ETV Bharat / bharat

ಇತರೆ ಗಡಿ ವಿವಾದಗಳ ಹಿನ್ನೆಲೆಯಲ್ಲಿ ಭಾರತ-ಚೀನಾ ಸಂಘರ್ಷದ ಸಮಯ - ಭಾರತ ಚೀನಾ ಫೈರಿಂಗ್​

ಎಲ್ಒಸಿ ಎಂದಿಗೂ ಮುಗಿಯದ ಸಮಸ್ಯೆಯಾಗಿದ್ದು, ಎಲ್ಎಸಿಯೊಂದಿಗೆ ಬೇರ್ಪಡಿಸಬೇಕಾಗಿದೆ. ಚೀನಾ ಮತ್ತು ಪಾಕಿಸ್ತಾನ ಸಹಜೀವನದ ಸಂಬಂಧದ ಮೂಲಕ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಕೆಲವು ಮ್ಯಾಜಿಕ್ ಸಂಭವಿಸಬೇಕಿದೆ.

China border issue
ಚೀನಾ ಗಡಿ ವಿವಾದ
author img

By

Published : Jun 18, 2020, 1:51 PM IST

ಕಳೆದ ಅರ್ಧ ಶತಮಾನದಲ್ಲಿ, ಲಡಾಖ್ ಪ್ರದೇಶದ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾಚಾರದ ಭೀಕರ ಘಟನೆಯಲ್ಲಿ ಭಾರತ ಮತ್ತು ಚೀನಾದ ಸೈನ್ಯವು ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹಾರಿಸದೆ ಭಾರೀ ಪ್ರಮಾಣದ ಸಾವು-ನೋವುಗಳು ಉಂಟಾಗಿವೆ.

ಆಕ್ರಮಣಶೀಲ ಚೀನಾದ ಸೈನ್ಯವು ಭಾರತೀಯ ಸೇನಾ ಸೈನಿಕರ ಮೇಲೆ ಕಬ್ಬಿಣದ ರಾಡುಗಳು, ಕಲ್ಲುಗಳು ಮತ್ತು ಮುಷ್ಟಿ-ಹೊಡೆತಗಳು ಮತ್ತು ಆಕ್ರಮಣಕಾರಿ ಕಿಕ್ ಮಾಡಲು ಕಾರಣವಾದದ್ದು ಏನು? ಈ ರೀತಿ ಅನೇಕ ಪ್ರಶ್ನೆ ಮತ್ತು ಉತ್ತರಗಳು ಚೀನಾ ಉದ್ಧಟತನದ ಬೆಳವಣಿಗೆ ಬಗ್ಗೆ ತೀರಾ ಹತ್ತಿರದಿಂದ ಫಾಲೋ ಅಪ್ ಮಾಡುತ್ತಿರುವ ಜನರ ಮನಸ್ಸಿನಲ್ಲಿ ಬರುತ್ತವೆ. ಚೀನಾ ಸೇನೆ ಬಹಳ ಕಾಲದಿಂದ ಅಡಗಿಸಿ ಇಟ್ಟುಕೊಂಡಿದ್ದ ಕೋಪವನ್ನು ಏಕಾಏಕಿ ಹೊರಹಾಕಿದಂತೆ ಕಂಡುಬರುತ್ತದೆ. ಬುಧವಾರ ರಾತ್ರಿ ಭಾರತೀಯ ಪೆಟ್ರೋಲ್, ಕಪಾಟಿ ಚೀನಾದ ಸೈನಿಕರೊಂದಿಗೆ ಮುಖಾಮುಖಿಯಾಗಿ ರಕ್ತ ಸಿಕ್ತ ಸಂಘರ್ಷ ಸ್ಫೋಟಗೊಂಡ ಪ್ರದೇಶ- DBO ರಸ್ತೆಯಲ್ಲಿರುವ ಗಾಲ್ವಾನ್ ಕಣಿವೆಯ ಬಳಿ ಪೆಟ್ರೋಲ್ ಪಾಯಿಂಟ್ 14 ಗಮನಾರ್ಹವಾಗಿದೆ. ಈ ಹಿಂದೆ ಭಾರತೀಯ ಸೈನ್ಯವು ನಿರ್ವಹಣೆ ಮಾಡುತ್ತಿದ್ದ ಪ್ರದೇಶದಲ್ಲಿ ಮೊನ್ನೆ ಸೇನೆಯ ಯೋಧರು ಹುತಾತ್ಮರಾದರು.

