ETV Bharat / bharat

ಕೇರಳದ ವಯನಾಡಿನಲ್ಲಿ ಟೆಲಿಮೆಡಿಸಿನ್ ಸೇವೆಗೆ ಚಾಲನೆ - COVID 19

ಜನರಿಗೆ ಆರೋಗ್ಯ ಮಾಹಿತಿ ನೀಡುವ ಮೊಟ್ಟ ಮೊದಲ ಟೆಲಿಮೆಡಿಸಿನ್ ಸೇವೆಯನ್ನು ಕೇರಳದ ವಯನಾಡಿನಲ್ಲಿ ಪ್ರಾರಂಭಿಸಲಾಗಿದೆ. ಟೆಲಿಮೆಡಿಸಿನ್ ಸೇವೆಯ ಪೋಸ್ಟರ್​ ಅನ್ನು ಜಿಲ್ಲಾಧಿಕಾರಿ ಡಾ.ಅಧೀಲಾ ಅಬ್ದುಲ್ಲಾ ಗುರುವಾರ ಬಿಡುಗಡೆ ಮಾಡಿದರು.

In a first, telemedicine service launched in Kerala's Wayanad

author img

By

Published : Apr 24, 2020, 3:58 PM IST

ವಯನಾಡು ( ಕೇರಳ ) : ಜಿಲ್ಲೆಯ ಜನರಿಗೆ ದೂರವಾಣಿ ಮೂಲಕ ಆರೋಗ್ಯ ಮಾಹಿತಿ ನೀಡುವ ಮಲ್ಟಿ-ಸ್ಪೆಷಾಲಿಟಿ ಟೆಲಿಮೆಡಿಸಿನ್ ಸೇವೆಯನ್ನು ಪ್ರಾರಂಭಿಸಲಾಗಿದೆ.

ಕೂಡೆ' (ಜೊತೆಗೆ ) ಎಂಬ ಹೆಸರಿನ ಈ ಸೇವೆಯನ್ನು ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ವಿವಿಧ ವೈದ್ಯಕೀಯ ವಿಶೇಷ ವಿಭಾಗಗಳ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. 'ಕೂಡೆ' ಟೆಲಿಮೆಡಿಸಿನ್ ಸೇವೆಯ ಪೋಸ್ಟರ್​ನ್ನು ಜಿಲ್ಲಾಧಿಕಾರಿ ಡಾ.ಅಧೀಲಾ ಅಬ್ದುಲ್ಲಾ ಗುರುವಾರ ಬಿಡುಗಡೆ ಮಾಡಿದರು. ಪ್ರಸ್ತುತ ಸೇವೆಯಡಿಯಲ್ಲಿ, ಜಿಲ್ಲೆಯ ಜನರು ಯಾವುದೇ ಖಾಯಿಲೆಗಳ ಕುರಿತು ವೈದ್ಯರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಬಹುದಾಗಿದೆ. ವಿಶೇಷ ಸಮಾಲೋಚನೆಗಳು ಲಭ್ಯವಿದೆ.

ರೋಗಿಗಳು ಕೂಡೆ ಸಹಾಯವಾಣಿಗೆ ಕರೆ ಮಾಡಿದರೆ ಸೇವಾ ಸಿಬ್ಬಂದಿ ರೋಗಿಯ ಮಾಹಿತಿ ಪಡೆದು ಸೂಕ್ತ ವೈದ್ಯರನ್ನು ಅವರಿಗೆ ಸಂಪರ್ಕಿಸಿ ಕೊಡುತ್ತಾರೆ. ಬಳಿಕ ರೋಗಿಯು ನೇರವಾಗಿ ವೈದ್ಯರೊಂದಿಗೆ ಮಾತನಾಡಿ, ಆರೋಗ್ಯ ನಿರ್ದೇಶನಗಳನ್ನು ಪಡೆಯಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.