ಮುಂಬೈ: ಭಾರತೀಯ ನೌಕಾಪಡೆಯ ಐದನೇ ಸ್ಕಾರ್ಪೀನ್ ಕ್ಲಾಸ್ ಜಲಾಂತರ್ಗಾಮಿ 'ವಾಗಿರ್' ಅನ್ನು ಮುಂಬೈ ನ ಮಜಾಗನ್ ಡಾಕ್‌ನಲ್ಲಿ ಗುರುವಾರ ಅನಾವರಣ ಮಾಡಲಾಯಿತು. ರಾಜ್ಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್, ಜಲಾಂತರ್ಗಾಮಿ ನೌಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲಾಂಚ್ ಮಾಡಿದರು.
'ವಾಗಿರ್' ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಆರು ಕಲ್ವಾರಿ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಭಾಗವಾಗಿದೆ. ಫ್ರೆಂಚ್ ನೌಕಾ ರಕ್ಷಣಾ ಮತ್ತು ಇಂಧನ ಕಂಪನಿ ಡಿಸಿಎನ್ಎಸ್ ವಿನ್ಯಾಸಗೊಳಿಸಿದ ಜಲಾಂತರ್ಗಾಮಿ ನೌಕೆಗಳನ್ನು ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ -75 ರ ಭಾಗವಾಗಿ ನಿರ್ಮಿಸಲಾಗುತ್ತಿದೆ.
ಆರು ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆಗಳಲ್ಲಿ ಮೊದಲನೆಯದಾದ ಐಎನ್‌ಎಸ್ ಕಲ್ವರಿಯನ್ನು 2017 ರಲ್ಲಿ ಲಾಂಚ್ ಮಾಡಲಾಗಿತ್ತು. ನಂತರ ಖಂಡೇರಿ, ಕಾರಂಜ್ ಮತ್ತು ವೇಲಾ. ಈ ಜಲಾಂತರ್ಗಾಮಿ ನೌಕೆಗಳು ಮೇಲ್ಮೈ ವಿರೋಧಿ ಯುದ್ಧ, ಜಲಾಂತರ್ಗಾಮಿ ವಿರೋಧಿ ಯುದ್ಧ, ಗುಪ್ತಚರ ಸಂಗ್ರಹಣೆ, ಗಣಿ ಹಾಕುವಿಕೆ, ಮತ್ತು ಪ್ರದೇಶದ ಕಣ್ಗಾವಲು ಮುಂತಾದ ಕಾರ್ಯಗಳನ್ನು ನಿರ್ವಹಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.