ETV Bharat / bharat

24 ಗಂಟೆಯಲ್ಲಿ 65 ಸಾವಿರಕ್ಕೂ ಅಧಿಕ ಸೋಂಕಿತರು ಗುಣಮುಖ... ದೇಶದಲ್ಲಿ ಶೇ.77ರಷ್ಟು ಚೇತರಿಕೆ

ದೇಶಾದ್ಯಂತ ಕೊರೊನಾ ವೈರಸ್​ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಕೂಡ ಡಿಸ್ಚಾರ್ಜ್​​ ಆಗುತ್ತಿರುವ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ.

Coronavirus
Coronavirus
author img

By

Published : Sep 1, 2020, 7:14 PM IST

Updated : Sep 1, 2020, 7:22 PM IST

ನವದೆಹಲಿ: ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗ್ತಿದ್ದು, ಇದರ ಮಧ್ಯೆ ಕಳೆದ 24 ಗಂಟೆಯಲ್ಲಿ ದಾಖಲೆಯ 65 ಸಾವಿರಕ್ಕೂ ಅಧಿಕ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್​​​ ಆಗಿದ್ದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಸದ್ಯ ದೇಶದಲ್ಲಿ ಗುಣಮುಖ ಸಂಖ್ಯೆ ಸಕ್ರಿಯ ಪ್ರಕರಣಗಳಿಗಿಂತಲೂ 3.61ರಷ್ಟು ಹೆಚ್ಚಾಗಿದ್ದು , ಇದರ ಪ್ರಮಾಣ ಶೇ 77ರಷ್ಟಿದೆ. ಜತೆಗೆ ದೇಶಾದ್ಯಂತ ಈಗಾಗಲೇ 4.3 ಕೋಟಿ ಕೊರೊನಾ ಟೆಸ್ಟ್​ ನಡೆಸಲಾಗಿದೆ. ಕಳೆದ ಎರಡು ವಾರದಲ್ಲಿ 1,22,66,514ರಷ್ಟು ಕೊರೊನಾ ಟೆಸ್ಟ್​ ನಡೆಸಲಾಗಿದ್ದು, ತಮಿಳುನಾಡು, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಅತಿ ಹೆಚ್ಚು ಟೆಸ್ಟ್​ ನಡೆಸಲಾಗಿದೆ.

ಕಳೆದ 24 ಗಂಟೆಯಲ್ಲಿ 10 ಲಕ್ಷ ಕೊರೊನಾ ಟೆಸ್ಟ್​ ನಡೆಸಲಾಗಿದ್ದು, ಸದ್ಯ 36,91,167 ಸಕ್ರಿಯ ಪ್ರಕರಣಗಳ ಪೈಕಿ 7,85,996 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 28,39,883 ಜನರು ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದು, 65,288 ಜನರು ಸಾವನ್ನಪ್ಪಿದ್ದಾರೆ.

Last Updated : Sep 1, 2020, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.