ನವದೆಹಲಿ: ಇಂದಿನ ದಿನಗಳಲ್ಲಿ ಜಗತ್ತು ಹವಾಮಾನ ಬದಲಾವಣೆ ದುಷ್ಪರಿಣಾಮ ಅನುಭವಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ಸೇನೆಯು ಕಳೆದ 19 ತಿಂಗಳಿಂದ ಕಾಶ್ಮೀರದ ಸಿಯಾಚಿನ್ ಹಿಮನದಿ ಭಾಗದಲ್ಲಿ ಸುಮಾರು 130.14 ಟನ್ಗಳಷ್ಟು ತ್ಯಾಜ್ಯವನ್ನು ಸ್ವಚ್ಛಗೊಳಿಸಿದೆ.
ಸಿಯಾಚಿನ್ ಸ್ವಚ್ಛ ಅಭಿಯಾನದಡಿ ಸೇನೆ ಕಳೆದ 2018ರ ಜನವರಿಯಿಂದ ಈ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. 130.14 ಟನ್‌ಗಳಲ್ಲಿ 48.14 ಟನ್ ಜೈವಿಕ ವಿಘಟನೆ ಆಗಿದ್ದರೆ, 40 ಟನ್‌ಗಳಲ್ಲಿ ಪ್ಲಾಸ್ಟಿಕ್ ಮತ್ತು ಗಾಜಿನ ತ್ಯಾಜ್ಯ ಸೇರಿವೆ. ಯುದ್ಧ ಸಾಮಗ್ರಿಗಳ ಚಿಪ್ಪುಗಳು ಸೇರಿದಂತೆ ಲೋಹಿಯ ಅಂಶಯುಕ್ತ ತ್ಯಾಜ್ಯ ಸುಮಾರು 41.45 ಟನ್ಗಳಷ್ಟಿದೆ.
-
Under the Siachen Swachhta Abhiyan, Indian Army has cleaned 130 tonnes of garbage from the Siachen Glacier since January 2018. pic.twitter.com/MhCs9yZLxN
— ANI (@ANI) September 24, 2019 " class="align-text-top noRightClick twitterSection" data="
">Under the Siachen Swachhta Abhiyan, Indian Army has cleaned 130 tonnes of garbage from the Siachen Glacier since January 2018. pic.twitter.com/MhCs9yZLxN
— ANI (@ANI) September 24, 2019Under the Siachen Swachhta Abhiyan, Indian Army has cleaned 130 tonnes of garbage from the Siachen Glacier since January 2018. pic.twitter.com/MhCs9yZLxN
— ANI (@ANI) September 24, 2019
ಭಾರತೀಯ ಸೇನೆಯು ಹಿಮನದಿಯಲ್ಲಿ ನಿಯೋಜಿಸಲಾಗಿರುವ ತನ್ನ ಸೈನಿಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಿರುತ್ತದೆ. ಸೇನೆಯ ನಿಯೋಜನೆಯಿಂದಲೇ ವಿಶ್ವದ ಎತ್ತರದ ಯುದ್ಧಭೂಮಿಯಲ್ಲಿ ಇಷ್ಟೊಂದು ಪ್ರಯಾಣದಲ್ಲಿ ತ್ಯಾಜ್ಯ ಕಂಡುಬಂದಿದೆ.
ಹಿಮನದಿಯಿಂದ ಸಂಗ್ರಹಿಸಿದ ತ್ಯಾಜ್ಯ ನಿರ್ವಹಣೆಗೆ ಸೇನೆಯು ಪೇಪರ್ ಬೈಲರ್ ಯಂತ್ರವನ್ನು ಇರಿಸಿದೆ. ಯಂತ್ರದಿಂದ ತ್ಯಾಜ್ಯವನ್ನು ಮರುಬಳಕೆ ಮಾಡಬಹುದಾದ ವಸ್ತುಗಳಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತದೆ. ಲೋಹೀಯ ಅಂಶಗಳುಳ್ಳ ತ್ಯಾಜ್ಯವನ್ನು ಹೊರಹಾಕಲು ಸಹಾಯಕವಾಗುವ ಕೈಗಾರಿಕಾ ಕ್ರಷರ್ ಬಳಸಲು ಸೇನೆ ಚಿಂತಿಸಿದೆ.