ಹೈದರಾಬಾದ್ : ಲಾಕ್ಡೌನ್ ಹೇರಿದ್ರಿಂದ ಯುವಕ-ಯುವತಿಯರು, ಮಕ್ಕಳು, ವೃದ್ಧರೆಲ್ಲ ಕೆಲಸವಿಲ್ಲದೇ ಸಮಯದೂಡಲು ಹೆಣಗಾಡುತ್ತಿದ್ದಾರೆ. ಯುವಕರಂತೂ ಜಿಮ್ ಓಪನ್ ಆಗಲ್ಲಾ ಅಂತಾ ವರ್ಕೌಟ್ ಟೆನ್ಷನ್‌ನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇಲ್ಲೊಂದಿಷ್ಟು ವಿಡಿಯೋಗಳಿವೆ ನೋಡಿ.. ಇದನ್ನು ನೋಡಿದ್ರೆ ವಯಸ್ಸಾದವರಷ್ಟೇ ಅಲ್ಲಾ.. ಯುವಕರೂ ಕೂಡಾ ನಾಚ್ಕೋಬೇಕು. ಇವರು ಉಷಾ ಸೋಮನ್. ಖ್ಯಾತ ನಟ, ಮಾಡೆಲ್ ಆಗಿರುವ ಮಿಲಿಂದ್ ಸೋಮನ್ ಅವರ ತಾಯಿ. ಇವರ ವಯಸ್ಸು 81. ಆದರೆ, ಇನ್ನೂ 18ರ ಯುವಕರಲ್ಲೂ ಇರದ ಹುರುಪು, ಶಕ್ತಿ, ತಾಕತ್ತು ಎಲ್ಲಾ ಇವರಲ್ಲಿ ತುಂಬಿದೆ. ತಮ್ಮ ಮಗನ ಜತೆಗೆ ಡಿಪ್ಸ್ ಹೊಡೆಯಲು ಕಾಂಪಿಟೇಷನ್ ಕೊಟ್ಟಿದ್ದಾರೆ ಈ 'ತರುಣಿ ಅಜ್ಜಿ'. ಅದು ಕೂಡಾ ಸೀರೆಯುಟ್ಟುಕೊಂಡೇ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 16 ಡಿಪ್ಸ್‌ನ ಸತತವಾಗಿ ತೆಗೆದು ಯುವಕರಿಗೂ ಚಾಲೆಂಜ್ ಹಾಕಿದ್ದಾರೆ.
-
It's never too late.
— Milind Usha Soman (@milindrunning) May 12, 2019 " class="align-text-top noRightClick twitterSection" data="
Usha Soman, my mother.
80 years young.#mothersday #love #mom #momgoals #fitwomen4fitfamilies #fitness #fitnessmotivation #healthylifestyle #fitterin2019 #livetoinspire make every day mother's day!!!!! 😃😃😃 pic.twitter.com/7aPS0cWxlR
">It's never too late.
— Milind Usha Soman (@milindrunning) May 12, 2019
Usha Soman, my mother.
80 years young.#mothersday #love #mom #momgoals #fitwomen4fitfamilies #fitness #fitnessmotivation #healthylifestyle #fitterin2019 #livetoinspire make every day mother's day!!!!! 😃😃😃 pic.twitter.com/7aPS0cWxlRIt's never too late.
— Milind Usha Soman (@milindrunning) May 12, 2019
Usha Soman, my mother.
80 years young.#mothersday #love #mom #momgoals #fitwomen4fitfamilies #fitness #fitnessmotivation #healthylifestyle #fitterin2019 #livetoinspire make every day mother's day!!!!! 😃😃😃 pic.twitter.com/7aPS0cWxlR
ಈ ವಿಡಿಯೋವನ್ನು ಮಿಲಿಂದ್ ಸೋಮನ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ತಮ್ಮ ಅಮ್ಮನನ್ನು ಹಾಡಿ ಹೊಗಳಿದ್ದಾರೆ. ಸದ್ಯ ಮನೆಯಲ್ಲೇ ಯುವಕರೆಲ್ಲಾ ಕೂತಿರೋ ಈ ಸಮಯದಲ್ಲಿ ಈ ವಿಡಿಯೋ ನೋಡೋದು ತುಂಬಾ ಸೂಕ್ತ.
