ಜೂನ್ 15 ರಂದು 16ನೇ ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಸೇರಿದಂತೆ 20 ಭಾರತೀಯ ಸೈನಿಕರು ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಿ ಪಿಎಲ್‌ಎ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆಯಲ್ಲಿ ಹುತಾತ್ಮರಾದರು. ಭಾರತ ಮತ್ತು ಚೀನಾ ಮಿಲಿಟರಿ ರಾಜತಾಂತ್ರಿಕ ಮಟ್ಟದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರು, ರಕ್ಷಣಾ ಮಂತ್ರಿಗಳು ಮತ್ತು ವಿದೇಶಾಂಗ ಮಂತ್ರಿಗಳೆಲ್ಲರೂ ಸಭೆ ನಡೆಸಿದ್ದಾರೆ. ಉಭಯ ದೇಶಗಳು ಐದು ಅಂಶಗಳ ಒಮ್ಮತ ತಲುಪಿದ ನಂತರವೂ ನೆಲದ ಪರಿಸ್ಥಿತಿ ವಿಶೇಷವಾಗಿ ಪೂರ್ವ ಲಡಾಖ್‌ನಲ್ಲಿ ಕತ್ತಿ ಮೇಲಿನ ನಡಿಗೆಯಂತಾಗಿದೆ.
ಗಾಲ್ವಾನ್ ಘರ್ಷಣೆಯ ನಂತರದ ಬೆಳವಣಿಗೆಗಳು:
ಮಿಲಿಟರಿ ಮಟ್ಟದ ಮಾತುಕತೆ ಮತ್ತು ಸೇನೆ ಹಿಂದೆಸರಿಯುವಿಕೆ ಪ್ರಕ್ರಿಯೆಯನ್ನು ಅನುಸರಿಸುವಲ್ಲಿ ಚೀನಾದ ವೈಫಲ್ಯ:
22.06.2020: ಉದ್ವಿಗ್ನತೆಯನ್ನು ತಗ್ಗಿಸಲು ಭಾರತೀಯ ಮತ್ತು ಚೀನಾದ ಎರಡೂ ಉನ್ನತ ಮಿಲಿಟರಿ ಅಧಿಕಾರಿಗಳು ಮ್ಯಾರಥಾನ್ ಸಭೆ ನಡೆಸಿದರು.
23.06.2020: ಭಾರತೀಯ ಮತ್ತು ಚೀನಾದ ಮಿಲಿಟರಿ ಕಮಾಂಡರ್‌ಗಳು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಅಥವಾ ವಾಸ್ತವಿಕ ನಿಯಂತ್ರಣ ರೇಖೆಯ ಘರ್ಷಣೆ ಪ್ರದೇಶಗಳಿಂದ ಹಿಂದೆ ಸರಿಯಲು ಪರಸ್ಪರ ಒಮ್ಮತ ವ್ಯಕ್ತಪಡಿಸಿದರು.
30.06.2020: ಭಾರತ ಮತ್ತು ಚೀನಾ 3ನೇ ಲೆಫ್ಟಿನೆಂಟ್ ಜನರಲ್ ಮಾತುಕತೆಗಳನ್ನು ಲಡಾಖ್‌ನ ಚುಸುಲ್‌ನಲ್ಲಿ ನಡೆಸಿತು. ಆರ್ಮಿಯು 3 ವಿಭಾಗಗಳು ಮತ್ತು ಟ್ಯಾಂಕ್‌ಗಳನ್ನು ಲಡಾಖ್ ವಲಯಕ್ಕೆ ರವಾನಿಸುವುದರ ಮೂಲಕ ತನ್ನ ಅಸ್ತಿತ್ವವನ್ನು ಲಡಾಖ್ ವಲಯದಲ್ಲಿ ಬಲಪಡಿಸಿತು.
07.07.2020: ಮೂರು ಪ್ರಮುಖ ಹಂತಗಳಲ್ಲಿ ಐಎಎಫ್, ಎಲ್ಲಾ-ಹವಾಮಾನ ಯುದ್ಧ ಕಾರ್ಯಾಚರಣೆಗಳು, ಮಿಗ್-29 ಜೆಟ್‌ಗಳು, ಸುಖೋಯ್ 30ಗಳು, ಅಪಾಚೆ ಮತ್ತು ಚಿನೂಕ್ ಚಾಪರ್‌ಗಳು ಹಗಲು-ರಾತ್ರಿ ಕಾರ್ಯಾಚರಣೆಗಳನ್ನು ಕೈಗೊಳ್ಳುವ ವೇದಿಕೆಗಳನ್ನು ಯೋಜಿಸಿತು.
