ಮಧ್ಯಪ್ರದೇಶ : ದಶಕಗಳಿಂದ ಊರಿನಲ್ಲಿ ಕುಡಿಯೋ ನೀರಿನ ಸಮಸ್ಯೆಯಿದೆ. ಈವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ಈ ಸಾರಿ ಊರಿನಲ್ಲಿ ಕೆರೆ ನಿರ್ಮಿಸಿದ್ರೇ ಮಾತ್ರ ಮತದಾನ ಮಾಡ್ತೇವೆ. ಇಲ್ಲದಿದ್ರೇ ಮತದಾನ ಬಹಿಷ್ಕರಿಸುತ್ತೇವೆ ಅಂತಾ ಮಧ್ಯಪ್ರದೇಶದ ದಾಮೋಹ ಜಿಲ್ಲೆ ಸಮುದಾಯ್ ಗ್ರಾಮದ ಜನ ಎಚ್ಚರಿಸಿದ್ದಾರೆ.
ಸಮುದಾಯ್ ಗ್ರಾಮದ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಆದರೆ, ಚುನಾವಣೆ ಸಮೀಪಿಸುತ್ತಿದ್ದರೂ ಇನ್ನೂ ಕೂಡ ತಮ್ಮ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಈ ಊರಿನ ಜನ. ನೀರಿನ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನೆ ಮಾಡಿದ ಗ್ರಾಮಸ್ಥರು, ಕೆರೆ ನಿರ್ಮಿಸಿದರೆ ಮಾತ್ರ ವೋಟ್ ಹಾಕುತ್ತೇವೆ. ಇಲ್ಲದೇ ಹೋದರೆ ಚುನಾವಣೆಯನ್ನ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಇಷ್ಟಾದರೂ ಈವರೆಗೂ ಯಾವೊಬ್ಬ ಅಧಿಕಾರಿಯೂ ಊರ ಜನರ ಮನವೊಲಿಸಲು ಬಂದಿಲ್ಲ.