ಮುಂಬೈ: ಪಾಕ್ ನೆಲದಲ್ಲಿ ಆಯೋಜನೆಗೊಳ್ಳಬೇಕಾಗಿದ್ದ ಏಷ್ಯಾ ಕಪ್ ಟಿ-20 ಟೂರ್ನಿ ಇದೀಗ ಬೇರೆ ಕಡೆ ಸ್ಥಳಾಂತರಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. ಹೀಗಾಗಿ ಏಷ್ಯಾ ಕಪ್ ಟೂರ್ನ್ಮೆಂಟ್ ಆತಿಥ್ಯ ವಹಿಸುವ ಕನಸು ಕಂಡಿದ್ದ ಪಾಕಿಸ್ತಾನಕ್ಕೆ ನಿರಾಸೆ ಉಂಟಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗಂಗೂಲಿ, ಈ ಸಲದ ಏಷ್ಯಾ ಕಪ್ ದುಬೈನಲ್ಲಿ ನಡೆಯಲಿದ್ದು, ಭಾರತ-ಪಾಕಿಸ್ತಾನ ಎರಡು ತಂಡಗಳು ಭಾಗಿಯಾಗಲಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 3ರಂದು ಏಷಿಯನ್ ಕ್ರಿಕೆಟ್ ಕೌನ್ಸಿಲ್ ಸಭೆ ನಡೆಯಲಿದೆ ಎಂದು ಗಂಗೂಲಿ ತಿಳಿಸಿದ್ದಾರೆ.
ಪಾಕಿಸ್ತಾನದ ನೆಲದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದ ಕಾರಣ ಹಾಗೂ ಭದ್ರತೆಯ ದೃಷ್ಠಿಯಿಂದ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಕ್ರಿಕೆಟ್ ತಂಡಗಳು ಹಿಂದೇಟು ಹಾಕಿದ್ದವು. ಹೀಗಾಗಿ ಟೂರ್ನಿ ಬೇರೆ ಕಡೆ ಸ್ಥಳಾಂತರಗೊಂಡಿದೆ. 2012-13ರಿಂದಲೂ ಭಾರತ-ಪಾಕ್ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ.
-
BCCI President Sourav Ganguly, in Kolkata (West Bengal), when asked 'it is being said that India won't play in Asia Cup if Pakistan participates in it': Next Asia Cup will be held in Dubai. There is nothing like that, both the countries will play. pic.twitter.com/pvOdp8OHpc
— ANI (@ANI) February 28, 2020 " class="align-text-top noRightClick twitterSection" data="
">BCCI President Sourav Ganguly, in Kolkata (West Bengal), when asked 'it is being said that India won't play in Asia Cup if Pakistan participates in it': Next Asia Cup will be held in Dubai. There is nothing like that, both the countries will play. pic.twitter.com/pvOdp8OHpc
— ANI (@ANI) February 28, 2020BCCI President Sourav Ganguly, in Kolkata (West Bengal), when asked 'it is being said that India won't play in Asia Cup if Pakistan participates in it': Next Asia Cup will be held in Dubai. There is nothing like that, both the countries will play. pic.twitter.com/pvOdp8OHpc
— ANI (@ANI) February 28, 2020
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಮಾತನಾಡಿದ್ದ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಸದಸ್ಯ ನಿಜಾಮುದ್ದೀನ್ ಚೌಧರಿ, ಏಷ್ಯಾ ಕಪ್ ಆಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಪಾಕಿಸ್ತಾನ ಈ ಟೂರ್ನಿಯ ಆಯೋಜಕರಾಗಿದ್ದು, ಒಂದು ವೇಳೆ ಭಾರತ ಪಾಕ್ ಪ್ರವಾಸ ಕೈಗೊಳ್ಳಲು ನಿರಾಕರಿಸಿದರೆ ಟೂರ್ನಿ ನಡೆಯುವ ಸ್ಥಳ ಬದಲಾಗುವ ಸಾಧ್ಯತೆ ಇದೆ ಎಂದಿದ್ದರು.