14.07.2020: ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ನಾಲ್ಕನೇ ಕಮಾಂಡರ್ ಮಟ್ಟದ ಮಾತುಕತೆ. ಎರಡೂ ಕಡೆಯ ಹಿರಿಯ ಕಮಾಂಡರ್‌ಗಳು ಒಂದು ಗಂಟೆ ಸುದೀರ್ಘ ಸಭೆ ನಡೆಸಿದರು.
30.07.2020: ವಿಸರ್ಜನೆ ಪೂರ್ಣಗೊಂಡ ಬಗ್ಗೆ ಚೀನಾದ ನಿಲುವನ್ನು ಭಾರತ ತಿರಸ್ಕರಿಸಿದೆ.
14.08.2020: ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕುರಿತು ಚೀನಾದೊಂದಿಗಿನ ಮಿಲಿಟರಿ ಮಾತುಕತೆಗೆ ತಡೆಯಾಯಿತು. ಭಾರತೀಯ ಸೇನೆಯು ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ)ಯೊಂದಿಗೆ ಪೂರ್ವ ಲಡಾಖ್‌ನಲ್ಲಿ ಯಥಾಸ್ಥಿತಿ ಪುನಾಃ ಸ್ಥಾಪಿಸಲು ಏಪ್ರಿಲ್ ಆರಂಭದಿಂದ ಕಠಿಣ ಪರಿಶ್ರಮ ಪಡುತ್ತಿದೆ.
21.08.2020: ಉತ್ತರಾಖಂಡದ ವಿರುದ್ಧದ ಲಿಪುಲೆಖ್ ಪ್ರದೇಶದಲ್ಲಿ ಮಿಲಿಟರಿ ಮೂಲಸೌಕರ್ಯಗಳ ಮೇಲೆ ಕೆಲಸ ಮಾಡಲು ಚೀನಾ ಹೆಜ್ಜೆ ಹಾಕಿದೆ.
29.08.2020: ಆಗಸ್ಟ್ 29-30ರ ರಾತ್ರಿ, ಪಂಗೊಂಗ್ ತ್ಸೋ ಸರೋವರದ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾದ ಸೈನ್ಯವು 'ಪ್ರಚೋದನಕಾರಿ ಮಿಲಿಟರಿ ಆಂದೋಲನ'ವನ್ನು ಪ್ರಯತ್ನಿಸಿತು.
30.08.2020: ಪಾಂಗೊಂಗ್ ತ್ಸೊದ ದಕ್ಷಿಣ ದಂಡೆಯಲ್ಲಿ ಪಿಎಲ್‌ಎ ಪ್ರಚೋದನಕಾರಿ ಮಿಲಿಟರಿ ಚಲನೆಯನ್ನು ಭಾರತೀಯ ಸೇನೆ ನಿಲ್ಲಿಸಿತು.
02.09.2020: ಉದ್ವಿಗ್ನತೆಯನ್ನು ತಿಳಿಗೊಳಿಸಲು ಉಭಯ ಕಡೆಯ ಬ್ರಿಗೇಡ್ ಕಮಾಂಡರ್ ಶ್ರೇಯಾಂಕದ ಅಧಿಕಾರಿಗಳು ಚುಶುಲ್‌ನಲ್ಲಿ ಮೂರನೇ ಬಾರಿಗೆ ಭೇಟಿಯಾದರು. ಆದರೆ, ಮಾತುಕತೆಗಳು ಅಪ್ರಯೋಜನಕಾರಿಯಾಗಿ ಕೊನೆಗೊಂಡಿತು.
ಪೂರ್ವ ಲಡಾಖ್‌ನ ಮುಂದಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ತನ್ನ ಸೈನಿಕರಿಗೆ ಲಾಜಿಸ್ಟಿಕ್ಸ್ ಬೆಂಬಲವನ್ನು ಒದಗಿಸಲು ಭಾರತ ಚಳಿಗಾಲಕ್ಕೆ ಸಿದ್ಧತೆ ನಡೆಸಿದೆ.
ಲಡಾಖ್ ಭೇಟಿಯ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರ ಹೇಳಿಕೆಗಳು
04.09.2020: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು ವಾಸ್ತವಿಕ ನಿಯಂತ್ರಣ ರೇಖೆಯ(ಎಲ್‌ಎಸಿ) ಪರಿಸ್ಥಿತಿ “ಸೂಕ್ಷ್ಮ ಮತ್ತು ಗಂಭೀರವಾಗಿದ್ದು, ಸೈನ್ಯವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ” ಎಂದು ಹೇಳಿದರು.