LAC (ಲೈನ್ ಆಫ್ ಆಕ್ಚುವಲ್ ಕಂಟೋಲ್)

LAC (ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್) ಸಡಿಲವಾದ ಗಡಿರೇಖೆ ರೇಖೆಯಾಗಿದ್ದು, ಭಾರತ ಮತ್ತು ಚೀನಾ ‘ವಿಭಿನ್ನ ಗ್ರಹಿಕೆ’ಯ ಪರಿಕಲ್ಪನೆಯ ಮೂಲಕ ಎರಡೂ ರಾಷ್ಟ್ರಗಳ ಸೈನ್ಯಗಳು ಎಲ್ಎಸಿಯಲ್ಲಿ ತಮ್ಮ ಗ್ರಹಿಕೆ ಬಿಂದುಗಳವರೆಗೆ ಗಸ್ತು ತಿರುಗುತ್ತವೆ. ಲಡಾಖ್ ಪ್ರದೇಶದ ಉಭಯ ದೇಶಗಳ ನಡುವೆ ಯಾವುದೇ ನಿರ್ದಿಷ್ಟ ಗಡಿರೇಖೆ ರೇಖೆಯನ್ನು ಹೊಂದಿಲ್ಲ, ಆದ್ದರಿಂದ ಸೈನ್ಯದ ಯೋಧರು ಹೇಗೆ ಪೆಟ್ರೋಲ್ ಮಾಡಬೇಕೆಂಬುದನ್ನು ವ್ಯಾಖ್ಯಾನಿಸಲು ಅಲ್ಲಿ ನಿಯೋಜನೆಯಾಗಿರುವ ಮಿಲಿಟರಿ ನಾಯಕತ್ವದ ಗ್ರಹಿಕೆಗೆ ಬಿಡುತ್ತಾರೆ, LAC ನಲ್ಲಿ ಶಾಂತಿ ಗಡಿ ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಎರಡೂ ದೇಶಗಳು ಪರಸ್ಪರ ವ್ಯಾಖ್ಯಾನಿಸಿರುವ ಪ್ರೋಟೋಕಾಲ್ಗಳಿವೆ.

LAC (ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್) ಸಮುದ್ರ ಮಟ್ಟದಿಂದ ಅತಿ ಎತ್ತರದ ಪ್ರದೇಶವಾಗಿದ್ದು, ಹಲವು ಪ್ರದೇಶಗಳಲ್ಲಿ ಸೈನ್ಯಗಳು ಗಸ್ತು ತಿರುಗುತ್ತಿರುತ್ತಾರೆ.ಭಾರತದ ಕಡೆ ಕೆಲವು ಪ್ರದೇಶಗಳಲ್ಲಿ ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್(ITBP) ಗಡಿ ಕಾಯುತ್ತಿದೆ. ಲಡಾಖ್ನ ಪೂರ್ವ ಭಾಗದಲ್ಲಿರುವ ಪಂಗಾಂಗ್ ಸರೋವರ ಮತ್ತು ಗಾಲ್ವಾನ್ ಕಣಿವೆಯು ಎಲ್ಎಸಿಯಲ್ಲಿ ಮುಖ್ಯವಾಗಿ ವಿವಾದಾಸ್ಪದ ಪ್ರದೇಶಗಳಾಗಿವೆ. ಸರೋವರದ ಮೂರನೇ ಒಂದು ಭಾಗ ಚೀನಾದೊಂದಿಗೆ ಮತ್ತು ಉಳಿದ ಭಾಗ ಭಾರತದೊಂದಿಗಿದೆ. ಫಿಂಗರ್ 4 ಮತ್ತು ಫಿಂಗರ್ 8 ಎಂದು ಕರೆಯಲಾಗುವ ಎರಡು ಭೌಗೋಳಿಕ ಬಿಂದುಗಳಿವೆ. ಚೀನಿಯರು ಫಿಂಗರ್ 4 ಅನ್ನು ಎಲ್ಎಸಿ ಎಂದು ಪರಿಗಣಿಸುತ್ತಾರೆ ಮತ್ತು ಭಾರತ ಇದನ್ನು ಫಿಂಗರ್ 8 ಎಂದು ಪರಿಗಣಿಸುತ್ತದೆ.

