ETV Bharat / bharat

ತಂದೆ ನೋಡಲು ಬಂದ ಯೋಧನಿಗೆ ಅಪಘಾತ.. 18 ದಿನ ಸಾವಿನೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಸೈನಿಕ!

author img

By

Published : Jan 16, 2021, 11:38 AM IST

ತಂದೆ ನೋಡಲು ಬಂದ ಯೋಧರೊಬ್ಬರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು 15 ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ನಿಜಾಮಾಬಾದ್​ನಲ್ಲಿ ನಡೆದಿದೆ.

Indian army soldier died, Indian army soldier died in road accident, Indian army soldier died in a road accident in nizamabad, Degawat Motilal, Degawat Motilal news, ಭಾರತೀಯ ಸೈನಿಕ ಹುತಾತ್ಮ, ರಸ್ತೆ ಅಪಘಾತದಲ್ಲಿ  ಭಾರತೀಯ ಸೈನಿಕ ಹುತಾತ್ಮ, ನಿಜಾಮಾಬಾದ್​ ಜಿಲ್ಲೆಯಲ್ಲಿ ಭಾರತೀಯ ಸೈನಿಕ ಹುತಾತ್ಮ,  ದೇಗಾವತ್ ಮೋತಿಲಾಲ್,  ದೇಗಾವತ್ ಮೋತಿಲಾಲ್ ಸುದ್ದಿ,
ತಂದೆ ನೋಡಲು ಬಂದ ಯೋಧನಿಗೆ ಅಪಘಾತ

ನಿಜಾಮಾಬಾದ್​: ಗಾಯಗೊಂಡಿದ್ದ ತಂದೆಯನ್ನು ನೋಡಲು ರಜೆಯಲ್ಲಿ ಬಂದಿದ್ದ ಯೋಧರೊಬ್ಬರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. 18 ದಿನಗಳವರೆಗೆ ಸಾವು-ಬದುಕು ಮಧ್ಯೆ ಹೋರಾಟ ನಡೆಸಿ ಸೇನಾ ದಿನದಂದೆ ನಿಧನ ಹೊಂದಿದರು.

ಇಂದಲ್ವಾಯ್ ತಾಲೂಕಿನ ಮೇಘನಾಯಕ್ತಂಡದ ಕೆಳ ಮಧ್ಯಮ ವರ್ಗದ ಕುಟುಂಬದ ದೇಗಾವತ್ ಜೋಡಿಯಾನಾಯಕ್ ಮತ್ತು ಜಮ್ಲಿಬಾಯಿ ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಎರಡನೇ ಮಗ ದೇಗಾವತ್ ಮೋತಿಲಾಲ್ (25) ಬಿ.ಟೆಕ್ ಮುಗಿಸಿ 2017 ರಲ್ಲಿ ಸೈನ್ಯಕ್ಕೆ ಸೇರಿದರು.

ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ಸೇವೆ ಸಲ್ಲಿಸಿರುವ ಯೋಧ ಮೋತಿಲಾಲ್​ ತಂದೆ ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕಾಲಿಗೆ ಪೆಟ್ಟಾಗಿದೆ. ಈ ಸುದ್ದಿ ತಿಳಿದ ಅವರು 15 ದಿನಗಳ ರಜೆ ಮೇಲೆ ಒಂದು ತಿಂಗಳ ಹಿಂದೆ ತಮ್ಮ ಊರಿಗೆ ಬಂದರು. ಈ ಸಮಯದಲ್ಲಿಯೇ ಅವರು ರುಪ್ಲನಾಯಕ್​ ತಾಂಡಾಕ್ಕೆ ಸೇರಿದ ಹುಡುಗಿಯನ್ನು ಮದುವೆಯಾಗಲು ನಿಶ್ಚಿತಾರ್ಥ ಮಾಡಿಕೊಂಡರು.

ರಜಾದಿನಗಳ ನಂತರ ಡಿಸೆಂಬರ್ 29 ರಂದು ಅವರು ಪಂಜಾಬ್‌ಗೆ ತೆರಳಲು ಸಿದ್ಧತೆ ಕೈಗೊಂಡಿದ್ದರು. 28 ರಂದು ವಿಮಾನ ಟಿಕೆಟ್​ ತರಲು ತನ್ನ ಸ್ನೇಹಿತನ ಗ್ರಾಮ ಕ್ಯಾಮರೆಡ್ಡಿಗೆ ಬೈಕ್​ನಲ್ಲಿ ತೆರಳಿದ್ದರು. ಹಿಂದಿರುಗುವಾಗ ಸದಾಶಿವನಗರ ವಲಯದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬೈಕ್​ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಮೋತಿಲಾಲ್​ ತಲೆಗೆ ತೀವ್ರ ಪೆಟ್ಟಾಗಿದ್ದು, ಸಂಬಂಧಿಕರು ಆತನನ್ನು ಹೈದರಾಬಾದ್‌ನ ಯಶೋಧಾ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸೇನಾ ಆಸ್ಪತ್ರೆಗೆ ಸಾಗಿಸಲಾಯಿತು.

ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೋತಿಲಾಲ್ ಶುಕ್ರವಾರ ಬೆಳಗ್ಗೆ ನಿಧನರಾದರು. ನನ್ನ ಭೇಟಿ ಮಾಡಲು ಬಂದ ಮಗ ಶಾಶ್ವತವಾಗಿ ದೂರನಾದ ಎಂದು ಪೋಷಕರ ರೋದನೆ ಮುಗಿಲು ಮಟ್ಟಿತ್ತು.

ದೇಗಾವತ್ ಜೋಡಿಯಾ ನಾಯಕ್ ತಮ್ಮ ಮಗನ ವೈದ್ಯಕೀಯ ಚಿಕಿತ್ಸೆಗಾಗಿ 8.72 ಲಕ್ಷ ರೂ. ಖರ್ಚು ಮಾಡಿದ್ದಾರೆ. ಈಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸರ್ಕಾರ ತಮ್ಮ ಕುಟುಂಬದ ನೆರವಿಗೆ ಧಾವಿಸಬೇಕು ಮತ್ತು ಕಿರಿಯ ಮಗನಿಗೆ ಉದ್ಯೋಗ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.