ETV Bharat / bharat

ಮಾಲ್ಡೀವ್ಸ್​ ಕೋವಿಡ್​ ಹೋರಾಟಕ್ಕೆ 250 ಮಿಲಿಯನ್​ ಡಾಲರ್​ ಸಾಲ ಕೊಟ್ಟ ಭಾರತ: ಮೋದಿ ನೆರವಿಗೆ ಶ್ಲಾಘನೆ - ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್

ಭಾರತ ಮಾಲ್ಡೀವ್ಸ್​ಗೆ 250 ಮಿಲಿಯನ್ ಡಾಲರ್ ಸಾಲ ವಿಸ್ತರಿಸಿದ್ದು, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಸಂತಸ ವ್ಯಕ್ತಪಡಿಸಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷರ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

modi
modi
author img

By

Published : Sep 21, 2020, 4:09 PM IST

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಪರಿಣಾಮವನ್ನು ತಗ್ಗಿಸಲು ಭಾರತ ಮಾಲ್ಡೀವ್ಸ್​ಗೆ 250 ಮಿಲಿಯನ್ ಡಾಲರ್ ಸಾಲ ವಿಸ್ತರಿಸಿದೆ.

ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಸಂತಸ ವ್ಯಕ್ತಪಡಿಸಿದ್ದು, ಇಬ್ರಾಹಿಂ ಮೊಹಮ್ಮದ್ ಸೊಲಿಹ್ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಭಾರತ ಸರ್ಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿ, "ಮಾಲ್ಡೀವ್ಸ್​​ಗೆ ಸ್ನೇಹಿತನ ಅಗತ್ಯವಿರುವಾಗ ಭಾರತ ಯಾವಾಗಲೂ ಜೊತೆಗಿರುತ್ತದೆ. 250 ಮಿಲಿಯನ್ ಡಾಲರನ್ನು ಅಧಿಕೃತ ಆರ್ಥಿಕ ಸಹಾಯವಾಗಿ ಹಸ್ತಾಂತರಿಸಿದಕ್ಕಾಗಿ ಪಿಎಂ ನರೇಂದ್ರ ಮೋದಿ, ಸರ್ಕಾರ ಮತ್ತು ಭಾರತದ ಜನರ ಔದಾರ್ಯಕ್ಕೆ ನನ್ನ ಪ್ರಾಮಾಣಿಕ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.

  • Appreciate your warm sentiments, President @ibusolih! As close friends and neighbours, India and Maldives will continue to support each other in our fight against the health and economic impact of COVID-19. https://t.co/esNRBWJxZg

    — Narendra Modi (@narendramodi) September 21, 2020 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, "ಆಪ್ತ ಸ್ನೇಹಿತರು ಮತ್ತು ನೆರೆಹೊರೆಯವರಾಗಿ, ಭಾರತ ಮತ್ತು ಮಾಲ್ಡೀವ್ಸ್ ಕೋವಿಡ್-19 ಆರೋಗ್ಯ ಮತ್ತು ಆರ್ಥಿಕ ಪ್ರಭಾವದ ವಿರುದ್ಧದ ಹೋರಾಟದಲ್ಲಿ ಪರಸ್ಪರ ಬೆಂಬಲವನ್ನು ಮುಂದುವರಿಸಲಿದೆ" ಟ್ವೀಟ್ ಮಾಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ನಡುವಿನ ವರ್ಚುವಲ್ ಸಭೆಯ ನಂತರ ಸಾಲ ವಿಸ್ತರಿಸುವುದಾಗಿ ಘೋಷಣೆ ಮಾಡಲಾಗಿತ್ತು.

ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ಭಾರತದ ಆರ್ಥಿಕ ಸಹಾಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿ, ಮತ್ತು ಹಿಂದಿಯಲ್ಲಿ ಮಾತನಾಡುತ್ತಾ ಭಾರತವನ್ನು ಮಾಲ್ಡೀವ್ಸ್​ನ "ಮಹಾನ್ ಮಿತ್ರ" ಎಂದು ಬಣ್ಣಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.