ETV Bharat / bharat

ಫ್ರೆಂಡ್ಸ್​​ ಫಸ್ಟ್​: ನೆರೆ ದೇಶಗಳಿಗೂ ಕೋವಿಡ್ ಲಸಿಕೆ ನೀಡಲಿರುವ ಭಾರತ

ದೇಶದಲ್ಲಿ ಕೋವಿಡ್ ಲಸಿಕೆಯ 2ನೇ ಹಂತದ ಡ್ರೈ ರನ್​ ನಾಳೆ ನಡೆಯಲಿದೆ. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೂ ಲಸಿಕೆ ವಿತರಣೆಯಾಗಲಿದೆ. ಇನ್ನೊಂದೆಡೆ, ಭಾರತ ನೆರೆಯ ರಾಷ್ಟ್ರಗಳಿಗೂ ಲಸಿಕೆ ಪೂರೈಸುವ ಇಂಗಿತ ವ್ಯಕ್ತಪಡಿಸಿದೆ.

Covid vaccines
Covid vaccines
author img

By

Published : Jan 7, 2021, 8:17 PM IST

ನವದೆಹಲಿ: ಕೊರೊನಾ ವೈರಸ್ ವಿರುದ್ಧ ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲು ಈಗಾಗಲೇ ಎರಡು ಲಸಿಕೆಗಳಿಗೆ ಔಷಧ ಮಹಾನಿಯಂತ್ರಕರು ಒಪ್ಪಿಗೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಎಲ್ಲ ರಾಜ್ಯಗಳಿಗೂ ಇದರ ರವಾನೆ ಆಗಲಿದೆ. ದೇಶದಲ್ಲಿ ನಾಳೆ ಎರಡನೇ ಹಂತರ ಡ್ರೈ ರನ್​ ನಡೆಯಲಿದ್ದು, ಇದಾದ ಬಳಿಕ ಎಲ್ಲ ರಾಜ್ಯಗಳಿಗೂ ಕೋವಿಡ್​ ವ್ಯಾಕ್ಸಿನ್​ ರವಾನೆಯಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.

ಇದರ ಬೆನ್ನಲ್ಲೇ ಮಹತ್ವದ ಮಾಹಿತಿ ಹೊರಬಿದ್ದಿದ್ದು, ನೆರೆಯ ರಾಷ್ಟ್ರಗಳಿಗೂ ಕೊರೊನಾ ಲಸಿಕೆ ನೀಡಲು ಭಾರತ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ಬಾಂಗ್ಲಾದೇಶ, ಭೂತಾನ್​, ನೇಪಾಳ, ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನಕ್ಕೂ ವ್ಯಾಕ್ಸಿನ್​ ವಿತರಣೆ ಮಾಡಲು ನಿರ್ಧರಿಸಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಇದರ ಬಗ್ಗೆ ಭರವಸೆ ನೀಡಿದ್ದಾರೆ.

ಓದಿ: ತೈಲ ದರ ಏರಿಕೆ, ರೈತರ ಪ್ರತಿಭಟನೆ: ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾದರಿ(HCQ model) ರೀತಿಯಲ್ಲಿ ಈ ಲಸಿಕೆ ರಫ್ತು ಮಾಡಲಿದೆ ಎಂದು ತಿಳಿದು ಬಂದಿದೆ. ಭಾರತದೊಂದಿಗೆ ಅತಿ ಹೆಚ್ಚು ಒಡನಾಟ ಹೊಂದಿರುವ ನೆರೆಯ ರಾಷ್ಟ್ರಗಳಿಗೆ ಕೋವಿಡ್ ಲಸಿಕೆ ವಿತರಣೆಯಾಗಲಿದೆ. ಆದರೆ ಇಲ್ಲಿಯವರೆಗೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಭಾರತದಿಂದ ಲಸಿಕೆ ತರಿಸಿಕೊಳ್ಳಲು ನೇಪಾಳ ಈಗಾಗಲೇ 12 ಮಿಲಿಯನ್​ ಡೋಸ್​, ಬಾಂಗ್ಲಾದೇಶ 30 ಮಿಲಿಯನ್​ ಡೋಸ್​ ಆರ್ಡರ್​ ಮಾಡಿವೆ ಎಂದು ವರದಿಯಾಗಿದೆ.

ಭಾರತ ಬಯೋಟೆಕ್​ನ ಕೊವ್ಯಾಕ್ಸಿನ್ ಹಾಗೂ ಸೆರಂನ ಕೋವಿಶೀಲ್ಡ್​ ಲಸಿಕೆ ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲು ದೇಶದಲ್ಲಿ ಅನುಮತಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.