ETV Bharat / bharat

ಕರ್ತಾರ್​ಪುರ​ ಕಾರಿಡಾರ್​ ಯೋಜನೆ.. ಭಾರತ-ಪಾಕ್ ಅಧಿಕಾರಿಗಳ​ ಸಭೆ ವಿಫಲ

ಕರ್ತಾರ್​ಪುರ ಯೋಜನೆ ಕುರಿತು ಅಟ್ಟಾರಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳ ನಡುವೆ ನಡೆದ ಮಹತ್ವದ ಸಭೆ ವಿಫಲವಾಗಿದೆ. ಕೆಲ ವಿಷಯಗಳಲ್ಲಿನ ಬಿನ್ನಾಭಿಪ್ರಾಯದಿಂದ ಕರಡು ಒಪ್ಪಂದ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.

ಕರ್ತಾರ್​ಪುರ​
author img

By

Published : Sep 4, 2019, 4:14 PM IST

ನವದೆಹಲಿ: ಕರ್ತಾರ್​ಪುರ ಕಾರಿಡಾರ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳ ಜೊತೆ ಅಟ್ಟಾರಿಯಲ್ಲಿ ನಡೆದ ಮಹತ್ವದ ಸಭೆ ವಿಫಲವಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್​ಪುರ್​ನಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರ ದರ್ಬಾರ್ ಸಾಹಿಬ್ ಗುರುದ್ವಾರದ ಭೇಟಿಗೆ ಭಾರತೀಯರಿಗೆ ಅನುವು ಮಾಡಿಕೊಡಬೇಕು ಎಂಬ ಉದ್ದೇಶದಿಂದ ಉಭಯ ದೇಶಗಳು ಈ ಯೋಜನೆಯನ್ನ ಕೈಗೆತ್ತಿಕೊಂಡಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ಅಧಿಕಾರಿಗಳು ಇಂದು ಮೂರನೇ ಬಾರಿಗೆ ಸೇರಿದ ಸಭೆ ಕೆಲ ವಿಷಯಗಳಲ್ಲಿನ ಬಿನ್ನಾಭಿಪ್ರಾಯದಿಂದ ಕರಡು ಒಪ್ಪಂದ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.

ಕರ್ತಾರ್​ಪುರಕ್ಕೆ ಭೇಟಿ ನೀಡುವ ಪವಿತ್ರ ಯಾತ್ರಿಗಳಿಗೆ ಪಾಕಿಸ್ತಾನ ಶುಲ್ಕ ವಿಧಿಸುವ ಪ್ರಸ್ತಾಪ ಎತ್ತಿದೆ. ಇದು ಈ ಯೋಜನೆಗೆ ತಕ್ಕುದಲ್ಲವಾದ್ದರಿಂದ ಸಭೆಯಲ್ಲಿ ಕರಡು ಒಪ್ಪಂದ ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಸಭೆಯ ಉದ್ದೇಶವೇನು?

  • ಕರ್ತಾರ್​ಪುರದ ದರ್ಬಾರ್ ಸಾಹಿಬ್ ಗುರುದ್ವಾರದಲ್ಲಿ ಸಿಖ್ಖರು ಪ್ರಸಾದವನ್ನು ತಯಾರಿಸಿ, ವಿತರಿಸಲು ಅವಕಾಶ ನೀಡುವಂತೆ ಭಾರತ ಮನವಿ ಮಾಡಿಕೊಂಡಿತ್ತು.
  • ಜುಲೈ 14ರಂದು ನಡೆದ ಎರಡನೇ ಸಭೆಯಲ್ಲಿ ಭಾರತದಿಂದ ಕರ್ತಾರ್​ಪುರಕ್ಕೆ ಸಂಪರ್ಕಿಸುವ 4.19ಕಿ.ಮೀ ಉದ್ದದ ಚತುಷ್ಪಥ ರಸ್ತೆಯನ್ನು ಅಕ್ಟೋಬರ್​ 31ರಂದು ಪೂರ್ತಿಗೊಳಿಸುವುದಾಗಿ ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿದ್ದವು.
  • ಕರ್ತಾರ್​ಪುರಕ್ಕೆ ವೀಸಾ-ಫ್ರೀ ಪ್ರಯಾಣಕ್ಕೆ ಪಾಕಿಸ್ತಾನ ಸಮ್ಮತಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವೀಸಾ-ಫ್ರೀ ವ್ಯವಸ್ಥೆಯ ಮೂಲಕ ನಿತ್ಯ ಐದು ಸಾವಿರ ಮಂದಿ ಕರ್ತಾರ್​ಪುರದಲ್ಲಿರುವ ಸಿಖ್​ ಮಂದಿರಕ್ಕೆ ಭೇಟಿ ನೀಡಬಹುದು. ಗುಂಪಿನಲ್ಲಿ ಇಲ್ಲವೇ ಒಬ್ಬೊಬ್ಬರಾಗಿ ಮಂದಿರಕ್ಕೆ ಭೇಟಿ ಕೊಡಬಹುದು ಎಂದು ಪಾಕ್ ಸರ್ಕಾರ ಹೇಳಿದೆ.

Intro:Body:

nil

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.