ನಿನ್ನೆ ರಾತ್ರಿ, ಗಾಲ್ವಾನ್ ವ್ಯಾಲಿ ಡರ್ಬೊಕ್, ಶ್ಯೋಕ್, ಡಿಬಿಒ (ದೌಲತ್ ಬೇಗ್ ಓಲ್ಡಿ) ರಸ್ತೆಯಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವೆ ಘರ್ಶಣೆ ನಡೆದಿದೆ. ಉತ್ತರ ಲಡಾಖ್ಗೆ ಮರು ಸರಬರಾಜು ಮಾಡಲು ಇದು ಮುಖ್ಯ ರಸ್ತೆಯಾಗಿದೆ. ಅದಕ್ಕಾಗಿಯೇ ಗಾಲ್ವಾನ್ ಕಣಿವೆ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ ಏಕೆಂದರೆ, ಅದು ಮುಖ್ಯ ರಸ್ತೆಯನ್ನು ರಕ್ಷಿಸುತ್ತದೆ. ಹೀಗಾಗಿ, ಚೀನಾದ ಸೈನ್ಯವು ಫಿಂಗರ್ 4 ಅನ್ನು ತಲುಪುವ ಪ್ರಯತ್ನವನ್ನು ಏಕೆ ಮಾಡಿತು ಮತ್ತು ಈ ಪ್ರದೇಶ ಏಕೆ ಎರಡು ಸೈನ್ಯಗಳ ನಡುವಿನ ವಿವಾದದ ಕೇಣದ್ರವಾಯಿತು ಎಂಬುದನ್ನು ಇದು ವಿವರಿಸುತ್ತದೆ.

ಗಾಲ್ವಾನ್ ಕಣಿವೆ (Galvan valley)

