ನವದೆಹಲಿ: ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ತೆಗೆದುಕೊಂಡ ನಿರ್ಧಾರದ ವಿರುದ್ಧ ಆಧುನಿಕ ವೈದ್ಯಕೀಯ ಪದ್ಧತಿಯ ವೈದ್ಯರು ನಾಳೆ ದೇಶದ 10 ಸಾವಿರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತಿಳಿಸಿದೆ.
ಆಯುರ್ವೇದದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಸರ್ಜರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಧುನಿಕ ವೈದ್ಯ ಪದ್ಧತಿಯನ್ನು ಕಲಿಸುವುದು ಹಾಗೂ ಶಸ್ತ್ರ ಚಿಕಿತ್ಸೆಯ ಪ್ರಕ್ರಿಯೆಗಳನ್ನು ಹೇಳಿಕೊಡುವುದಾಗಿ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಹೇಳಿಕೊಂಡಿದ್ದು, ಇದಕ್ಕೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಭಾರತ್ ಬಂದ್: ನಾಳೆ ಏನಿರುತ್ತೆ, ಏನಿರಲ್ಲಾ?
ಪ್ರತಿಭಟನೆಯ ವೇಳೆ ಎಲ್ಲಾ ತುರ್ತು ಸೇವೆಗಳು ಮುಂದುವರಿಯುತ್ತವೆ. ಒಪಿಡಿ ಸೇವೆಗಳು ಲಭ್ಯವಿರುವುದಿಲ್ಲ, ಕೆಲವು ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುವುದಿಲ್ಲ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ಈ ಪ್ರತಿಭಟನೆಯ ನಂತರ ಡಿಸೆಂಬರ್ 11ರಂದು ಬೆಳಗ್ಗೆ ಆರರಿಂದ ಸಂಜೆ 6 ಗಂಟೆಯವರೆಗೆ ಅನಿವಾರ್ಯವಲ್ಲದ ಕೊರೊನಾ ವೈದ್ಯಕೀಯ ಸೇವೆಯಲ್ಲಿ ನಿರತರಾದ ಸಿಬ್ಬಂದಿ ತಮ್ಮ ಕಾರ್ಯದಿಂದ ಹಿಂದೆ ಸರಿಯುವುದಾಗಿ ಒಕ್ಕೂಟ ಹೇಳಿದೆ.