ಸಂಭವಿಸಬಹುದಾದ ಎಲ್ಲಾ ಆಕಸ್ಮಿಕಗಳಿಗೆ ಸೈನ್ಯವನ್ನು ಸಿದ್ಧಪಡಿಸಲಾಯಿತು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವು ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು ಬಳಸಿದೆ. ಎಲ್‌ಎಸಿಯ ಉದ್ದಕ್ಕೂ ಯಥಾಸ್ಥಿತಿ ಏಕಪಕ್ಷೀಯವಾಗಿ ಬದಲಾಗುವುದಿಲ್ಲ ಎಂದು ಖಚಿತಪಡಿಸುತ್ತದೆ. “ಎಲ್‌ಎಸಿಯ ಉದ್ದಕ್ಕೂ ಪರಿಸ್ಥಿತಿ ಉದ್ವಿಗ್ನವಾಗಿದೆ. ನಾವು ಕೆಲವು ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ನಿಯೋಜನೆಯನ್ನು ಕೈಗೊಂಡಿದ್ದೇವೆ. ಉದ್ಭವಿಸಬಹುದಾದ ಎಲ್ಲಾ ಆಕಸ್ಮಿಕಗಳಿಗೆ ಸೈನ್ಯವನ್ನು ಸಿದ್ಧಪಡಿಸಲಾಗಿದೆ.
ಚೀನಾದ ಆಕ್ರಮಣಕ್ಕೆ ಸರ್ಕಾರದ ಪ್ರತಿಕ್ರಿಯೆಗಳು:
20.06.2020: ಯುದ್ಧತಂತ್ರದ ಮಟ್ಟದಲ್ಲಿ ಸಂದರ್ಭಗಳನ್ನು ನಿಭಾಯಿಸಲು ಎಲ್‌ಎಸಿಯ ಉದ್ದಕ್ಕೂ ನಿಯೋಜಿಸಲಾಗಿರುವ ಕಮಾಂಡರ್‌ಗಳಿಗೆ ಭಾರತ ಸ್ಪರ್ಧಾತ್ಮಕ ರೇಖೆಯ ನಿಶ್ಚಿತ ನಿಯಮಗಳನ್ನು ಬದಲಾಯಿಸಿತು.
01.07.2020: ಭಾರತೀಯ ಹೆದ್ದಾರಿ ಯೋಜನೆಗಳಲ್ಲಿ ಭಾಗವಹಿಸಲು ಚೀನಾದ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ. ಭಾರತದ ಹೂಡಿಕೆ, ಎಂಎಸ್‌ಎಂಇ ವಲಯ, ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ನಿರುತ್ಸಾಹಗೊಳಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದರು.
29.06.2020: ಭಾರತ ಸರ್ಕಾರವು ಚೀನಾದ ಅತಿ ಹೆಚ್ಚು ಬಳಕೆಯಲ್ಲಿದ್ದ ಟಿಕ್‌ಟಾಕ್, ಯುಸಿ ಬ್ರೌಸರ್ ಮತ್ತು ವೀಚಾಟ್ ಸೇರಿ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.
02.09.2020: ವ್ಯಾಪಕವಾಗಿ ಜನಪ್ರಿಯ ಆಟಗಳಾದ PUBG ಸೇರಿ 118 ಚೀನಾ-ಲಿಂಕ್ಡ್ ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತ ನಿಷೇಧಿಸಿತು.
ಪಿಎಂ ನರೇಂದ್ರ ಮೋದಿಯವರ ಹೇಳಿಕೆಗಳು:
17.06.2020: ಲಡಾಖ್‌ನಲ್ಲಿ ಚೀನಾದ ಪಿಎಲ್‌ಎ ತಂಡ ಭಾರತೀಯ ಸೈನಿಕರನ್ನು ಹತ್ಯೆಗೈದ ಬಗ್ಗೆ ಸೂಕ್ತ ಉತ್ತರ ನೀಡುವ ಭರವಸೆ ನೀಡಿದ್ದ ಮೋದಿಯವರು, ಹುತಾತ್ಮರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಹೇಳಿದ್ದರು.
ಸರ್ವ ಪಕ್ಷೀಯ ಸಭೆಯಲ್ಲಿ ನರೇಂದ್ರ ಮೋದಿ ಹೇಳಿಕೆ:
19.06.2020: ಸರ್ವ ಪಕ್ಷೀಯ ಸಭೆಯಲ್ಲಿ ಪ್ರಧಾನಮಂತ್ರಿಯವರು, ಯಾರೂ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿಲ್ಲ ಅಥವಾ ಪ್ರಸ್ತುತ ಭಾರತೀಯ ಭೂಪ್ರದೇಶದಲ್ಲಿ ಯಾರೂ ಇಲ್ಲ ಮತ್ತು ಯಾವುದೇ ಭಾರತೀಯ ಭೂಮಿ ವಶಪಡಿಸಿಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.
