ವೆಲ್ಲಿಂಗ್ಟನ್: ಟೀಂ ಇಂಡಿಯಾ ವಿರುದ್ಧ ನಡೆದ ನಾಲ್ಕನೇ ಟಿ-20 ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡ ಸೂಪರ್ ಓವರ್ನಲ್ಲೇ ಸೋಲು ಕಂಡಿದ್ದು, ಈ ಮೂಲಕ ಸರಣಿಯಲ್ಲಿ ಟೀಂ ಇಂಡಿಯಾ 4-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಟೀಂ ಇಂಡಿಯಾ 8ವಿಕೆಟ್ನಷ್ಟಕ್ಕೆ 165ರನ್ಗಳಿಕೆ ಮಾಡ್ತು. ಇದರ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡ ಕೂಡಲ 20 ಓವರ್ಗಳಲ್ಲಿ 7ವಿಕೆಟ್ನಷ್ಟಕ್ಕೆ 165ರನ್ಗಳಿಕೆ ಮಾಡಿದ್ದರಿಂದ ಸೂಪರ್ ಓವರ್ ನಡೆಸಬೇಕಾದ ಅನಿವಾರ್ಯತೆ ಎದುರಾಯ್ತು. ಕೊನೆ ಓವರ್ನಲ್ಲಿ ನ್ಯೂಜಿಲೆಂಡ್ ತಂಡದ ಗೆಲುವಿಗೆ 7ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಬೌಲಿಂಗ್ ಮಾಡಿದ ಶಾರ್ದೂಲ್ ಠಾಕೂರ್ 4ವಿಕೆಟ್ ಪಡೆದುಕೊಂಡು ಕೇವಲ 6ರನ್ ಬಿಟ್ಟುಕೊಟ್ಟರು.
ಇದಾದ ಬಳಿಕ ಸೂಪರ್ ಓವರ್ನಲ್ಲಿ ಬ್ಯಾಟ್ ಬೀಸಿದ ನ್ಯೂಜಿಲೆಂಡ್ 13ರನ್ಗಳಿಕೆ ಮಾಡಿ, ಕೊಹ್ಲಿ ಪಡೆಗೆ 14ರನ್ ಗೆಲುವಿನ ಟಾರ್ಗೆಟ್ ನೀಡಿತು.ಇದರ ಬೆನ್ನತ್ತಿದ್ದ ಟೀಂ ಇಂಡಿಯಾ ಕೇವಲ 5 ಎಸೆತಗಳಲ್ಲಿ 16ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ಇನ್ನು ನ್ಯೂಜಿಲೆಂಡ್ ಪರ ಸೂಪರ್ ಓವರ್ ಮಾಡಿದ ಥಿಮ್ ಸೌಥಿ ಮತ್ತೊಮ್ಮೆ ದುಬಾರಿ ಎಣಿಸಿಕೊಂಡರು.
ಸೌಥಿ ಮಾಡಿದ ಸೂಪರ್ ಓವರ್
- 2008 ಆಕ್ಲೆಂಡ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು
- 2010 ಕ್ರಿಸ್ಟ್ಚರ್ಚೆನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು
- 2012 ಪಲ್ಲಿಕೆಲ್ಲನಲ್ಲಿ ಶ್ರೀಲಂಕಾ ವಿರುದ್ಧ ಸೋಲು
- 2012 ಪಲ್ಲಿಕೆಲ್ಲನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು
- 2019ರಲ್ಲಿ ಲಾರ್ಡ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು
- 2019ರಲ್ಲಿ ಆಕ್ಲೆಂಡ್ ಇಂಗ್ಲೆಂಡ್ ವಿರುದ್ಧ ಸೋಲು
- 2020ರಲ್ಲಿ ಹ್ಯಾಮಿಲ್ಟನ್ ಇಂಡಿಯಾ ವಿರುದ್ಧ ಸೋಲು