ಜಮ್ಮು-ಕಾಶ್ಮೀರ: ಪಾಕ್ ಆಕ್ರಮಿತ ಕಾಶ್ಮೀರ ಸಮೀಪದ ಕಿಶನ್ ಗಂಗಾ ನದಿಯ ದಡದಲ್ಲಿ ಉಗ್ರರು ದಾಳಿಗೆ ಸಂಚು ರೂಪಿಸುತ್ತಿರುವುದನ್ನು ಪತ್ತೆ ಮಾಡಿರುವ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
-
Troops detected movement on banks of Kishen Ganga River. Immediately, joint operation was launched with J&K Police. 2-3 terrorists were detected trying to transport some items in a tube tied to a rope from far bank of the river. Troops reached and recovered arms: Army Sources https://t.co/5vu2GeRFCU pic.twitter.com/l1YSS78Ecr
— ANI (@ANI) October 10, 2020 " class="align-text-top noRightClick twitterSection" data="
">Troops detected movement on banks of Kishen Ganga River. Immediately, joint operation was launched with J&K Police. 2-3 terrorists were detected trying to transport some items in a tube tied to a rope from far bank of the river. Troops reached and recovered arms: Army Sources https://t.co/5vu2GeRFCU pic.twitter.com/l1YSS78Ecr
— ANI (@ANI) October 10, 2020Troops detected movement on banks of Kishen Ganga River. Immediately, joint operation was launched with J&K Police. 2-3 terrorists were detected trying to transport some items in a tube tied to a rope from far bank of the river. Troops reached and recovered arms: Army Sources https://t.co/5vu2GeRFCU pic.twitter.com/l1YSS78Ecr
— ANI (@ANI) October 10, 2020
ಪಾಕಿಸ್ತಾನ ಪಡೆ ಬೆಂಬಲಿತ ಭಯೋತ್ಪಾದಕರು ಪಾಕ್ ಆಕ್ರಮಿತ ಕಾಶ್ಮೀರದಿಂದ ಕಿಶನ್ ಗಂಗಾ ನದಿಯಲ್ಲಿ ಟ್ಯೂಬ್ಗಳ ಮೂಲಕ ಶಸ್ತ್ರಾಸ್ತ್ರ-ಮದ್ದುಗುಂಡುಗಳನ್ನು ಸಾಗಿಸುತ್ತಿರುವುದನ್ನು ಉತ್ತರ ಕಾಶ್ಮೀರದ ಕೇರನ್ ಸೆಕ್ಟರ್ನಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನೆಯ ಯೋಧರು ನಿನ್ನೆ ಪತ್ತೆ ಹಚ್ಚಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಭಾರತೀಯ ಸೈನಿಕರು ಜಮ್ಮು-ಕಾಶ್ಮೀರ ಪೊಲೀಸರ ಜೊತೆ ಸ್ಥಳಕ್ಕೆ ತಲುಪಿದ್ದಾರೆ.
ಜಂಟಿ ಕಾರ್ಯಾಚರಣೆಯಲ್ಲಿ ನಾಲ್ಕು ಎಕೆ 47 ರೈಫಲ್ಗಳು, 8 ಮ್ಯಾಗಜಿನ್ಗಳು, 240 ಎಕೆ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿದ್ದು, ಕಿಶನ್ ಗಂಗಾ ನದಿಯಲ್ಲಿ ಉಗ್ರರ ಚಲನ-ವಲನದ ದೃಶ್ಯವಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.