28ರ ಸೊಸೆಗೆ 81ರ ಅತ್ತೆಯಿಂದ ಒಂಟಿ ಕಾಲು ಓಟದ ಪಾಠ: ಈ ಇನ್ನೊಂದ್ ವಿಡಿಯೋವನ್ನೂ ನೋಡಿಬಿಡಿ. ಚಡ್ಡಿ ಹಾಕಿರುವ ಈ ಮಹಿಳೆ ಅಂಕಿತಾ ಕೊನ್ವಾರ್. ಮಿಲಿಂದ್ ಸೋಮನ್ ಅವರ ಪತ್ನಿ. ಇವರ ವಯಸ್ಸು 28. ಹಾಗೇ ಇದೇ ವಿಡಿಯೋದಲ್ಲಿರೋ ಮತ್ತೊಬ್ಬರು ಸೋಮನ್ ಅವರ ತಾಯಿ. 16 ಡಿಪ್ಸ್ ತೆಗೆದ್ರಲ್ಲಾ ಅವ್ರೇ.. ಅದೆಷ್ಟು ಮುದ್ದಾಗಿ ತನ್ನ ಸೊಸೆಗೆ ಒಂಟಿ ಕಾಲು ಓಟವನ್ನ ಕಲಿಸ್ತಿದ್ದಾರೆ ನೋಡಿ. ಇದು ಪಕ್ಕಾ 28 ಮತ್ತು 81ರ ವಯಸ್ಸಿನ ಡಿಫರೆನ್ಸ್. ಇಲ್ಲಿ 28ರ ಸೊಸೆಗಿಂತ 81ರ ಯಂಗ್ ಅತ್ತೆ ವೇಗವಾಗಿ ಒಂಟಿ ಕಾಲು ಓಟದಲ್ಲಿ ಓಡಿದ್ದಾರೆ. ಈ ವಿಡಿಯೋವನ್ನು ಮಿಲಿಂದ್ ಸೋಮನ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ '28 ಮತ್ತು 81! ಎಲ್ಲಾ ವಯಸ್ಸಿನಲ್ಲೂ ದೈಹಿಕ ಕ್ಷಮತೆ ಇರುತ್ತೆ' ಎಂದು ಕ್ಯಾಪ್ಷನ್ ನೀಡಿದ್ದಾರೆ.
-
28 and 81 ! Fit at every age 😃 My girls :) @5Earthy #UshaSoman pic.twitter.com/u1wk41Y1Ww
— Milind Usha Soman (@milindrunning) April 4, 2020 " class="align-text-top noRightClick twitterSection" data="
">28 and 81 ! Fit at every age 😃 My girls :) @5Earthy #UshaSoman pic.twitter.com/u1wk41Y1Ww
— Milind Usha Soman (@milindrunning) April 4, 202028 and 81 ! Fit at every age 😃 My girls :) @5Earthy #UshaSoman pic.twitter.com/u1wk41Y1Ww
— Milind Usha Soman (@milindrunning) April 4, 2020
ಮನೆಯಲ್ಲಿ ಲಾಕ್ಡೌನ್ನಲ್ಲಿ ಕೂತು ಏನ್ ಮಾಡೋದು ಅಂತಾ ಯೋಚನೆ ಮಾಡ್ಬೇಡಿ. ನಿಮ್ಮ ದೇಹವನ್ನ ದಂಡಿಸಿ ಫಿಟ್ ಆಗೋ ಕಡೆ ಸ್ವಲ್ಪ ಗಮನ ಹರಿಸಿ. ನಿಮ್ಗೆ ಇದು ಕಷ್ಟವಾದ್ರೆ ಈ ಯಂಗ್ ಅಜ್ಜಿಯ ವಿಡಿಯೋ ಒಮ್ಮ ನೋಡಿ..