ನವದೆಹಲಿ: ಕೊರೊನಾ ಸೋಂಕಿನ ಕಾರಣಕ್ಕೆ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಯಾನ ಸೇವೆಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದು, ಈ ನಿರ್ಬಂಧವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 'ಕೋವಿಡ್-19ಗೆ ಸಂಬಂಧಿಸಿದ ಪ್ರಯಾಣ ಮತ್ತು ವೀಸಾ ನಿರ್ಬಂಧಗಳು' ಎಂಬ ಅಧಿಸೂಚನೆಯ ಅಡಿ ಈ ಘೋಷಣೆ ಮಾಡಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸೇವೆಗೆ ಇದ್ದ ನಿರ್ಬಂಧವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ
"ಈ ನಿರ್ಬಂಧವು ಅಂತಾರಾಷ್ಟ್ರೀಯ ಸರಕು ಸಾಗಣೆ ಹಾಗೂ ಮತ್ತು ಡಿಜಿಸಿಎ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಂಗಳೂರು-ಮೈಸೂರು ನಡುವೆ ವಿಮಾನಯಾನ ಸೇವೆ ಆರಂಭಕ್ಕೆ ಮುಹೂರ್ತ ಫಿಕ್ಸ್
ಈ ತಿಂಗಳ ಆರಂಭದಲ್ಲಿ, ಡಿಜಿಸಿಎ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟದ ನಿಷೇಧವನ್ನು ನವೆಂಬರ್ 30ರವರೆಗೆ ವಿಸ್ತರಿಸಿದ್ದು, ಈಗ ಮತ್ತೆ ಒಂದು ತಿಂಗಳ ಕಾಲ ನಿರ್ಬಂಧಿಸಿದೆ.
ಆದರೂ ಏರ್ ಬಬಲ್ ಒಪ್ಪಂದದ ಅಡಿ ಭಾರತ ಅನೇಕ ರಾಷ್ಟ್ರಗಳೊಡನೆ ವಿಮಾನಯಾನ ಸೇವೆ ಹೊಂದಿದೆ. ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯರನ್ನು ಕರೆತರಲು ಏರ್ ಬಬಲ್ ಒಪ್ಪಂದದ ಮೂಲಕವೇ ಕೇಂದ್ರ ಸರ್ಕಾರ ವಂದೇ ಭಾರತ್ ಮಿಷನ್ ಆಪರೇಷನ್ ಕೈಗೊಂಡಿತ್ತು.