ETV Bharat / bharat

ವರ್ಷಾಂತ್ಯದಲ್ಲಿ ಕೋವಿಡ್​ಗೆ ಭಾರತದ ಲಸಿಕೆ ಲಭ್ಯ: ಕೇಂದ್ರ ಆರೋಗ್ಯ ಸಚಿವ - ಕೊರೊನಾ ಲಸಿಕೆ

ಭಾರತದ ಕೋವಿಡ್ ಲಸಿಕೆ ವರ್ಷಾಂತ್ಯದಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅವರು ಭರವಸೆ ನೀಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವ
ಕೇಂದ್ರ ಆರೋಗ್ಯ ಸಚಿವ
author img

By

Published : Aug 23, 2020, 5:07 AM IST

ಘಾಜಿಯಾಬಾದ್ (ಉತ್ತರಪ್ರದೇಶ): ಮಹಾಮಾರಿ ಕೊರೊನಾ ವೈರಸ್​ಗೆ ಈ ವರ್ಷದ ಅಂತ್ಯದೊಳಗೆ ಭಾರತದ ಮೊದಲ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಡಾ.ಹರ್ಷ ವರ್ಧನ್ ಭರವಸೆ ನೀಡಿದ್ದಾರೆ.

ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ಎನ್​ಡಿಆರ್​ಎಫ್​ 10 ಬೆಡ್​ ಆಸ್ಪತ್ರೆ ಉದ್ಘಾಟಿಸಿ ಸಚಿವರು ಮಾತನಾಡಿದರು. ಈಗಾಗಲೇ ನಮ್ಮ ಕೋವಿಡ್-19 ಲಸಿಕೆಯು 3ನೇ ಕ್ಲಿನಿಕಲ್ ಟ್ರಯಲ್​ ಹಂತದಲ್ಲಿದ್ದು, ವರ್ಷದೊಳಗೆ ಲಸಿಕೆ ಬರುತ್ತದೆ ಎಂಬ ಆತ್ಮವಿಶ್ವಾಸ ಇದೆ ಎಂದು ಹೇಳಿದರು.

ಈ 8 ತಿಂಗಳ ಸಮರದಲ್ಲಿ ಭಾರತ ಶೇ.75 ರಷ್ಟು ಗುಣಮುಖ ರೇಟಿಂಗ್ ಹೊಂದಿದೆ. 2.2 ಮಿಲಿಯನ್ ಕೊರೊನಾ ರೋಗಿಗಳು ಗುಣಮುಖರಾಗಿದ್ದು, 7 ಲಕ್ಷ ಜನ ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ಹೋಗಲಿದ್ದಾರೆ ಎಂದು ಸಚಿವರು ತಿಳಿಸಿದರು.

ಸದ್ಯ ಭಾರತದಲ್ಲಿ 1500 ಕೊರೊನಾ ಟೆಸ್ಟಿಂಗ್ ಲ್ಯಾಬ್ ಇದ್ದು, ಶುಕ್ರವಾರ 1 ಮಿಲಿಯನ್ ಟೆಸ್ಟಿಂಗ್ ನಡೆಸಿದ್ದೇವೆ. ಇನ್ನು ಶನಿವಾರ 63,631ಜನ ಗುಣಮುಖರಾಗಿದ್ದು, ಒಂದೇ ದಿನದಲ್ಲಿ ಅತೀ ಹೆಚ್ಚು ಜನ ಡಿಸ್ಚಾರ್ಜ್ ಆದ ದಾಖಲೆಯಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.