ನವದೆಹಲಿ: ಭಾರತ ಕೊರೊನಾ ಮುಕ್ತವಾಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನ COVID-19 ಲಸಿಕೆಗಳಿಗೆ ಅನುಮತಿ ನೀಡಿದ ನಂತರ ಸಚಿವರು ಈ ಹೇಳಿಕೆ ನೀಡಿದ್ದಾರೆ. ಇದು ನಮ್ಮ ದೇಶಕ್ಕೆ ದೊಡ್ಡ ಸಾಧನೆಯಾಗಿದೆ ಎಂದ ಅವರು, ವಿಜ್ಞಾನಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ದೇಶವಾಸಿಗಳನ್ನು ಅಭಿನಂದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಭಾರತ ಧೈರ್ಯದಿಂದ ಕೊರೊನಾ ಯುದ್ಧವನ್ನು ಎದುರಿಸಿದೆ.125 ಜಿಲ್ಲೆಗಳ 286 ಸ್ಥಳಗಳಲ್ಲಿ ಶನಿವಾರ ವ್ಯಾಕ್ಸಿನ್ ಅಣಕು ಡ್ರಿಲ್ ನಡೆಸಲಾಯಿತು. ಕೋ-ವಿನ್ ಅಪ್ಲಿಕೇಶನ್‌ನಲ್ಲಿ ಸುಮಾರು 75 ಲಕ್ಷ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಡ್ರೈ ರನ್ ಯಶಸ್ವಿಯಾಗಿದೆ. 2021 ಆರೋಗ್ಯ ಪರಿಹಾರಕ್ಕಾಗಿ ಸಂಕಲ್ಪದ ವರ್ಷವಾಗಿದ್ದು, ಭಾರತ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದಿದ್ದಾರೆ.