ETV Bharat / bharat

'ಹೆಚ್ಚು ಪ್ರಜಾಪ್ರಭುತ್ವ ಇರುವ ಕಾರಣದಿಂದ ಸುಧಾರಣೆ ಕಷ್ಟ': ನೀತಿ ಆಯೋಗ - ನೀತಿ ಆಯೋಗದ ಮುಖ್ಯಸ್ಥ ಅಮಿತಾಬ್ ಕಾಂತ್ ಹೇಳಿಕೆ

ಹೆಚ್ಚು ಪ್ರಜಾಪ್ರಭುತ್ವ ಕಾರಣದಿಂದ ಭಾರತದಲ್ಲಿ ಕಠಿಣ ಸುಧಾರಣೆಗಳನ್ನು ಮಾಡುವುದು ಕಷ್ಟ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.

amitabh kant
ಅಮಿತಾಭ್ ಕಾಂತ್​
author img

By

Published : Dec 8, 2020, 4:42 PM IST

ನವದೆಹಲಿ: 'ಹೆಚ್ಚು ಪ್ರಜಾಪ್ರಭುತ್ವ' ಇರುವುದರಿಂದ ಭಾರತದಲ್ಲಿ ಕಠಿಣ ಸುಧಾರಣೆಗಳನ್ನು ಕೈಗೊಳ್ಳುವುದು ಕಷ್ಟವಾಗುತ್ತಿದೆ ಎಂದುನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.

ನಿಯತಕಾಲಿಕೆಯೊಂದರ ವರ್ಚುವಲ್ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಅಮಿತಾಭ್ ಕಾಂತ್ ದೇಶವನ್ನು ಸ್ಪರ್ಧಾತ್ಮಕವಾಗಿಸಲು ಹೆಚ್ಚಿನ ಸುಧಾರಣೆಗಳನ್ನು ಮಾಡಬೇಕಾಗಿದೆ. ಗಣಿಗಾರಿಕೆ, ಕಲ್ಲಿದ್ದಲು, ಕಾರ್ಮಿಕ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರವು ಸುಧಾರಣೆ ಕೈಗೊಳ್ಳಲು ರಾಜಕೀಯ ಹಿತಾಸಕ್ತಿ ಅವಶ್ಯಕ ಎಂದು ಹೇಳಿರುವ ಅಮಿತಾಭ್ ಕಾಂತ್ ಸುಧಾರಣೆಗಳು ಸ್ವತಃ ರಾಜ್ಯಗಳಿಂದಲೇ ಆರಂಭವಾಗಬೇಕು. 10-12 ರಾಜ್ಯಗಳ ಅಭಿವೃದ್ಧಿ ದರ ಹೆಚ್ಚಿದೆ. ಇನ್ನೂ ಕೆಲವು ರಾಜ್ಯಗಳ ಅಭಿವೃದ್ಧಿ ಕುಂಠಿತಾವಾಗಿದೆ. ಕೇಂದ್ರಾಡಳಿತ ಪ್ರದೇಶಗಳಿಗೂ ಕೂಡಾ ಸ್ಪರ್ಧಾತ್ಮಕವಾಗಿರುವಂತೆ ನೋಡಿಕೊಳ್ಳಬೇಕಿದೆ ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ರೈತ ಸಾವು

ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಕನಿಷ್ಠ ಬೆಂಬಲ ಬೆಲೆ ಹಾಗೂ ಮಂಡಿಗಳು ಉಳಿಯುತ್ತವೆ. ಇದನ್ನು ರೈತರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರು ಆಯ್ಕೆಯನ್ನು ಹೊಂದಿರಬೇಕು. ಇದರಿಂದ ಅವರು ಪ್ರಯೋಜನ ಹೊಂದುತ್ತಾರೆ ಎಂದು ಭರವಸೆ ನೀಡಿದ್ದಾರೆ.

ಇದರ ಜೊತೆಗೆ ಈಗ ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಸುಧಾರಣಾ ಕಾಯ್ದೆಗಳು ರೈತರ ಹಿತಾಸಕ್ತಿಗೆ ಪೂರಕವಾಗಿವೆ. ಇವುಗಳಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ನಿರ್ಧಾರವನ್ನು ಅಮಿತಾಭ್ ಕಾಂತ್ ಸಮರ್ಥಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.