ನವದೆಹಲಿ: ಕಳೆದೊಂದು ದಿನದಲ್ಲಿ ದೇಶದಲ್ಲಿ 3,390 ಹೊಸ ಪಾಸಿಟಿವ್ ಕೇಸ್ ವರದಿಯಾಗಿದ್ದು, ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 56,342ಕ್ಕೇರಿದೆ.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 17,974ಕ್ಕೇರಿದ್ದು, ಈವರೆಗೆ ಇಲ್ಲಿ 694 ಜನ ಸಾವನ್ನಪ್ಪಿದ್ದಾರೆ. ಗುಜರಾತ್ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 7,012ಕ್ಕೇರಿದ್ದು, 425 ಜನ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ರಾಜಧಾನಿ ದೆಹಲಿಯಲ್ಲಿ 5,980 ಜನರಿಗೆ ಕೊರೊನಾ ಸೋಂಕು ತಗುಲಿದ್ದರೆ, ತಮಿಳುನಾಡಿನಲ್ಲಿ ಈವರೆಗೆ 5409 ಕೊರೊನಾ ಪ್ರಕರಣ ವರದಿಯಾಗಿದೆ.
ಕಳೆದ 24 ಗಂಟೆಯಲ್ಲಿ 1,273 ಮಂದಿ ಗುಣಮುಖ:
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 1,273 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು ಸೋಂಕಿತರದಲ್ಲಿ 16,539 ಜನ ಗುಣಮುಖರಾಗಿದ್ದು, ದಿನದಿಂದ ದಿನಕ್ಕೆ ದೇಶದಲ್ಲಿ ಗುಣಮುಖರ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ. ಈ ತಿಂಗಳಿನಲ್ಲಿ 2 ದಿನ ಬಿಟ್ಟರೆ ಉಳಿದೆಲ್ಲಾ ದಿನಗಳಲ್ಲೂ 10ಸಾವಿರಕ್ಕಿಂತ ಹೆಚ್ಚು ಜನ ಗುಣಮುಖರಾಗಿದ್ದಾರೆ. ಮೇ 6ರಂದು 1,456 ಜನ ಗುಣಮುಖರಾಗಿದ್ದರು. ಇದು ಈವರೆಗಿನ ಅತಿ ಹೆಚ್ಚು ಒಂದೇ ದಿನದ ಗುಣಮುಖರಾದವರ ಸಂಖ್ಯೆ.