ಗಾಲ್ವಾನ್ ಕಣಿವೆ ಭಾರತೀಯ ಸೈನ್ಯಕ್ಕೆ ಆಯಕಟ್ಟಿನ ಮತ್ತು ಮಹತ್ವದ ಸ್ಥಳವಾಗಿದೆ. ಗಾಲ್ವಾನ್ನ ಹಿಂಬದಿಯಲ್ಲಿರುವ ಅಕ್ಸಾಯ್ ಚಿನ್ ಪ್ರದೇಶ ಸಹ ಚೀನಾಕ್ಕೆ ಅಷ್ಟೇ ಮುಖ್ಯವಾಗಿದೆ. ಪೂರ್ವ ಲಡಾಕ್ನ ಎಲ್ಎಸಿಯಲ್ಲಿ ಪೋಸ್ಟ್ ಮಾಡಿದ ಭಾರತೀಯ ಸೈನ್ಯಕ್ಕೆ ಜೀವ ರೇಖೆಯಂತೆ ಕಣಿವೆ ಡಿಬಿಒ (ದೌಲತ್ ಬೇಗ್ ಓಲ್ಡಿ) ರಸ್ತೆಗೆ ರಕ್ಷಣೆ ನೀಡುತ್ತಿರುವುದರಿಂದ ಚೀನಿಯರು ಭಾರತಕ್ಕೆ ಗಾಲ್ವಾನ್ ಪ್ರಾಮುಖ್ಯತೆಯನ್ನು ತಿಳಿದುಕೊಂಡಿದ್ದಾರೆ. ಚೀನಾದ ಸೈನ್ಯವು ಗಾಲ್ವಾನ್ ಕಣಿವೆಯನ್ನ ಇತ್ತೀಚಿನ ಪ್ರಕ್ಷುಬ್ಧ ಪರಿಸ್ಥಿತಿಗೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೇನೆಂದರೆ ಈ ನಿರ್ಣಾಯಕ ಹೆಗ್ಗುರುತಿನಲ್ಲಿ ಈಗಿರುವ ಭಾರತದ ಯಥಾಸ್ಥಿತಿಯನ್ನು ಬದಲಾಯಿಸುವುದೇ ಅವರ ಗುರಿಯಾಗಿದೆ. ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಜೂನ್ 6 ರಂದು ನಡೆದಿದ್ದ ಮಾತುಕತೆ ಅನ್ವಯ ಗಡಿ ನಿಯೋಜಿಸಿದ್ದ ಸೇನೆ ಹಿಂಪಡೆತ ಪ್ರೋಟೋಕಾಲ್ ಅನ್ವಯ ಭಾರತೀಯ ಸೇನೆ ಈ ಪ್ರದೇಶಕ್ಕೆ ಆಗಮಿಸಿತ್ತು. ಗಾಲ್ವಾನ್ ಪ್ರದೇಶಕ್ಕೆ ಬಂದ ಕರ್ನಲ್.ಸಂತೋಷ್ ಬಾಬು ನೇತೃತ್ವದ ಸೇನಾ ಘಟಕವು ಅಲ್ಲಿ ಇನ್ನೂ ಚೀನಾದ ಕೆಲ ಅಸ್ತಿತ್ವಗಳನ್ನು ಕಂಡು ಪ್ರೋಟೋಕಾಲ ಅನ್ವಯ ಅವುಗಳನ್ನು ಕೆಡವಲು ಪ್ರಾರಂಭಿಸಿದಾಗ, ಆ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಚೀನಾದ ಪಡೆಗಳು ಹಿಂಸಾತ್ಮಕವಾಗಿ ಪ್ರತೀಕಾರ ತೀರಿಸಿಕೊಂಡವು. ಚೀನಾ ಸೇನಾ ಪಡೆ ಎಲ್ಲದ್ದಕ್ಕೂ ಸಿದ್ಧರಾಗಿ ಶಸ್ತ್ರಾಸ್ತ್ರಗಳ ಜೊತೆ ಬಂದಿತ್ತು . ಹಿಂಸಾತ್ಮಕ ವಿಧಾನಗಳನ್ನು ಬಳಸಲು ಸ್ಪಷ್ಟ ಸೂಚನೆಗಳನ್ನು ಹೊಂದಿದ್ದರು. ಭಾರತ ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತಿದ್ದರೆ ಚೀನಾ ಸೇನೆಯು ಸಂಘರ್ಷ ಆರಂಭವಾದ ಮೊದಲಿನ ದಿನದಿಂದಲೂ ಹಿಂಸೆಯ ಹಾದಿಯನ್ನೇ ಹಿಡಿದಿದೆ. ನಿನ್ನೆಯೂ ಅದನ್ನೇ ಮಾಡಿದೆ.

