, ದಿಬ್ರುಗಢ​, ಅಗರ್ತಲಾ, ಹೌರಾ, ಪಾಟ್ನಾ, ವಿಲಾಸ್​ಪುರ, ರಾಂಚಿ, ಭುವನೇಶ್ವರ​, ಸಿಕಂದರಾಬಾದ್​, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್​, ಅಹಮದಾಬಾದ್​ ಹಾಗೂ ಜಮ್ಮುವಿನ ತಾವಿ ನಿಲ್ದಾಣ ತಲುಪಲಿವೆ.

ರೈಲ್ವೆ ನಿಲ್ದಾಣದಲ್ಲಿ ಬುಕ್ಕಿಂಗ್​​ ಕೌಂಟರ್​​ ಬಂದ್​ ಆಗಿರುವ ಕಾರಣ ಫ್ಲಾಟ್​ಫಾರ್ಮ್​ ಟಿಕೆಟ್​ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಈ ರೈಲುಗಳಲ್ಲಿ ಯಾವುದೇ ಸಾಮಾನ್ಯ ಬೋಗಿ ಇರುವುದಿಲ್ಲ. ಪ್ರಯಾಣ ಆರಂಭವಾಗುವುದಕ್ಕೂ 24ಗಂಟೆ ಮುಂಚಿತವಾಗಿ ಟಿಕೆಟ್​ ರದ್ಧು ಮಾಡುವ ಅವಕಾಶ ಸಹ ನೀಡಲಾಗಿದೆ.

ಟಿಕೆಟ್​​ ದರ ಇಂತಿದೆ

ದೆಹಲಿಯ ನಿಜಾಮುದ್ದೀನ್​ ನಿಲ್ದಾಣದಿಂದ ಬೆಂಗಳೂರಿಗ ಪ್ರಯಾಣ ಬೆಳೆಸುವ ರಾಜಧಾನಿ ಎಕ್ಸ್​ಪ್ರೆಸ್​​ನಲ್ಲಿ ಎಸಿ 3 ಟೈರ್​​​ 3,830ರೂ, ಎಸಿ ಟೈರ್​ 2ನಲ್ಲಿ 5425 ರೂ, ಎಸಿ ಟೈರ್​​​1ರಲ್ಲಿ ಪ್ರಯಾಣಿಸಲು 6735 ಹಣ ನಿಗದಿಪಡಿಸಲಾಗಿದೆ.

ವಿವಿಧ ರಾಜ್ಯಗಳಿಗೆ ಹೋಗುವ ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದಲ್ಲೇ ತಪಾಸಣೆಗೊಳಪಡಿಸಲು ಇಲಾಖೆ ಮುಂದಾಗಿದ್ದು, ಎಲ್ಲ ಪ್ರಯಾಣಿಕರು ಮಾಸ್ಕ್​ ಹಾಕಿಕೊಳ್ಳುವುದು ಕಡ್ಡಾಯವಾಗಿದೆ. ಎಲ್ಲರಿಗೂ ಸ್ಕ್ರೀನಿಂಗ್​ ಮಾಡಲು ನಿರ್ಧರಿಸಲಾಗಿದೆ. ಒಟ್ಟು 15 ರೈಲುಗಳು ಓಡಾಟ ನಡೆಸವೆ.

ಈಗಾಗಲೇ ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರನ್ನ 366 ಶ್ರಮಿಕ್​​ ವಿಶೇಷ ರೈಲುಗಳ ಮೂಲಕ ಕರೆದುಕೊಂಡು ಬರಲಾಗುತ್ತಿದ್ದು, ಅದರ ಮಧ್ಯೆ ಕೇಂದ್ರ ರೈಲ್ವೆ ಇಲಾಖೆ ಇಂದಿನಿಂದ ಪ್ಯಾಸೆಂಜರ್​ ರೈಲು ಸೇವೆ ಆರಂಭಿಸಿದೆ.

ದೇಶದಲ್ಲಿ ಲಾಕ್​​ಡೌನ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ದೇಶದಲ್ಲಿ ಪ್ರತಿದಿನ 12,000 ಸಾವಿರ ರೈಲು ಸಚಾರ ನಡೆಸುತ್ತಿದ್ದವು. ಇದರಿಂದ ಪ್ರತಿದಿನ ಸರಕು ರೈಲುಗಳಿಂದ 28,032.80 ಕೋಟಿ ರೂ. ಹಾಗೂ ಪ್ರಯಾಣಿಕ ರೈಲುಗಳಿಂದ 12,844.37 ಕೋಟಿ ರೂ. ಲಾಭ ಬರುತ್ತಿತ್ತು. ಲಾಕ್​ಡೌನ್​​ ಪರಿಣಾಮ ರೈಲ್ವೆ ಇಲಾಖೆ ನಷ್ಟದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.