ETV Bharat / bharat

ಹೇಗಿದೆ ನೋಡಿ ಬದುಕಿನ ಅನಿವಾರ್ಯತೆ: ಕರುಣೆ ಇಲ್ಲದ ಬ್ಯಾಂಕ್ ಸಿಬ್ಬಂದಿ​ - ವೃದ್ಧಾಪ್ಯ ವೇತನ ಪಡೆಯಲು ಮಹಿಳೆಯ ಪಾಡು

ಇದು ತಾಯಿಯೊಬ್ಬಳನ್ನ ಮಗಳು ಹೊರಸಿನಲ್ಲಿ ಮಲಗಿಸಿಕೊಂಡು, ಅದನ್ನೇ ಎಳೆದುಕೊಂಡು ಬ್ಯಾಂಕ್​​ ವರೆಗೆ ತಾಯಿಯ ಇರುವಿಕೆಯನ್ನ ತೋರಿಸುವ ಸಾಹಸ ಮಾಡ್ತಿದ್ದಾರೆ.

ಕರುಣೆ ಇಲ್ಲದ ಬ್ಯಾಂಕ್​
ಕರುಣೆ ಇಲ್ಲದ ಬ್ಯಾಂಕ್​
author img

By

Published : Jun 15, 2020, 8:04 AM IST

Updated : Jun 15, 2020, 9:37 AM IST

ಕಟಕ್( ಒಡಿಶಾ) ​: ಈ ಚಿತ್ರವನ್ನೊಮ್ಮೆ ನೋಡಿ.. ಇದು ಹೊರಸು.. ಜೀವನದ ಅನಿವಾರ್ಯತೆಗಾಗಿ ಈ ಹೊರಸನ್ನೇ ಎಳೆದುಕೊಂಡು, ಇರುವಿಕೆಯನ್ನ ತೋರಿಸಬೇಕಾದ ಪರಿಸ್ಥಿತಿ

ಇದು ತಾಯಿಯೊಬ್ಬಳನ್ನ ಮಗಳು ಹೊರಸಿನಲ್ಲಿ ಮಲಗಿಸಿಕೊಂಡು, ಅದನ್ನೇ ಎಳೆದುಕೊಂಡು ಬ್ಯಾಂಕ್​​ನವರಿಗೆ ತಾಯಿಯ ಇರುವಿಕೆಯನ್ನ ತೋರಿಸುವ ಸಾಹಸ ಮಾಡುತ್ತಿದ್ದಾರೆ.

ಓದಿ:ಮಾನವೀಯತೆಗೆ ಸಲಾಂ.. ಕಾಲು ಮುರಿದ್ರೂ ಇಳಿ ವಯಸ್ಸಿನಲ್ಲಿ ರಕ್ತದಾನ..

ಇದಕ್ಕೆಲ್ಲ ಕಾರಣ ಬಡತನ... ಅದಕ್ಕಿಂತಲೂ ಮೇಲಾಗಿ ಬ್ಯಾಂಕಿನವರ ಅಮಾನವೀಯತೆ. ವೃದ್ಧಾಪ್ಯ ವೇತನ ಪಡೆಯಲು, ಮಹಿಳೆ ಅವರೇನಾ ಎಂಬುದನ್ನು ಚೆಕ್​ ಮಾಡುವುದು ಬ್ಯಾಂಕ್​​ನವರ ಕರ್ತವ್ಯ. ಆದರೆ, ಎದ್ದು ಬಾರದ ಸ್ಥಿತಿಯಲ್ಲಿರುವ ವೃದ್ಧೆಯನ್ನ ಬ್ಯಾಂಕ್​ನವರು ಫಿಜಿಕಲ್​ ವೆರಿಫಿಕೇಷನ್​ ಮಾಡಿದ ಪರಿಣಾಮವಿದು.

ಕರುಣೆ ಇಲ್ಲದ ಬ್ಯಾಂಕ್ ಸಿಬ್ಬಂದಿ​

120 ವರ್ಷದ ಮಹಿಳೆಯನ್ನ ಲ್ಯಾಬ್ ಬಾಗೆಲ್ ಎಂದು ಗುರುತಿಸಲಾಗಿದೆ. ಈ ಘಟನೆ, ನುವಾಪಾಡಾ ಜಿಲ್ಲೆಯ ಖರಿಯಾರ್ ಬ್ಲಾಕ್ ವ್ಯಾಪ್ತಿಯ ಬರಗನ್ ಗ್ರಾಮದಲ್ಲಿ ನಡೆದಿದೆ. ವಯಸ್ಸಾದ ಮಗಳು ಗುಂಜ ದೀ (70) ತನ್ನ ತಾಯಿಯ ಪಿಂಚಣಿ ಖಾತೆಯಿಂದ 1,500 ರೂ. ಹಣ ಬಿಡುಗಡೆ ಮಾಡಿಕೊಳ್ಳಲು ಹೋಗಿದ್ದಾಗ, ಬ್ಯಾಂಕ್ ಅಧಿಕಾರಿ ಪಿಂಚಣಿ ಹಣ ಬಿಡುಗಡೆ ಮಾಡಲು ನಿರಾಕರಿಸಿದ್ದರು. ಬ್ಯಾಂಕ್ ಆವರಣದಲ್ಲಿ ಖಾತೆದಾರರ ದೈಹಿಕ ಪರಿಶೀಲನೆಗೆ ಒತ್ತಾಯಿಸಿದ್ದರು.

ಗುಂಜ ದೀ, ಹಾಸಿಗೆ ಹಿಡಿದ ತನ್ನ ತಾಯಿಯನ್ನ ಬ್ಯಾಂಕಿಗೆ ಕರೆದುಕೊಂಡು ಹೋಗುವುದನ್ನ ಬಿಟ್ಟು ಬೇರೆ ದಾರಿ ಇರಲಿಲ್ಲ. ಗುಂಜ ದೀ ತನ್ನ ತಾಯಿಯೊಂದಿಗೆ ಬ್ಯಾಂಕ್ ತಲುಪಿದ ಕೂಡಲೇ, ಬ್ಯಾಂಕ್ ಅಧಿಕಾರಿ, ತಾಯಿ ಹಾಗೂ ಮಗಳು ಇಬ್ಬರ ಸ್ಥಿತಿಯನ್ನು ನೋಡಿ ಪಿಂಚಣಿ ಹಣ ಬಿಡುಗಡೆ ಮಾಡಿದರು.

Last Updated : Jun 15, 2020, 9:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.