ಈ ಪ್ರದೇಶದಲ್ಲಿ ಚೀನಾದ ಮಾರಣಾಂತಿಕ ವರ್ತನೆಗೆ ಕಾರಣವಾದ ಅನೇಕ ಪ್ರಚೋದಕಗಳಿವೆ. ಅವುಗಳಲ್ಲಿ ಹಿಂದಿನ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿಯಲ್ಲಿ ಸಾಕಷ್ಟು ಬದಲಾವಣೆ ಆಗಿರುವುದು ಒಂದು ಕಾರಣ. ಅತೃಪ್ತ ಚೀನಾದ ಹಿಂಸಾತ್ಮಕ ಕೃತ್ಯಗಳಿಗೆ ಅವರನ್ನು ಪ್ರಚೋದಿಸುವ ಕಿರಿಕಿಯಾಗುವ ಮತ್ತೊಂದು ಕಾರಣವೆಂದರೆ ಬಹುಶಃ ಎಲ್ಎಸಿಯಲ್ಲಿ ಕಟ್ಆಫ್ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳಿಂದ ಸೇತುವೆಗಳವರೆಗಿನ ಮೂಲಸೌಕರ್ಯ ಅಭಿವೃದ್ಧಿ ಅನಿರ್ದಿಷ್ಟ, ಅನಿಶ್ಚಿತವಾಗಿರುವುದು ಮತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಬಲ್ಲ ರಸ್ತೆಗಳ ಮೂಲಕ ಸಂಪರ್ಕಿಸುವಂತೆ ಮಾಡುವುದು ಮತ್ತು ಎಲ್ಎಸಿಯಲ್ಲಿ ಅಲೆಮಾರಿಗಳ ಜೀವನವನ್ನು ಸುಲಭಗೊಳಿಸುವುದು ಸಾಧ್ಯವಾಗದಿರುವುದು. ಹಿಂದಿನ ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಸರ್ಕಾರದ ನೇರ ಆಡಳಿತದಡಿಯಲ್ಲಿ ತಂದ ನಂತರ, ಲಡಾಖ್ ಅನ್ನು ಜಮ್ಮು& ಕಾಶ್ಮೀರವನ್ನು ನಕ್ಷೆಯಿಂದ ಹೊರಗಿಟ್ಟು ಎರಡೂ ಭಾಗಗಳನ್ನು ಯೂನಿಯನ್ ಪ್ರದೇಶಗಳನ್ನಾಗಿ ಮಾಡಿತು ಮತ್ತು ಜಮ್ಮು ಮತ್ತು ಕಾಶ್ಮೀರದ ಸಂವಿಧಾನವನ್ನು ರದ್ದುಗೊಳಿಸುವ ಮೂಲಕ ವಿಧಿ 370 ಇದು ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತು. ಜಮ್ಮು & ಕಾಶ್ಮೀರ ರಾಜ್ಯಗಳ ಹಿಂದಿನ ಸರ್ಕಾರವು ಲಡಾಖ್ ಆಗಿರಬಹುದು ಅಥವಾ ಇತರ ಪ್ರದೇಶಗಳು ಗಡಿ ವಿವಾದಗಳಲ್ಲಿ ಪಕ್ಷವಾಗಿದ್ದವು ಆದರೆ ಆ ಕಾನೂನುಬದ್ಧತೆಯು ಈಗ ನ್ಯಾಯಸಮ್ಮತವಲ್ಲದಂತಿದೆ ಮತ್ತು ಹೊಸ ಮರುಸಂಘಟನೆ ಕಾನೂನಿನ ಅನುಷ್ಠಾನದ ನಂತರ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಈ ಎಲ್ಲ ಬೆಳವಣಿಗೆಗಲ ಹಿನ್ನೆಲೆಯಲ್ಲಿ ಕುಂತಲ್ಲೇ ಕುದಿಯುತ್ತಿದ್ದ ಚೀನಾ ತನ್ನ ಅಸಮಾಧಾನದ ಭಾಗವಾಗಿ ಇಂತಹ ಕೃತ್ಯಗಳನ್ನ ಎಸಗುತ್ತಿದೆ.

ಲಡಾಖ್ ಗಡಿಗಳು ಈ ಹಿಂದೆ ಅಷ್ಟಾಗಿ ಜಿಗಟು ಅಥವಾ ಅಹಿತಕರವಾಗಿ ಇರಲಿಲ್ಲ. ಚೀನಾ ಮತ್ತು ಭಾರತದ ನಡುವಿನ ಮಿಲಿಟರಿ ಮಟ್ಟದ ಮಾತುಕತೆಗಳು ಗಡಿಯಲ್ಲಿ ವಾರಕ್ಕೊಮ್ಮೆ ನಡೆಯುತ್ತವೆ. ಈ ವಿಧಾನವು ಹಾಲವು ಮಟ್ಟದಲ್ಲಿ ಪ್ರಭಾವ ಬೇರುವುದನ್ನ ತಪ್ಪಿಸಲು ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ತಿಳುವಳಿಕೆಯೊಂದಿಗೆ ಸಂಪೂರ್ಣ ಹೊಂದಾಣಿಕೆ ಆಗಿತ್ತು. ಆದರೆ ಈ ಬಾರಿ ನೆರೆಯ ರಾಷ್ಟ್ರಗಳೊಂದಿಗಿನ ಹಗೆತನ ಹೆಚ್ಚಾಗಿದೆ. ನೇಪಾಳ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಂದ ಉತ್ತಮ ಬೆಂಬಲವನ್ನು ಪಡೆಯುತ್ತಿರುವ ಚೀನಾ, ಈ ಸಮಯದಲ್ಲಿ ಬೇಕಂತಲೇ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ನೇಪಾಳದ ಕಾಲಾಪಾನಿ ಲೆಪುಲೇಕ್ ಸಂಬಂಧಿಸಿದಂತೆ ಇನ್ನೂ ಇತ್ಯರ್ಥವಾಗದ ಗಡಿ ಸಮಸ್ಯೆ ವಿವಾದದ ವಿಷಯ ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರದ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ದುರಂತಮಯ ಪರಿಸ್ಥಿತಿ ಹಿಂದೆಂದೂ ಆಗಿರಲಿಲ್ಲ.

