ನವದೆಹಲಿ: ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಒಪ್ಪಿಕೊಂಡಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಯನ್ನ ಭಾರತೀಯ ವಿದೇಶಾಂಗ ಇಲಾಖೆ ಅಲ್ಲಗಳೆದಿದೆ.
ಭಾರತೀಯ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈ ಶಂಕರ್ ಪಾಕ್ ಪ್ರಧಾನಿ ಹಾಗೂ ವಿದೇಶಾಂಗ ಸಚಿವರಿಗೆ ಪಾಕ್ ಸೇರಿದಂತೆ ದೇಶದ ಎಲ್ಲ ನೆರೆಯ ರಾಷ್ಟ್ರಗಳೊಂದಿಗೆ ಶಾಂತಿಯಿಂದರಲು ಬಯಸುತ್ತದೆ. ಈ ಸಂಬಂಧ ಮಾತುಕತೆಗೆ ಸಿದ್ಧ ಎಂದು ಪತ್ರ ಬರೆದಿದ್ದರು ಎಂದು ಪಾಕ್ ಹೇಳಿಕೊಂಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು.
ಈ ಹಿನ್ನೆಲೆಯಲ್ಲಿ ಇಂದು ಹೇಳಿಕೆ ನೀಡಿರುವ ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಭಾರತ ಸಹಜವಾಗಿ ನೆರ ಹೊರೆ ರಾಷ್ಟ್ರಗಳಿಂದ ಶಾಂತಿ ಹಾಗೂ ಸಹಕಾರ ಬಯಸುತ್ತದೆ. ಹಾಗಾಗಿ ಪಾಕಿಸ್ತಾನದೊಂದಿಗೂ ಶಾಂತಿ ಬಯಸುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಶ್ವಾಸ ಹಾಗೂ ಹಿಂಸೆ ಹಾಗೂ ಭಯೋತ್ಪಾದನೆ ಮುಕ್ತ ಪರಿಸರವನ್ನ ಭಾರತ ಬಯಸುತ್ತದೆ ಎಂದು ಪ್ರಧಾನಿ ಹಾಗೂ ಭಯೋತ್ಪಾದನೆಯ ಕರಿ ನೆರಳಿನಿಂದ ಹೊರ ಬಂದ ಪರಿಸ್ಥಿತಿಯನ್ನ ಎದುರ ನೋಡುತ್ತಿರುವುದಾಗಿ ಭಾರತೀಯ ವಿದೇಶಾಂಗ ಇಲಾಖೆ ಬಯಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ ಎಂಬುದನ್ನ ವಿದೇಶಾಂಗ ಇಲಾಖೆ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಪುಲ್ವಾಮದಲ್ಲಿ 40 ಸಿಆರ್ಪಿಎಫ್ ಯೋಧರು ಸಾವನ್ನಪ್ಪಿದ ಬಳಿಕ ಭಾರತ - ಪಾಕ್ ನಡುವಣ ಸಂಬಂಧದಲ್ಲಿ ಭಾರಿ ಕಂದಕ ಏರ್ಪಟ್ಟಿತ್ತು. ಇದೇ ವಿಷಯವಾಗಿ ಎರಡೂ ರಾಷ್ಟ್ರಗಳ ನಡುವೆ ಯುದ್ಧದ ಕಾರ್ಮೋಡ ಸಹ ಆವರಿಸಿತ್ತು.