ETV Bharat / bharat

ರಕ್ಷಣಾ ಕ್ಷೇತ್ರದಲ್ಲಿನ ಒಪ್ಪಂದದ ನಿಯಮ ಉಲ್ಲಂಘನೆ‌: ವಿದೇಶಿ ಖರೀದಿದಾರರಿಂದ ಕೇವಲ 2.97 ಕೋಟಿ ರೂ. ದಂಡ ಸಂಗ್ರಹ! - ವಿದೇಶಿ ವ್ಯಾಪಾರಿಗಳು

ರಕ್ಷಣಾ ವಲಯದಲ್ಲಿನ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಇತರೆ ವಿಚಾರಗಳನ್ನು ಮುಂದಿಟ್ಟು ಒಪ್ಪಂದಗಳು ತಡವಾಗಲು ಕಾರಣರಾಗುವ ವಿದೇಶಿ ವ್ಯಾಪಾರಿಗಳಿಗೆ 2018ರವರೆಗೆ 659.99 ಕೋಟಿ ದಂಡ ವಿಧಿಸಲಾಗಿದೆ. ಆದರೆ 2019ರ ಮೇವರೆಗೆ ಈ ದಂಡ ಸಂಗ್ರಹವಾಗಿರುವುದು ಕೇವಲ 2.97 ಕೋಟಿ ಮಾತ್ರ ಎಂದು ಸಿಎಜಿ ವರದಿಯಿಂದ ಬಹಿರಂಗವಾಗಿದೆ.

in-6-yrs-just-0-dot-45-percent-fine-recovered-from-foreign-vendors-in-defence-offset-deals
ಡಿಫೆನ್ಸ್‌ ಆಪ್‌ಸೆಟ್‌ ಡೀಲ್‌; ವಿದೇಶಿ ಖರೀದಿದಾರರಿಂದ ಸಂಗ್ರಹವಾದ ದಂಡ 2.97 ಕೋಟಿ ರೂ.ಮಾತ್ರ
author img

By

Published : Sep 26, 2020, 1:49 PM IST

ನವೆದಹಲಿ: ರಕ್ಷಣಾ ಕ್ಷೇತ್ರದಲ್ಲಿನ ಒಪ್ಪಂದಗಳ ವೇಳೆ ನಿಯಮ ಉಲ್ಲಂಘಿಸಿದ್ದ ವಿದೇಶಿ ವ್ಯಾಪಾರಿಗಳಿಗೆ 2018ರವರೆಗೆ 659.99 ಕೋಟಿ ದಂಡ ವಿಧಿಸಲಾಗಿದೆ. ಆದರೆ 2019ರ ಮೇವರೆಗೆ ಸಂಗ್ರಹವಾಗಿರುವ ದಂಡ ಹಣ ಕೇವಲ 2.97 ಕೋಟಿ ರೂಪಾಯಿ ಅಥವಾ 0.45 ರಷ್ಟು ಮಾತ್ರ ಎಂದು ಸಿಎಂಜಿ (ಲೆಕ್ಕನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ) ವರದಿ ನೀಡಿದೆ.

ಇತ್ತೀಚೆಗೆ 'ಮ್ಯಾನೇಜ್ಮೆಂಟ್‌ ಆಫ್‌ ಡಿಫೆನ್ಸ್‌ ಆಪ್​​‌ಸೆಟ್ಸ್‌' ಕುರಿತು ವರದಿ ನೀಡಿರುವ ಸಿಎಜಿ, ವಿದೇಶಿ ವ್ಯಾಪಾರಿಗಳಿಗೆ 659.99 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಸೇನಾ ಒಪ್ಪಂದಕ್ಕೆ 105.35 ಕೋಟಿ, ವಾಯು ಸೇನೆಯ ಒಪ್ಪಂದಕ್ಕೆ 478.35 ಕೋಟಿ ಹಾಗೂ ನೌಕಾ ದಳದ ಆಪ್‌ಸೆಟ್‌ ಡೀನ್‌ಗಳಿಗೆ 76.29 ಕೋಟಿ ರೂಪಾಯಿಗಳ ದಂಡ ವಿಧಿಸಲಾಗಿದೆ ಎಂದು ಹೇಳಿದೆ.

ತಂತ್ರಜ್ಞಾನ ಹಾಗೂ ಸ್ಥಳೀಯ ಕೈಗಾರಿಕೆಗಳಿಗೆ ಆದ್ಯತೆ ನೀಡುವ ವಿಚಾರದಲ್ಲಿ ಈ ವ್ಯಾಪಾರಿಗಳು ನಿಯಮಗಳನ್ನು ಗಾಳಿಗೆ ತೂರಿ ವಹಿವಾಟು ನಡೆಸಿದ್ದಾರೆ. ಹೀಗಾಗಿ ಈ ವಿದೇಶಿ ಖರೀದಿದಾರರಿಗೆ ದಂಡ ವಿಧಿಸಲಾಗಿದೆ. ಆದರೆ ಸಿಎಜಿ ವರದಿಯಲ್ಲಿ ಪ್ರಮುಖ ರಕ್ಷಣಾ ಒಪ್ಪಂದಗಳ ಬಗ್ಗೆ ಉಲ್ಲೇಖ ಮಾಡಿಲ್ಲ.

ಮೊದಲು ಈ ವ್ಯಾಪಾರಿಗಳು ಪ್ರಮುಖ ಒಪ್ಪಂದಗಳ ಖರೀದಿಯ ಗುರಿ ಹೊಂದಿರುತ್ತಾರೆ. ಬಳಿಕ ಹಲವು ವಿಚಾರಗಳನ್ನು ಮುಂದಿಟ್ಟು ಒಪ್ಪಂದ ತಡವಾಗುವಂತೆ ನೋಡಿಕೊಳ್ಳುತ್ತಾರೆ. ಹೀಗಾಗಿಯ ಮೂರು ಸೇನೆಗಳಲ್ಲಿನ ವಿದೇಶಿ ಖರೀದಿದಾರರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.