CPEC (ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್)

ಈ ಪ್ರದೇಶದಲ್ಲಿ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಗೇಮ್ ಚೇಂಜರ್ ಯೋಜನೆ ಎಂದೇ ವಿವರಿಸಲಾಗಿದೆ. ಗಿಲ್ಗಿಟ್-ಬಾಲ್ಚಿಸ್ತಾನ್ (ಪಿಒಕೆ) ಮೂಲಕ ಕಾಶ್ಗರ್ ಮತ್ತು ಅರೇಬಿಯನ್ ಸಮುದ್ರದ ನಡುವಿನ ಸಂಪರ್ಕವು ಚೀನಾದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. CPEC ಯೋಜನೆಗೆ ಪಾಕಿಸ್ತಾನದ ಅಗಾಧ ಬೆಂಬಲವು ಕಾಶ್ಮೀರದ ಮೇಲಿನ ಅಂತಾರಾಷ್ಟ್ರೀಯ ಅವಶ್ಯಕತೆಗಳ ಮೇಲೆ ಮತ್ತು ಅದರ ಸಂಪೂರ್ಣ ಬೆಂಬಲವನ್ನು ಗಳಿಸಿದೆ. ಕಾಶ್ಮೀರದ ಪ್ರತ್ಯೇಕತಾವಾದಿ ಚಳುವಳಿ ಮತ್ತು ಎಫ್ಎಟಿಎಫ್(ಹಣಕಾಸು ಕ್ರಿಯಾ ಕಾರ್ಯಪಡೆ)ನಿಂದ ಕಪ್ಪುಪಟ್ಟಿಗೆ ಸೇರ್ಪಡೆಗೊಳ್ಳುವುದನ್ನ ತಡೆಯಲು ಚೀನಾ ಯಾವಾಗಲೂ ಪಾಕಿಸ್ತಾನದ ಜೊತೆಗಿದೆ. ಪೋರ್ಚುಗೀಸ್ ಪಾಸ್ಪೋರ್ಟ್ ಬಳಸಿ ಪತ್ರಕರ್ತನ ವೇಷದಲ್ಲಿ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿದ ಕುಖ್ಯಾತ ಉಗ್ರ ಕಮಾಂಡರ್ ಮೌಲಾನಾ ಮಸೂದ್ ಅಜರ್ ನನ್ನು ಉಳಿಸಲು ಚೀನಾ ಪ್ರಯತ್ನಿಸಿತು ಮತ್ತು ನಂತರ ಕಾಶ್ಮೀರದಲ್ಲಿ ಬಂಧಿಸಲಾಯಿತು. ಆದರೆ, ನಂತರದ ಬೆಳವಣಿಗೆಯಲ್ಲಿ ಅಜರ್ ಜೈಶ್ ಇ ಮೊಹಮದ್ (ಉಗ್ರ ಸಂಘಟನೆ) ಹೈಜಾಕ್ ಮಾಡಿದ್ದ ನೇಪಾಳದಿಂದ ಪಂಜಾಬ್ಗೆ ತೆರಳಬೇಕಿದ್ದ IC -814 ಏರ್ ಇಂಡಿಯಾ ವಿಮಾನದ ಪ್ರಯಾಣಿಕರ ವಿನಿಮಯಕ್ಕಾಗಿ ಬಿಡುಗಡೆ ಮಾಡಲಾಯಿತು. ಹೈಜಾಕ್ ಮಾಡಿದ್ದ ಉಗ್ರ ಸಂಘಟನೆಯು ಗಿಲ್ಗಿಟ್ ಬಾಲ್ಚಿಸ್ತಾನ್ ಪ್ರದೇಶಗಳಿಂದ ಕಾರ್ಯನಿರ್ವಹಿಸುತ್ತದೆ. ಕುಖ್ಯಾತ ಉಗ್ರ ಕಮಾಂಡರ್ ಮೌಲಾನಾ ಮಸೂದ್ನನ್ನ ಜಾಗತಿಕ ಭಯೋತ್ಪಾದಕನಾಗಿ ಘೋಷಿಸಿ ಕಪ್ಪುಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಪ್ರಯತ್ನ ಪಟ್ಟಾಗ ಚೀನಾ ದೇಶವು ಅವನನ್ನು ರಕ್ಷಿಸಲು ಪ್ರಯತ್ನಿಸಿತು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿಗಳು ದಾಳಿ ಮಾಡುವ ಮನಸ್ಥಿತಿ ಇಟ್ಟುಕೊಂಡು ಕಾಯುತ್ತಿದ್ದಾರೆ. ಆದರೆ, ಚೀನಾ ಗಡಿ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದು ಅಲ್ಲಿ ಪಾಕಿಸ್ತಾನದಿಂದ ಯಾವುದೇ ಅಡೆತಡೆಗಳು ಉಂಟಾಗದಂತೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಖ್ಯವಾಗಿ ಅಜರ್ನಂತಹ ಉಗ್ರನ ಬೆಂಬಲಕ್ಕೆ ನಿಂತಿತ್ತು.

