ನವದೆಹಲಿ: ಆಗಸ್ಟ್ 15 ರೊಳಗೆ ಭಾರತದ ಕೋವಿಡ್ ಲಸಿಕೆ 'ಕೊವಾಕ್ಸಿನ್' ಬಿಡುಗಡೆ ಮಾಡುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನಿರ್ಧಾರ ಅವೈಜ್ಞಾನಿಕವಾದದ್ದು ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅಭಿಪ್ರಾಯ ಪಟ್ಟಿದ್ದಾರೆ.
ಮಹಾಭಾರತ ಯುದ್ಧ 18 ದಿನಗಳಲ್ಲಿ ಮುಗಿದಂತೆ, ಈಗ 21 ದಿನಗಳು ಕಾದು ನೋಡಿ. ದನದ ಸಗಣಿಯು ಕ್ಯಾನ್ಸರ್ ರೋಗಿಯನ್ನು ಗುಣಪಡಿಸಿದಂತೆ, ಶಸ್ತ್ರಚಿಕಿತ್ಸೆಯಲ್ಲಿ ಪವಾಡಗಳು ನಡೆಯುವಂತೆ, 'ಗೋ ಕೊರೊನಾ ಗೋ' ಎನ್ನುವಂತೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇಂತಹ ಮನಸ್ಥಿತಿಗಳ ಮೂಲಕ ಯುದ್ಧಗಳನ್ನು ಗೆಲ್ಲಲು ಸಾಧ್ಯವಿಲ್ಲ. ಐಸಿಎಂಆರ್ನ ನಿರ್ಧಾರ ಅವೈಜ್ಞಾನಿಕವಾದದ್ದು ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.
-
Unscientific gaffes :
— Kapil Sibal (@KapilSibal) July 6, 2020 " class="align-text-top noRightClick twitterSection" data="
ICMR claim : COVID 19 vaccine by August 15
Mahabharat over in 18 days ; wait 21 days and this war will be won
Chants of : Carona go , Caron go ....
Cow dung cures cancer
Ganesh’s head : miracle of surgery
Such mindsets can never provide solutions
">Unscientific gaffes :
— Kapil Sibal (@KapilSibal) July 6, 2020
ICMR claim : COVID 19 vaccine by August 15
Mahabharat over in 18 days ; wait 21 days and this war will be won
Chants of : Carona go , Caron go ....
Cow dung cures cancer
Ganesh’s head : miracle of surgery
Such mindsets can never provide solutionsUnscientific gaffes :
— Kapil Sibal (@KapilSibal) July 6, 2020
ICMR claim : COVID 19 vaccine by August 15
Mahabharat over in 18 days ; wait 21 days and this war will be won
Chants of : Carona go , Caron go ....
Cow dung cures cancer
Ganesh’s head : miracle of surgery
Such mindsets can never provide solutions
ತ್ವರಿತಗತಿಯಲ್ಲಿ ಕೋವಿಡ್ ಲಸಿಕೆ 'ಕೊವಾಕ್ಸಿನ್'ನ ಕ್ಲಿನಿಕಲ್ ಪ್ರಯೋಗವನ್ನು ಕೈಗೊಂಡು, ಇದರ ಫಲಿತಾಂಶವನ್ನು ಆಗಸ್ಟ್ 15ರ ಒಳಗಾಗಿ ಬಿಡುಗಡೆ ಮಾಡುವಂತೆ ಕೋರಿ ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಅವರು ಭಾರತ್ ಬಯೋಟೆಕ್ ಮತ್ತು ವೈದ್ಯಕೀಯ ಕಾಲೇಜುಗಳ ಪ್ರಧಾನ ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದನ್ನು ಕಪಿಲ್ ಸಿಬಲ್ ಇದೀಗ ಟೀಕಿಸಿದ್ದಾರೆ.
ಕೊವಾಕ್ಸಿನ್:
ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾಗೆ ಈವರೆಗೆ ಯಾವುದೇ ಪ್ರತ್ಯೇಕ ಲಸಿಕೆ ಕಂಡು ಹಿಡಿಯಲಾಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಭಾರತ್ ಬಯೋಟೆಕ್, ಐಸಿಎಂಆರ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಕೊವಾಕ್ಸಿನ್ ಲಸಿಕೆ ಕಂಡು ಹಿಡಿಯಲಾಗಿದೆ.
ಕೊವಾಕ್ಸಿನ್ನ ಕ್ಲಿನಿಕಲ್ ಪ್ರಯೋಗಕ್ಕಾಗಿ ಭಾರತ್ ಬಯೋಟೆಕ್ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜೆಐ), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಇದು ಕೋವಿಡ್ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗ ನಡೆಸಲಿದ್ದು, ಆ.15 ರೊಳಗೆ ಇದರ ಫಲಿತಾಂಶ ಬಿಡುಗಡೆ ಮಾಡಲಿದೆ.