28.06.2020: ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಭಾರತವು ಸ್ನೇಹವನ್ನು ಗೌರವಿಸುತ್ತದೆ. ಆದರೆ, ಅದರ ಭೂಪ್ರದೇಶದ ಮೇಲೆ ಕೆಟ್ಟ ಕಣ್ಣಿಟ್ಟಿರುವವರಿಗೆ ಸೂಕ್ತ ಪ್ರತಿಕ್ರಿಯೆ ದಕ್ಕಿಸುತ್ತದೆ ಎಂದು ಹೇಳಿದ್ದಾರೆ.
03.07.2020: 'ವಿಸ್ತರಣೆಯ ಯುಗ ಮುಗಿದಿದೆ' ಎಂದು ಲಡಾಖ್ ಅನಿರೀಕ್ಷಿತ ಭೇಟಿಯ ವೇಳೆ ಮೋದಿ ಹೇಳಿಕೆ ನೀಡಿದ್ದರು.
15.08.2020: ಎಲ್‌ಒಸಿಯಿಂದ ಎಲ್‌ಎಸಿ ವರೆಗೆ ಪ್ರತಿಕ್ರಿಯಿಸಲು ಪಡೆಗಳು ಸಿದ್ಧವಾಗಿವೆ ಎಂದು ಪಿಎಂ ಹೇಳಿದ್ದರು.
14.09.20: ಗಡಿ ಭೂಪ್ರದೇಶದ ಕಷ್ಟದ ಸಮಯದಲ್ಲಿ ಧೈರ್ಯದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಸೈನಿಕರೊಂದಿಗೆ ಅವರಿದ್ದಾರೆ ಎಂಬ ಸಂದೇಶವನ್ನು ರವಾನಿಸುವಂತೆ ಪ್ರಧಾನಿ ಸಂಸದರನ್ನು ಕೋರಿದ್ದಾರೆ.
ರಕ್ಷಣಾ ಸಚಿವರ ಹೇಳಿಕೆಗಳು:
17.07.2020: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೆಸ್ಟರ್ನ್ ಬ್ಯಾಂಕ್ ಆಫ್ ಲಡಾಖ್‌ನ ಪಾಂಗೊಂಗ್ ತ್ಸೋ ದಲ್ಲಿನ ಲುಕುಂಗ್‌ನಲ್ಲಿ ಲಡಾಖ್ ಸೈನಿಕರನ್ನು ಭೇಟಿ ಮಾಡಿದರು.
15.09.20: ಚೀನಾದೊಂದಿಗಿನ ಗಡಿ ಉದ್ವಿಗ್ನತೆ ಕುರಿತು ಸರ್ಕಾರದ ಮೊದಲ ಹೇಳಿಕೆಯಲ್ಲಿ ರಕ್ಷಣಾ ಸಚಿವರು ಎಲ್‌ಎಸಿಯಲ್ಲಿ ಯಥಾಸ್ಥಿತಿ ಬದಲಿಸಲು ಚೀನಾ ಏಕಪಕ್ಷೀಯವಾಗಿ ಪ್ರಯತ್ನಿಸುತ್ತಿದೆ ಎಂದು ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದಾರೆ.
ಬಿಕ್ಕಟ್ಟಿನ ಉಲ್ಬಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವಿನ ಐದು ಅಂಶಗಳ ಒಮ್ಮತ:
10.09.2020: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಅವರ ಚೀನಾದ ಪ್ರತಿನಿಧಿ ವಾಂಗ್ ಯಿ ನಿರ್ಣಾಯಕ ಸಭೆ ನಡೆಸಿದರು. ಈ ಉದ್ವಿಗ್ನತೆಯನ್ನು ತಣ್ಣಗಾಗಿಸಲು 2 ಗಂಟೆಗಳ ಕಾಲವೇ ಬೇಕಾಯಿತು.
11.09.2020: ಸೈನ್ಯವನ್ನು ನಿಯೋಜಿಸುವುದು ಮತ್ತು ಉದ್ವಿಗ್ನತೆಯನ್ನು ಸರಾಗಗೊಳಿಸುವಿಕೆ ಸೇರಿದಂತೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಉಂಟಾಗುವ ಸಮಸ್ಯೆಯನ್ನು ಪರಿಹರಿಸಲು ಭಾರತ ಮತ್ತು ಚೀನಾ ಐದು ಅಂಶಗಳ ನಕ್ಷೆಯನ್ನು ಅಂತಿಮಗೊಳಿಸಿದೆ.