ಎಲ್ಲಾ ಪ್ರಮುಖ ಮೂರು ಸೇನಾ ರಂಗಗಳಿಂದ ಚೀನಾ ಒತ್ತಡ ಹಾಕಿದರೆ ಅದನ್ನ ಹೇಗೆ ತಡೆಯಬೇಕು, ಏನು ಮಾಡಬೇಕು ಎಂಬ ಪ್ರಶ್ನೆ ಈಗ ಉಳಿದಿದೆ. ಉದ್ವಿಗ್ನತೆಯನ್ನು ಕಡಿಮೆ ಮಾಡಿ, ನೇಪಾಳದೊಂದಿಗೆ ಉತ್ತಮ ಬಾಂಧವ್ಯ ಪುನಃ ಸ್ಥಾಪಿಸುವುದನ್ನ ಭಾರತವು ಮುಖ್ಯ ಕಾರ್ಯಸೂಚಿಯಾಗಿ ತೆಗೆದುಕೊಳ್ಳಬೇಕು. ಎರಡನೆಯದಾಗಿ, ರಾಜತಾಂತ್ರಿಕ ಮತ್ತು ರಾಜಕೀಯ ಪರಿಹಾರಗಳ ಮೂಲಕ ಚೀನಾ ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಮತ್ತು ರಾಜಕೀಯ ಆಯ್ಕೆಯು ಸಂಪೂರ್ಣವಾಗಿ ವಿಫಲವಾದಾಗ ಮಾತ್ರ ಮಿಲಿಟರಿ ಆಯ್ಕೆಯನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಳ್ಳುವುದು ಉತ್ತಮ.

ಎಲ್ಒಸಿ ಎಂದಿಗೂ ಮುಗಿಯದ ಸಮಸ್ಯೆಯಾಗಿದ್ದು, ಎಲ್ಎಸಿಯೊಂದಿಗೆ ಬೇರ್ಪಡಿಸಬೇಕಾಗಿದೆ. ಚೀನಾ ಮತ್ತು ಪಾಕಿಸ್ತಾನಗಳು ಸಹಜೀವನದ ಸಂಬಂಧದ ಮೂಲಕ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಕೆಲವು ಮ್ಯಾಜಿಕ್ ಸಂಭವಿಸಬೇಕಾಗಿದೆ. ಯಾವುದೇ ಹಾನಿಯಾಗದೇ ಯುದ್ಧವನ್ನು ಗೆಲ್ಲುವುದು ಚೀನಾ ಜೊತೆ ಸಾಧ್ಯವಾಗಬಹುದೆ? ಒಂದೊಮ್ಮೆ ಯುದ್ಧವಾದರೆ ಅದು ಸಂಬಂಧಪಟ್ಟ ಎಲ್ಲ ರಾಷ್ಟ್ರಗಳಿಗೆ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.