ETV Bharat / bharat

ರಾಹುಲ್ ಗಾಂಧಿ ಅನುಪಸ್ಥಿತಿ: ಬಿಹಾರದಲ್ಲಿ ಮಹಾಘಟಬಂಧನ್​ಗೆ ತೇಜಸ್ವಿ ಯಾದವ್ ನೇತೃತ್ವ - ಬಿಹಾರದಲ್ಲಿ ರಾಹುಲ್ ಗಾಂಧಿ ಅನುಪಸ್ಥಿತಿ

ರಾಹುಲ್ ಗಾಂಧಿ ಅವರ ಅನುಪಸ್ಥಿತಿಯ ಮಧ್ಯೆ ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಮುಂಚೂಣಿಯಲ್ಲಿದ್ದು, ಮತದಾರರನ್ನು ಸೆಳೆಯಲು ಸರಣಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.

Tejashwi leads Mahagathbandhan battle in Bihar
ಬಿಹಾರದಲ್ಲಿ ಮಹಾಘಟಬಂಧನ್​ಗೆ ತೇಜಸ್ವಿ ಯಾದವ್ ನೇತೃತ್ವ
author img

By

Published : Oct 23, 2020, 7:12 AM IST

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಒಂದು ವಾರ ಬಾಕಿ ಇದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲು ಇನ್ನೂ ಮುಂದಾಗಿಲ್ಲ.

ಮಹಾಘಟಬಂಧನ್ ಅಡಿಯಲ್ಲಿ ರಾಷ್ಟ್ರೀಯ ಜನತಾದಳ (ಆರ್​ಜೆಡಿ), ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್​ವಾದಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಎಲ್) (ಎಲ್) ತಮ್ಮ 243 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆರ್‌ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಿಪಿಐ (ಎಂ-ಎಲ್)ಗೆ 19, ಸಿಪಿಐ (6), ಸಿಪಿಎಂ (4) ಸ್ಥಾನಗಳನ್ನು ನೀಡಲಾಗಿದೆ. ಆರ್​ಜೆಡಿ ನಾಯಕ ತೇಜಸ್ವಿ ಮಹಾಘಟಬಂಧನ್​ ನೇತೃತ್ವ ವಹಿಸಿದ್ದಾರೆ.

ಆದಾಗ್ಯೂ ರಾಹುಲ್ ಗಾಂಧಿ ಶುಕ್ರವಾರ ನವಾಡಾದ ಹಿಸುವಾ ಮತ್ತು ಭಾಗಲ್‌ಪುರ ಜಿಲ್ಲೆಯ ಕಹಲ್‌ಗಾಂವ್‌ನಲ್ಲಿ ಎರಡು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಆರ್‌ಜೆಡಿಯ 15 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿತ್ತು. ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮತ್ತು ಮಹಾಘಟಬಂಧನ್ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದು ರಾಹುಲ್ ಗಾಂಧಿಯವರ ಕರ್ತವ್ಯ ಎಂದು ರಾಜಕೀಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮುಂಚೂಣಿಯಲ್ಲಿದ್ದಾರೆ. ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ತೇಜಸ್ವಿ ಯಾದವ್ ಅವರ ಸಮಾವೇಶಗಳಲ್ಲಿ ಜನರಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿತೀಶ್ ಕುಮಾರ್ ವಿರುದ್ಧ ಭಾರೀ ಆಡಳಿತ ವಿರೋಧಿ ಅಲೆ ಇದೆ ಎಂದು ಆರ್‌ಜೆಡಿ ಅಭಿಪ್ರಾಯಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.