ನವದೆಹಲಿ: ಮನಕುಲವನ್ನೇ ಸಂಕಟಕ್ಕೆ ಸಿಲುಕಿಸಿರುವ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ಭಾರತದ ಸನ್ನದ್ಧವಾಗಿದ್ದು, ಕಬಂಧ ಬಾಹು ವಿಸ್ತರಣೆ ಮಾಡುತ್ತಿರುವ ಮಹಾಮಾರಿ ಕಟ್ಟಿಹಾಕಲು ಇಂದು ದೇಶಾದ್ಯಂತ ಸ್ವಯಂ ಘೋಷಿತ ಜನತಾ ಕರ್ಫ್ಯೂ ಘೋಷಣೆ ಮಾಡಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದು, ಕೆಲವು ದಿನಗಳ ಕಾಲ ನರದಲ್ಲಿಯೇ ಇರಬೇಕೆಂದು ಪ್ರಾರ್ಥನೆ ಮಾಡಿದ್ದಾರೆ.
ಇಂದು ಬೆಳಗ್ಗೆ 7ಗಂಟೆಯಿಂದ ರಾತ್ರಿ 9ರವರೆಗೆ ಜನತಾ ಕರ್ಫ್ಯೂ ಜಾರಿಯಲ್ಲಿರಲಿದ್ದು, ಜನರು ಮನೆಯಲ್ಲಿಯೇ ಕಾಲಕಳೆಯಬೇಕಾಗಿದೆ.ಭಾರತದಲ್ಲಿ ಕೊರೊನಾ ಹರಡುವಿಕೆ 2ನೇ ಹಂತದಲ್ಲಿದ್ದು, 3ನೇ ಹಂತಕ್ಕೆ ತಲುಪದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜನತಾ ಕರ್ಫ್ಯೂ ದಿನ ದೇಶಾದ್ಯಂತ ಔಷಧಾಲಯ, ವೈದ್ಯಕೀಯ ಅಂಗಡಿ ಹೊರತಪಡಿಸಿ ಎಲ್ಲ ಅಂಗಡಿಗಳು ಮುಚ್ಚಿರುವ ಸಾಧ್ಯತೆ ದಟ್ಟವಾಗಿದೆ. ಆದರೆ ಪೆಟ್ರೋಲ್ ಪಂಪ್ ಕಾರ್ಯನಿರ್ವಹಿಸಲಿವೆ. ಬಸ್, ಆಟೋ ರಿಕ್ಷಾ, ಖಾಸಗಿ ಟ್ಯಾಕ್ಸಿ,ಭಾರತೀಯ ರೈಲ್ವೆ ಬಂದ್ ಆಗಲಿದ್ದು, ಸ್ವಯಂಘೋಷಿತ ಕರ್ಫ್ಯೂದಲ್ಲಿ ಭಾಗಿಯಾಗಲಿವೆ.