ETV Bharat / bharat

ಭಾರತ-ಯುಎಸ್ 2+2 ಮಾತುಕತೆ ವೇಳೆ 'BECA' ಒಪ್ಪಂದಕ್ಕೆ ಸಹಿ ಸಾಧ್ಯತೆ - ಭಾರತ-ಯುಎಸ್ BECA ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ

ಇದೇ ಅ.26,27 ರಂದು ನವದೆಹಲಿಯಲ್ಲಿ ನಡೆಯಲಿರುವ ಭಾರತ ಹಾಗೂ ಅಮೆರಿಕ ಎರಡೂ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರ ನಡುವಿನ 2 + 2 ಮಾತುಕತೆ ವೇಳೆ ಭೂವೈಜ್ಞಾನಿಕ ಸಹಕಾರಕ್ಕಾಗಿ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ (BECA)ಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಈ ಸಂಬಂಧ ಈಗಾಗಲೇ ಉಭಯ ದೇಶಗಳ ನಡುವೆ ಮಾತುಕತೆ ನಡೆದಿದೆ.

end
ಭಾರತ-ಯುಎಸ್
author img

By

Published : Oct 19, 2020, 5:58 PM IST

ನವದೆಹಲಿ: ಚೀನಾ, ಭಾರತ ಮತ್ತು ಯುಎಸ್​ ಜೊತೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ನಿಕಟ ಸಂಬಂಧವನ್ನು ಬೆಳೆಸುವ ಯತ್ನವಾಗಿ ಇದೇ ಅ.26, 27 ರಂದು ನವದೆಹಲಿಯಲ್ಲಿ ನಡೆಯಲಿರುವ ಭಾರತ ಹಾಗೂ ಅಮೆರಿಕ ಎರಡೂ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರ ನಡುವಿನ 2+2 ಮಾತುಕತೆ ವೇಳೆ ಭೂವೈಜ್ಞಾನಿಕ ಸಹಕಾರಕ್ಕಾಗಿ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ (BECA)ಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

ಲಾಜಿಸ್ಟಿಕ್ಸ್ ಎಕ್ಸ್ಚೇಂಜ್ ಮೆಮೋರಾಂಡಮ್ ಆಫ್ ಅಗ್ರಿಮೆಂಟ್ ಮತ್ತು ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದದ ನಂತರ ಭಾರತ ಮತ್ತು ಯುಎಸ್ ನಡುವೆ ನಡೆದ 2016 ಮತ್ತು 2018 ಒಪ್ಪಂದದ ನಂತರ ಸಹಿ ಹಾಕಲಿರುವ ಮೂರನೇ ಒಪ್ಪಂದ ಇದಾಗಿದೆ.

ಅಕ್ಟೋಬರ್ 26-27ರಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪೆರ್ ಅವರ ನಡುವಿನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್​ ಅವರು ಭೌಗೋಳಿಕ ಸಹಕಾರವನ್ನು ಹೆಚ್ಚಿಸುವ ಕುರಿತು ಉಭಯ ದೇಶಗಳ ಸಶಸ್ತ್ರ ಪಡೆಗಳು ಪರಸ್ಪರ ಮಾತುಕತೆ ಆರಂಭಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಒಪ್ಪಂದದ ಕುರಿತು ಉಭಯ ದೇಶಗಳ ನಡುವೆ ಮಾತುಕತೆ ಪೂರ್ಣಗೊಂಡಿದ್ದು, ಅಮೆರಿಕ ಚುನಾವಣೆ ನಂತರದ ಮಾತುಕತೆ ವೇಳೆ ಸಹಿ ಹಾಕಲು ಭಾರತ-ಅಮೆರಿಕ ಸಿದ್ಧವಾಗಿವೆ ಎನ್ನಲಾಗ್ತಿದೆ.

BECA(Basic Exchange and Cooperation Agreement)ಒಪ್ಪಂದವು ಕ್ರೂಸ್, ಖಂಡಾಂತರ ಕ್ಷಿಪಣಿಗಳು ಮತ್ತು ಡ್ರೋನ್‌ಗಳಂತಹ ಶಸ್ತ್ರಾಸ್ತ್ರಗಳ ಮಿಲಿಟರಿ ನಿಖರತೆಯನ್ನು ಹೆಚ್ಚಿಸಲು ಅನುಕೂಲವಾಗಲಿದೆ ಎನ್ನಲಾಗಿದೆ.

ಕಳೆದ 15 ವರ್ಷಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾತ್ಮಕ ಸಂಬಂಧ ಉತ್ತಮಗೊಂಡಿದ್ದು, ಭಾರತವು ಅಮೆರಿಕದಿಂದ ಸುಮಾರು 20 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಉಪಕರಣಗಳನ್ನು ಖರೀದಿಸಿದೆ.

ಹೀಗಾಗಿ ಭಾರತ ಮತ್ತು ಯುಎಸ್ ರಕ್ಷಣಾ ಮತ್ತು ಭದ್ರತಾ ಕ್ಷೇತ್ರದಲ್ಲಿ ಬಹಳ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತೀಯ ನೌಕಾಪಡೆಯು ಇತ್ತೀಚೆಗೆ ಅಮೆರಿಕದ ಎಂಹೆಚ್ -60 ರೋಮಿಯೋ ಜಲಾಂತರ್ಗಾಮಿ ವಿರೋಧಿ ಯುದ್ಧ ಮಲ್ಟಿರೋಲ್ ಚಾಪರ್ ಗಳನ್ನು ತನ್ನ ಅವಶ್ಯಕತೆಗಳಿಗಾಗಿ ಬಳಸಿಕೊಂಡಿದೆ.

ಮುಂದಿನ ವರ್ಷ ಅಮೆರಿಕದ ಸೈನಿಕರೊಂದಿಗೆ 'ಯುಧ್ ಅಭ್ಯಾಸ್' ಮತ್ತು 'ವಜ್ರಾ ಪ್ರಹಾರ್' ಅನ್ನು ನಡೆಸಲು ಸೇನೆಯೊಂದಿಗೆ ಉಭಯ ತಂಡಗಳು ನಿಯಮಿತವಾಗಿ ಮಿಲಿಟರಿ ಅಭ್ಯಾಸ ನಡೆಸಲಿದ್ದು, ನವೆಂಬರ್‌ನಲ್ಲಿ ಹಿಂದೂ ಮಹಾಸಾಗರದಲ್ಲಿ ನಡೆಯಲಿರುವ ಮಲಬಾರ್ ಸರಣಿ ಅಭ್ಯಾಸದ ವೇಳೆ ಆಸ್ಟ್ರೇಲಿಯಾ ಮತ್ತು ಜಪಾನೀಸ್ ನೌಕಾಪಡೆಗಳೊಂದಿಗಿನ ಭಾರತ ಭಾಗವಹಿಸಲು ಸಜ್ಜಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.