ನವದೆಹಲಿ: ಗಾಲ್ವಾನ್ ಸಂಘರ್ಷದ ನಂತರ ಚೀನಾದೊಂದಿಗೆ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕದ ಎರಡು ಡ್ರೋಣ್ಗಳನ್ನು ಭಾರತ ಗುತ್ತಿಗೆಗೆ ಪಡೆದುಕೊಂಡಿದ್ದು, ಭಾರತದ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.
ಈ ಡ್ರೋಣ್ಗಳನ್ನು ಭಾರತ, ಚೀನಾ ಗಡಿಯ ಲಡಾಖ್ನಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ಭದ್ರತೆಗಾಗಿ ಬಳಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಭಾರತಕ್ಕೆ ಶಾಕಿಂಗ್! ಮಾತುಕತೆ ಆಡುತ್ತಲ್ಲೇ 3,488 ಕಿ.ಮೀ. ಗಡಿ ಉದ್ದಕ್ಕೂ ಚೀನಾ ರೇಡಾರ್ ಹದ್ದಿನ ಕಣ್ಣು..!
ನವೆಂಬರ್ ಎರಡನೇ ವಾರದಲ್ಲಿ ಅಮೆರಿಕದ ಡ್ರೋಣ್ಗಳು ಭಾರತಕ್ಕೆ ಬಂದಿದ್ದು, ಐಎನ್ಎಸ್ ರಜಲಿ ನೌಕಾನೆಲೆಯಲ್ಲಿ ನವೆಂಬರ್ 21ರಂದು ಕಾರ್ಯಾಚರಣೆ ಆರಂಭಿಸಿವೆ. ಸುಮಾರು 30 ಗಂಟೆಗಳ ಕಾಲ ಹಾರುವ ಸಾಮರ್ಥ್ಯ ಇರುವ ಈ ಡ್ರೋಣ್ಗಳು ಭಾರತದ ಸಾಗರೋತ್ತರ ಭದ್ರತೆ ವಿಚಾರದಲ್ಲಿ ಬಹುಮುಖ್ಯವಾಗಿದೆ.
ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ನೀಡಿದ 'ತುರ್ತು ಖರೀದಿ ಅಧಿಕಾರ'ಗಳ ಅಡಿಯಲ್ಲಿ ಈ ಡ್ರೋಣ್ಗಳನ್ನು ನೌಕಾಪಡೆ ಖರೀದಿ ಮಾಡಿದೆ. ಚೀನಾ ಹಾಗೂ ಭಾರತದ ಸಂಘರ್ಷ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ಈ ಡ್ರೋನ್ಗಳ ಖರೀದಿಗೆ ಅನುಮತಿ ನೀಡಿದೆ.
ಈ ಡ್ರೋಣ್ಗಳಿಗೆ ಅಮೆರಿಕದಿಂದಲೇ ಸಿಬ್ಬಂದಿಯನ್ನು ತರಲಾಗಿದ್ದು, ಆ ಸಿಬ್ಬಂದಿ ನೌಕಾನೆಲೆಯಲ್ಲಿ ಕೆಲಸ ಮಾಡಲಿದ್ದಾರೆ. ಸದ್ಯಕ್ಕೆ ಒಂದು ವರ್ಷದ ಗುತ್ತಿಗೆಯನ್ನು ಪಡೆಯಲಾಗಿದ್ದು, ಇದೇ ರೀತಿಯಲ್ಲಿ 18 ಡ್ರೋಣ್ಗಳನ್ನು ತರಲು ರಕ್ಷಣಾ ಇಲಾಖೆ ಚಿಂತನೆ ನಡೆಸಿದೆ.
ಭಾರತ ಹಾಗೂ ಚೀನಾದ ನಡುವೆ ಸಂಘರ್ಷ ನಡೆಯುತ್ತಿದ್ದು, ಭಾರತದ ಪರವಾಗಿ ಅಮೆರಿಕ ಕೆಲಸ ಮಾಡುತ್ತಿದೆ. ಕೆಲವು ವಿಚಾರಗಳಲ್ಲಿ ಸಂಪೂರ್ಣ ಬೆಂಬಲ ನೀಡಿದೆ. ಈಗ ರಕ್ಷಣಾ ಸ್ವಾಧೀನ ಪ್ರಕ್ರಿಯೆ-2020 ಹಾಗೂ ರಕ್ಷಣಾ ಸ್ವಾಧೀನ ಕೈಪಿಡಿ- 2009ರ ಪ್ರಕಾರ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಗುತ್ತಿಗೆ ಪಡೆದುಕೊಳ್ಳಬಹುದಾಗಿದೆ.